ಕರಾವಳಿ

ಸ್ವಾತಂತ್ರ್ಯೋತ್ಸವದ ಧ್ವಜಾರೋಹಣದ ನಂತರ ದಿಢೀರ್ ಕುಸಿದು ಬಿದ್ದು ಅಸ್ವಸ್ಥರಾದ ಕಾಗೋಡು ತಿಮ್ಮಪ್ಪ

Pinterest LinkedIn Tumblr

kagodu

ಶಿವಮೊಗ್ಗ: 70ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿದ್ದ ಕಂದಾಯ ಸಚಿವ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಧ್ವಜಾರೋಹಣ ಮಾಡಿದ ನಂತರ ಕುಸಿದು ಬಿದ್ದಿದ್ದಾರೆ.

ದಿಢೀರ್ ಅಸ್ವಸ್ಥಗೊಂಡ 74 ವರ್ಷದ ಕಾಗೋಡು ತಿಮ್ಮಪ್ಪ ಅವರನ್ನು ಕೂಡಲೇ ಸ್ಥಳೀಯ ಸಹ್ಯಾದ್ರಿ ನಾರಾಯಣ ಹೃದಯಾಲಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶಿವಮೊಗ್ಗದ ಡಿಎಆರ್ ಮೈದಾನದಲ್ಲಿ ಕಾಗೋಡು ತಿಮ್ಮಪ್ಪ ಭಾಷಣ ಮಾಡುತ್ತಿದ್ದರು. ಸುಮಾರು 15 ನಿಮಿಷ ಭಾಷಣ ಮಾಡಿದ ನಂತರ ತಿಮ್ಮಪ್ಪ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

Comments are closed.