ನವದೆಹಲಿ: ದೆಹಲಿಯ ರಸ್ತೆಗಿಳಿಯಲು ಡೀಸೆಲ್ ಎಸ್ ಯುವಿ ಗಳಿಗೆ ಸುಪ್ರೀಂ ಕೋರ್ಟ್ ಷರತ್ತು ಬದ್ಧ ಅನುಮತಿ ನೀಡಿದೆ. ಡೀಸೆಲ್ ಎಸ್ ಯುವಿಯಿಂದ ವಾಯುಮಾಲಿನ್ಯ ಉಂಟಾಗುವ ಹಿನ್ನೆಲೆಯಲ್ಲಿ ಗ್ರೀನ್ ಫೈನ್ ನ್ನು ಎಸ್ ಯು ವಿಗಳ ಉತ್ಪಾದಕರು ಅಥವಾ ಡೀಲರ್ ಗಳು ಪಾವತಿಸಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಶೋರೂಮ್ ಬೆಲೆಯ ಶೇ.1 ರಷ್ಟನ್ನು ಸರ್ಕಾರಿ ಸ್ವಾಮ್ಯದ ಬ್ಯಾಂಕ್ ನಲ್ಲಿ ಜಮಾ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕಳೆದ ಡಿಸೇಂಬರ್ ನಲ್ಲಿ ದೆಹಲಿಯಲ್ಲಿ 2000 ಸಿಸಿ ಅಥವಾ ಅದಕ್ಕಿಂತ ಹೆಚ್ಚು ಸಾಮರ್ಥ್ಯದ ಎಸ್ ಯುವಿಗಳಿಗೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ನಿಷೇಧ ವಿಧಿಸಿತ್ತು.
ಕೋರ್ಟ್ ನ ಆದೇಶವನ್ನು ಪ್ರಶ್ನಿಸಿದ್ದ ಎಸ್ ಯು ವಿ ಉತ್ಪಾದಕ ಸಂಸ್ಥೆಗಳು ತಮ್ಮ ಉದ್ಯಮಕ್ಕೆ ಕೋರ್ಟ್ ಆದೇಶದಿಂದ ಹೊಡೆತ ಬೀಳಲಿದೆ ಎಂದು ವಾದಿಸಿದ್ದವು. ದೆಹಲಿಯ ಒಂದರಲ್ಲೇ ದೇಶದ ಒಟ್ಟಾರೆ ಇರುವ ಮಾರಾಟದ ಕಾಲುಭಾಗದಷ್ಟು ಎಸ್ ಯುವಿ ವಾಹನಗಳ ಮಾರಾಟವನ್ನು ಹೊಂದಿರುವ ಮರ್ಸಿಡಿಸ್ ಬೆನ್ಜ್ ಸಂಸ್ಥೆ ಕೋರ್ಟ್ ಗೆ ಮನವಿ ಮಾಡಿದ್ದ ಬಳಿಕ ಸುಪ್ರೀಂ ಕೋರ್ಟ್ ದೆಹಲಿಯಲ್ಲಿ ಎಸ್ ಯೂವಿಗಳಿಗೆ ವಿಧಿಸಿದ್ದ ನಿಷೇಧವನ್ನು ಹಿಂಪಡೆದಿದೆ. ಆದರೆ ಸುಪ್ರೀಂ ಕೋರ್ಟ್ ಹೊಸ ಗ್ರೀನ್ ಸೆಸ್ ನ್ನು ವಿರೋಧಿಸಿದ್ದು, ಹೊಸ ರೀತಿಯ ತೆರಿಗೆಯನ್ನು ಸಂಸತ್ ಮಾತ್ರ ಅನುಮೋದಿಸಬಹುದು ಎಂದು ಹೇಳಿದೆ.
Comments are closed.