ಕರಾವಳಿ

25 ನಿಮಿಷ ಮೊಜಾರ್ಟ್ ಸಂಗೀತ ಆಲಿಸಿ : ರಕ್ತದೊತ್ತಡದಿಂದ ದೂರ ಇರಿ.

Pinterest LinkedIn Tumblr

bp_test

ಮಂಗಳೂರು: ಅಧಿಕ ರಕ್ತದೊತ್ತಡ ಸಮಸ್ಯೆಗೆ ಸಂಗೀತವೇ ಔಷಧ ಎಂಬುದು ನಿಮಗೆ ಗೊತ್ತೇ? ಅದರಲ್ಲೂ ಸಂಗೀತ ದಂತಕಥೆ ಮೊಜಾರ್ಟ್ ಅನ್ನು ಆಲಿಸುವುದರಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಬಂದು ಹೃದಯ ತಹಬಂದಿಗೆ ಬರುತ್ತದೆ ಎಂಬುದು ಹೊಸ ಅಧ್ಯಯನದಿಂದ ತಿಳಿದು ಬಂದಿರುವ ಮಾಹಿತಿಯಾಗಿದೆ. ವೋಲ್ಫ್‎ಗ್ಯಾಂಗ್ ಮೊಜಾರ್ಟ್ ಮತ್ತು ಜಾನ್ ಸ್ಟ್ರಾಸ್ ಸಂಗೀತವನ್ನು 25 ನಿಮಿಷ ಆಲಿಸಿದರೆ ರಕ್ತದಲ್ಲಿನ ಕೊಬ್ಬು ಸಂಗ್ರಹ ಇಳಿಕೆಯಾಗಿ ಹೃದಯ ಬಡಿತ ತಹಬಂದಿಗೆ ಬರುತ್ತದೆ ಎಂಬುದು ಈ ಸಂಶೋಧನೆಗಳಿಂದ ಬಂದಿರುವ ಸುದ್ದಿಯಾಗಿದೆ.

ಈ ಅಧ್ಯಯನದಲ್ಲಿ 60 ಭಾಗವಹಿಸುವವರು ಪಾಲ್ಗೊಂಡಿದ್ದು 25 ನಿಮಿಷಗಳ ಮೊಜಾರ್ಟ್ ಆಲಿಸಲು ಅವರನ್ನು ಬಿಡಲಾಯಿತು ಸ್ಟಾಕ್‎ವೋಲ್ಮ್‎ನಲ್ಲಿ 1972 ರಲ್ಲಿ ರಚನೆಯಾದ ಸ್ವೀಡಿಶ್ ಗುಂಪು ಇದನ್ನು ಆಯೋಜಿಸಿತ್ತು. ಇನ್ನುಳಿದ 60 ಜನರನ್ನು ನಿಯಂತ್ರಿಸಲಾಗಿದ್ದು ಮೌನವಾಗಿರಲು ಅವರಲ್ಲಿ ತಿಳಿಸಲಾಯಿತು.

ಮೊಜಾರ್ಟ್ ಬಿಪಿಯ (ಅಪ್ಪರ್ ರೀಡಿಂಗ್) ಕಡಿಮೆಗೊಳಿಸಿದ್ದು ಹೃದಯ ಬಡಿತ 4.7 ಎಮ್‌ಎಮ್‎ಗೆ ಇಳಿಸಿತ್ತು, ಮೊಜಾರ್ಟ್ ಆಲಿಸುವಿಕೆಯ ಪ್ರಯೋಜನದಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ ಎಂಬುದು ಇದರಿಂದ ತಿಳಿದು ಬಂದಿತು. ಸಂಗೀತವು ಮಾನವರ ಮೇಲೆ ಅದ್ಭುತ ಪರಿಣಾಮವನ್ನು ಬೀರುತ್ತದೆ. ನಮ್ಮ ಅಧ್ಯಯನದಲ್ಲಿ ಶಾಸ್ತ್ರೀಯ ಸಂಗೀತದ ಆಲಿಸುವಿಕೆಯು ರಕ್ತದೊತ್ತಡ ಮತ್ತು ಹೃದಯ ಬಡಿತವನ್ನು ಕಡಿಮೆ ಮಾಡಿದೆ.ಮೊಜಾರ್ಟ್ ಮತ್ತು ಸ್ಟ್ರಾಸ್ ಸಂಗೀತಗಳಲ್ಲಿ ಈ ಪ್ರಭಾವವು ನಮಗೆ ಸ್ಪಷ್ಟವಾಗಿ ಮನವರಿಕೆಯಾಗಿದೆ ಎಂಬುದು ಜರ್ಮನಿಯ ರಾಹುರ್ ವಿದ್ಯಾಲಯದ ಹಾನ್ಸ್ ಮಾತಾಗಿದೆ. ಅದರಲ್ಲೂ ಮೊಜಾರ್ಟ್ ಆಲಿಸುವಿಕೆಯು ಮಹತ್ವದ ಪರಿಣಾಮವನ್ನು ಬೀರಿದೆ ಎಂಬುದು ಇವರ ಅಭಿಪ್ರಾಯವಾಗಿದೆ.

ಇಷ್ಟಲ್ಲದೆ, ಶಾಂತ ಸ್ಥಿತಿಯಲ್ಲಿ ಕುಳಿತುಕೊಳ್ಳುವುದೂ ಕೂಡ ರಕ್ತದೊತ್ತಡವನ್ನು ಕಡಿಮೆ ಮಾಡಲಿದೆ, ಆದರೆ ಸಂಗೀತ ಆಲಿಸುವುದಕ್ಕಿಂತಲೂ ಇವುಗಳ ಪ್ರಭಾವ ಕಡಿಮೆಯಾಗಿದೆ ಎಂಬುದು ಇವರ ಅಭಿಪ್ರಾಯವಾಗಿದೆ.

ಮಹಿಳೆಯರಿಗಿಂತ ಪುರುಷರಲ್ಲಿ ಮೊಜಾರ್ಟ್ ಮತ್ತು ಸ್ಟ್ರಾಸ್ ಆಲಿಸುವಿಕೆಯ ನಂತರ ಕೊಲೆಸ್ಟ್ರಾಲ್ ಮಟ್ಟದಲ್ಲೂ ಇಳಿಕೆ ಕಂಡುಬಂದಿದೆ. ನಿಧಾನಗತಿಯ ಶಾಂತ ಸಂಗೀತ, ದೀರ್ಘ ಅವಿಚ್ಛಿನ್ನ ನುಡಿಗಟ್ಟು, ಬದಲಾಗದ ಚಲನಶಾಸ್ತ್ರ ಮೊದಲಾದವು ಹೃದಯ ಸಂಬಂಧಿ ವ್ಯವಸ್ಥೆಗೆ ಸಹಕಾರಿಯಾಗಿದೆ .

ರಕ್ತದೊತ್ತಡ ನಿವಾರಣೆ ಮನೆ ಮದ್ದು:
ಬೀಟ್‌ರೂಟ್ ಜ್ಯೂಸ್
ಹಸಿ ಬೀಟ್‌ರೂಟ್‌‌ನ ಜ್ಯೂಸ್ ಮಾಡಿದರೆ ತುಂಬಾ ಆರೋಗ್ಯಕಾರಿ. ಇದು ರಕ್ತಕ್ಕೆ ಸಂಬಂಧಪಟ್ಟ ಎಲ್ಲಾ ಸಮಸ್ಯೆಗಳನ್ನು ನಿವಾರಿಸುತ್ತದೆ. ದಿನದಲ್ಲಿ ಎರಡು ಸಲ ಇದನ್ನು ಪ್ರಯತ್ನಿಸಿ. ಬೆಳಿಗ್ಗೆ ಹಾಗೂ ಸಂಜೆ ವೇಳೆ ಬೀಟ್ ರೂಟ್ ಜ್ಯೂಸ್ ಕುಡಿಯಿರಿ.
ಬೀಟ್‌ರೂಟ್ ಅನ್ನು ಮೊದಲು ಚೆನ್ನಾಗಿ ತೊಳೆದುಕೊಂಡು, ಸಣ್ಣ ಸಣ್ಣ ಹೋಳು ಮಾಡಿಕೊಳ್ಳಿ. ನಂತರ ಇದನ್ನು ಶೋಧಿಸಿಕೊಳ್ಳಿ. ನಿಮಗೆ ಅಗತ್ಯವಾದರೆ ಇದಕ್ಕೆ ಐಸ್ ಕ್ಯೂಬ್ ಸಹ ಬೆರೆಸಿಕೊಳ್ಳಬಹುದು.
*ವಾರಕ್ಕೆ 3-4 ಬಾರಿ ಈ ರಸವನ್ನು ಸೇವಿಸಿ. ಆಗ ನೋಡಿ, ನಿಮ್ಮ ಸಾಮರ್ಥ್ಯವು ಹೇಗೆ ಸುಧಾರಿಸುತ್ತದೆ ಎಂದು. ಆದರೆ ಒಂದು ಮಾತು ನೆನಪಿಡಿ. ಇದನ್ನು ಒಂದೇ ಬಾರಿಗೆ ಸೇವಿಸುವ ಮೊದಲು ಸ್ವಲ್ಪ ಸೇವಿಸಿ, ರುಚಿ ನೋಡಿ. ಇದರ ರುಚಿಯು ನಿಮಗೆ ಒಗ್ಗಿದರೆ ಮುಂದುವರಿಯಿರಿ. ಇಲ್ಲವಾದರೆ ಬೇಡ.

ಉಪ್ಪು ನೀರು:
ಉಪ್ಪಿನಲ್ಲಿ ಸೋಡಿಯಂ ಎನ್ನುವ ಅಂಶವಿದ್ದು ಅದರಿಂದ ರಕ್ತದೊತ್ತಡ ಹೆಚ್ಚಾಗುತ್ತದೆ. ಸ್ವಲ್ಪ ಉಪ್ಪನ್ನು ನೀರಿಗೆ ಹಾಕಿಕೊಂಡು ಕುಡಿಯಿರಿ. ಆದರೆ ಇದರ ಅತಿಯಾದ ಸೇವನೆ ಒಳ್ಳೆಯದಲ್ಲ.

ಒಣದ್ರಾಕ್ಷಿ:
ಕೆಲವು ಒಣದ್ರಾಕ್ಷಿಗಳನ್ನು ರಾತ್ರಿ ವೇಳೆ ನೀರಿಗೆ ಹಾಕಿ ನೆನೆಸಿಡಿ. ಬೆಳಿಗ್ಗೆ ಎದ್ದ ಬಳಿಕ ಅದನ್ನು ತಿನ್ನಿ ಮತ್ತು ನೀರನ್ನು ಕುಡಿಯಿರಿ.

ಕಾಫಿ:
ಕಾಫಿ ಕುಡಿಯುವುದರಿಂದ ರಕ್ತದೊತ್ತಡ ಹೆಚ್ಚಾಗಬಹುದು. ಆದರೆ ಇದು ತಾತ್ಕಾಲಿಕ. ನಿಮಗೆ ಕೆಫಿನ್ ಚಟವಾಗಿದ್ದರೆ ಈ ಮದ್ದಿನಿಂದ ದೂರವಿರಿ.

ಲಿಂಬೆ:
ನಿರ್ಜಲೀಕರಣದಿಂದ ರಕ್ತದೊತ್ತಡ ಕಡಿಮೆಯಾಗಿದ್ದರೆ ಆಗ ಲಿಂಬೆಹಣ್ಣು ನೆರವಿಗೆ ಬರಲಿದೆ. ನಿಂಬೆಹಣ್ಣಿನ ರಸವನ್ನು ಕಬ್ಬಿನ ಹಾಲಿನೊಂದಿಗೆ ಕುಡಿಯಿರಿ.

ಕ್ಯಾರೆಟ್ ಜ್ಯೂಸ್‌:
ಒಂದು ಲೋಟ ಕ್ಯಾರೆಟ್ ಜ್ಯೂಸ್‌ಗೆ ಎರಡು ಹನಿ ಜೇನುತುಪ್ಪ ಹಾಕಿ ಕುಡಿದರೆ ಇದು ಕಡಿಮೆ ರಕ್ತದೊತ್ತಡಕ್ಕೆ ಒಳ್ಳೆಯ ಮದ್ದು.

ಬಾದಾಮಿ :
ಮೂರು ಬಾದಾಮಿಯನ್ನು ರಾತ್ರಿ ಹಾಲಿನಲ್ಲಿ ಹಾಕಿ ನೆನೆಸಿಡಿ. ಬೆಳಿಗ್ಗೆ ಇದರ ಪೇಸ್ಟ್ ಮಾಡಿಕೊಂಡು ಹಾಲಿನೊಂದಿಗೆ ಕುಡಿಯಿರಿ.

Comments are closed.