ವಿಶ್ವದಲ್ಲಿ ಶೇ 40ರಷ್ಟು ಗಂಡಸರು ಮಕ್ಕಳಾಗದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಮಾನವನ ಬಿಡುವಿಲ್ಲದ ಜೀವನಶೈಲಿ. ಅಪೌಷ್ಠಿಕ ಆಹಾರ ಸೇವನೆ ಇವೇ ಮುಂತಾದ ಕಾರಣಗಳಿವೆ. ಜಂಕ್ ಫುಡ್, ಕುಡಿತ, ಧೂಮಪಾನ ಎಲ್ಲವೂ ಗಂಡಸರ ಪುರುಷತ್ವ ಸಮಸ್ಯೆಗೆ ಕಾರಣ. ಇದರಿಂದ ವೀರ್ಯಾಣು ಸಂಖ್ಯೆ ಕುಗ್ಗುವುದು, ಸೂಕ್ತವಾಗಿ ಲೈಂಗಿಕ ಕ್ರಿಯೆ ನಡೆಸಲಾಗದಿರುವುದರಿಂದ ಗಂಡಸರು ಸಮಸ್ಯೆಗೆ ಸಿಲುಕುತ್ತಾರೆ. ಹಾಗಂತ ತಲೆಕೆಡಿಸಿಕೊಂಡು ಕೂರುವ ಅಗತ್ಯವಿಲ್ಲ. ಗಂಡಸರ ಕುಗ್ಗಿದ ಶಕ್ತಿಯನ್ನ ವೃದ್ಧಿಗೊಳಿಸಲು ಅಮೃತದಂತಹ ಆಹಾರ ಪದಾರ್ಥಗಳೂ ಪ್ರಕೃತಿಯಲ್ಲಿವೆ. ಅವು ಯಾವು..? ಅವುಗಳ ಮಹತ್ವವೇನು..? ಇಲ್ಲಿದೆ ನೋಡಿ..
ಕುಂಬಳಕಾಯಿ ಬೀಜ: ಕುಂಬಳಕಾಯಿ ಬೀಜದಲ್ಲಿ ಹೇರಳವಾಗಿರುವ ಜಿಂಕ್(ಸತು) ಪುರುಷರ ವೀರ್ಯಾಣು ಪ್ರಮಾಣವನ್ನ ಹೆಚ್ಚಿಸುತ್ತವೆ. ಇದರಲ್ಲಿರುವ ಒಮೇಗಾ ಫ್ಯಾಟಿ ಆಸಿಡ್ ಲೈಂಗಿಕ ಅಂಗಕ್ಕೆ ರಕ್ತ ಸರಾಗವಾಗಿ ಸರಬರಾಜಾಗುವಂತೆ ಮಾಡುತ್ತದೆ.
ದಾಳಿಂಬೆ: ದಾಳಿಂಬೆಯಲ್ಲಿರುವ ಆಂಟಿಆಕ್ಸಿಡೆಂಟ್ಸ್(antioxidants) ಜನನಾಂಗದಿಂದ ವೀರ್ಯಾಣು ತನ್ನ ಸಾಮರ್ಥ್ಯ ಕಳೆದುಕೊಂಡು ಹಾಳಾಗುವದನ್ನ ತಡೆಯುತ್ತದೆ. ಜೊತೆಗೆ ಜನನಾಂಗಕ್ಕೆ ರಕ್ತಪರಿಚನೆ ಹೆಚ್ಚಿಸುವ ದಾಳಿಂಬೆ, ಜನನಾಂಗದ ನಿಮಿರುವಿಕೆ ಸಮಸ್ಯೆಯನ್ನು ನಿವಾರಿಸುತ್ತೆ.
ಚಿಪ್ಪು ಮೀನು(Oysters): ಚಿಪ್ಪು ಮೀನು ಮೇಲಿನ ಎಲ್ಲ ಆಹಾರಗಳಿಗಿಂತಲೂ ಪರಿಣಾಮಕಾರಿ. ಇದರಲ್ಲಿರುವ ಆಫ್ರೊದಿಸಿಯಾಕ್ಸ್(aphrodisiacs) ಎಂಬ ಕಾಮೋತ್ತೇಜಕ ಅಂಶ ಪುರುಷರ ಲೈಂಗಿಕ ಶಕ್ತಿಯನ್ನು ವೃದ್ಧಿಸುತ್ತದೆ. ಇವುಗಳನ್ನು ಅಧಿಕ ಪ್ರಮಾಣದ ಜಿಂಕ್ ಇರುವುದರಿಂದ ಜನನಾಂಗದ ರಕ್ತ ಪರಿಚಲನೆ ವೃದ್ಧಿಯಾಗುತ್ತದೆ. ದಿನಕ್ಕೆ 15 ಮಿಲಿ ಗ್ರಾಂನಷ್ಟು ಚಿಪ್ಪು ಮೀನನ್ನ ತಿನ್ನುವುದರಿಂದ ನೈಸರ್ಗಿಕ ಮತ್ತು ಕೆಮಿಕಲ್`ನಿಂದಾಗಿ ವೀರ್ಯಾಣು ಡ್ಯಾಮೇಜ್ ಆಗುವದನ್ನ ತಡೆಯುತ್ತದೆಯಂತೆ.
ಶತಾವರಿ (Asparagus): ಮಧ್ಯಯುಗದಲ್ಲಿ ಈ ಶತಾವರಿಯನ್ನ ಪುರುಷ ಮತ್ತು ಮಹಿಳೆ ಇಬ್ಬರಿಗೂ ಮಕ್ಕಳಾಗದ ಸಮಸ್ಯೆಗೆ ಚಿಕಿತ್ಸೆ ಕೊಡಲು, ಲೈಂಗಿಕ ಸಾಮರ್ಥ್ಯ ವೃದ್ಧಿಸಲು ಬಳಸಲಾಗುತ್ತಿತ್ತಂತೆ. ಇದರಲ್ಲಿರುವ ವಿಟಮಿನ್-ಸಿ ಸೆಕ್ಸ್`ಗೆ ಅನುಕೂಲವಾಗುವ ಹಾರ್ಮೋನ್ ಉತ್ಪಾದನೆ ಮತ್ತು ವೀರ್ಯಾಣು ಸಂಖ್ಯೆ ವೃದ್ಧಿಸುತ್ತಂತೆ.
ಇಷ್ಟೇ ಅಲ್ಲ, ದಿನನಿತ್ಯ ಬಳಸುವ ಹಲವು ಹಣ್ಣು, ತರಕಾರಿಗಳು ಸಹ ನಿಮ್ಮ ಪುರುಷತ್ವ ಸಮಸ್ಯೆ ನಿವಾರಿಸಲು ಅನುಕೂಲವಾಗುತ್ತವೆ. ದಿನಕ್ಕೆ ಸೇಬು ತಿಂದರೆ ವೀರ್ಯಾಣು ವೃದ್ಧಿಯಾಗುತ್ತದೆಯಂತೆ. ಬಾಳೆಹಣ್ಣನ್ನ ಸಹ ಲೈಂಗಿಕ ಕ್ರಿಯೆಯ ಸೂಪರ್ ಫುಡ್ ಎಂದೇ ಕರೆಯಲಾಗುತ್ತೆ. ಟೊಮೆಟೋ ಸಹ ಲೈಂಗಿಕ ಶಕ್ತಿ ವೃದ್ಧಿಗೆ ಸಹಶಯ ಮಾಡುತ್ತೆ ಅಂತಾರೆ ತಜ್ಞರು.
Comments are closed.