ಕರಾವಳಿ

ಬ್ಯಾಂಕ್ ಲಾಕರ್‌ನಲ್ಲಿರಿಸಿದ ಗ್ರಾಹಕರ ಚಿನ್ನಾಭರಣ ಕಾಣೆ :ಬ್ಯಾಂಕಿನ ವಿರುದ್ಧ ದೂರು ದಾಖಲು

Pinterest LinkedIn Tumblr

gold

File Photo

ಮಂಗಳೂರು, ಆ. 14: ಬ್ಯಾಂಕ್ ಲಾಕರ್‍‌ನಲ್ಲಿ ಇರಿಸಲಾಗಿದ್ದ ಚಿನ್ನಾಭರಣ ಕಾಣೆಯಾಗಿರುವ ಘಟನೆಯೊಂದು ಮಂಗಳೂರಿನಲ್ಲಿ ನಡೆದಿದ್ದು, .ಬ್ಯಾಂಕಿನ ಅಧಿಕಾರಿಗಳ ವಿರುದ್ಧವೇ ದೂರು ದಾಖಲಾಗಿದೆ.

ನಗರದ ಕೆ.ಎಸ್.ರಾವ್ ರಸ್ತೆಯ ಜಮ್ಮು ಕಾಶ್ಮೀರ ಎಂಬ ಹೆಸರಿನ ಬ್ಯಾಂಕ್ ಲಾಕರ್‍‌ನಲ್ಲಿ ಇರಿಸಲಾಗಿದ್ದ 103 ಪವನ್ ಬಂಗಾರ ಕಾಣೆಯಾಗಿರುವ ಬಗ್ಗೆ ಮಹಿಳೆಯೋರ್ವರು ಬಂದರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮಂಗಳೂರು ನಿವಾಸಿ ಹಸೀನಾ ಕರೀಂ ಎಂಬವರು ಹಂಪನಕಟ್ಟ ಕೆ.ಎಸ್.ರಾವ್ ರಸ್ತೆಯ ಪೂಂಜಾ ಆರ್ಕೆಟ್ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಜಮ್ಮುಕಾಶ್ಮೀರ ಎಂಬ ಹೆಸರಿನ ಬ್ಯಾಂಕ್ನಲ್ಲಿ ಲಾಕರ್‍‌  ಹೊಂದಿದ್ದರು. ಈ ಲಾಕರ್ನಲ್ಲಿ ಹಸೀನಾ ಅವರು 103 ಪವನ್ ಚಿನ್ನಾಭರಣಗಳನ್ನು ಇಟ್ಟಿದ್ದರು.

ಈ ಸಂದರ್ಭದಲ್ಲಿ ಹಸೀನಾ ಲಾಕರ್‍‌ನ ಕೀಯನ್ನು ಕಳೆದುಕೊಂಡಿದ್ದರು. ಲಾಕರ್ನ ಒಂದು ಕೀ ಹಸೀನಾರ ಬಳಿ ಇದ್ದರೆ, ಇನ್ನೊಂದು ಕೀ ಬ್ಯಾಂಕ್ನವರ ಬಳಿ ಇರುತ್ತದೆ. ಕೀ ಕಳೆದುಕೊಂಡಿದ್ದ ಬಗ್ಗೆ ಹಸೀನಾ ಅವರು ಬ್ಯಾಂಕ್ ಸಿಬ್ಬಂದಿಯವ ಗಮನ್ಕೆ ತಂದಿದ್ದರು. ಅದರಂತೆ ಕಳೆದ ಜುಲೈ ತಿಂಗಳ 26ರಂದು ಹಸೀನಾ ಅವರು ತಮ್ಮ ಸಹೋದರಿ ಶೈಮಾ ಫೈಝಲ್ ಅವರೊಂದಿಗೆ ಬ್ಯಾಂಕಿಗೆ ಹೋಗಿದ್ದು, ಇವರ ಹಾಗೂ ಬ್ಯಾಂಕ್ನವರ ಸಮಸಕ್ಷಮ ಬಂಗಾರ ಇರಿಸಿದ್ದ ಲಾಕರ್ನ್ನು ಒಡೆದು ನೋಡಿದಾಗ ಚಿನ್ನ ಲಾಕರ್ನಲ್ಲಿ ಇಲ್ಲದಿರುವುದು ಕಂಡು ಬಂದಿದೆ.

ಈ ಬಗ್ಗೆ ಕಂಗಾಲಾಗಿರುವ ಹಸೀನಾ ಲಾಕರ್ನಲ್ಲಿದ್ದ ಬ್ಯಾಂಕಿನವರೇ ಚಿನ್ನಾಭರಣವನ್ನು ಬ್ಯಾಂಕಿನವರೇ ತೆಗೆದು ವಂಚನೆ ಮಾಡಿದ್ದಾರೆ ಎಂದು ಬಂದರ್ ಠಾಣಾ ಪೊಲೀಸರಿಗೆ ಶುಕ್ರವಾರ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.ಈ ಬಗ್ಗೆ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.