ಉಳ್ಳಾಲ : ಶ್ರೀ ಜೈಹನುಮಾನ್ ಕ್ರೀಡಾಮಂಡಳಿ (ರಿ),ಕುತ್ತಾರು ಇದರ ವತಿಯಿಂದ 70ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಇಂದು ಆಚರಿಸಲಾಯಿತು.
ಧ್ವಜಾರೋಹಣವನ್ನು ಹಿರಿಯರಾದ ಗಿರಿಜಾಶೆಟ್ಟಿ ಬೊಳ್ಯಗುತ್ತು ಇವರು ನೆರವೇರಿಸಿದರು, ಮುನ್ನೂರು ಗ್ರಾಮದ ಗ್ರಾಮ ಪಂಚಾಯತ್ ಸಹಾಯಕರಾದ ಪದ್ಮನಾಭ ಬಟ್ಟೆದಡಿ ಮುಖ್ಯಅಥಿತಿಯಾಗಿ ಭಾಗವಹಿಸಿದ್ದರು.
ಶಿಕ್ಷಣಕ್ಕೆ ಸದಾ ಪ್ರೋತ್ಸಾಹ ನೀಡುತ್ತಿರುವ ಸಂಸ್ಥೆ ಪ್ರತೀ ವರ್ಷ ಶಿಕ್ಷಣಕ್ಷೇತ್ರದಲ್ಲಿ ಸಾಧನೆಗೈದ ಸ್ಥಳೀಯ ವಿದ್ಯಾರ್ಥಿಗಳನ್ನು ಗೌರವಿಸಲಾಗುತ್ತಿದ್ದು ಅದರಂತೆ ಈ ವರ್ಷವು ಸ್ಥಳೀಯ ವಿದ್ಯಾರ್ಥಿಗಳಾದ ನಿತಿನ್ ಕುತ್ತಾರ್,ವರುಣ್ ತಳೆನೀರು,ಶ್ವೇತಾ ಕುಂಡಲಾಯಿ,ಡೀನಾಜಾಸ್ಮಿನ್ ಮೊಂತೆರೋ,ವೃಂಧಾ ಮದಕ ಇವರನ್ನು ಸಂಸ್ಥೆಯವತಿಯಿಂದ ಗೌರವಿಸಲಾಯಿತು.
ಈ ವೇಳೆ ಮಾತನಾಡಿದ ನಿತಿನ್ ಕುತ್ತಾರ್ ಸ್ವಾತಂತ್ರ್ಯ ಕೇವಲ ಆಚರಣೆಗೆ ಮಾತ್ರ ಸೀಮಿತವಾರಿದರೆ ,ಅದರ ಉದ್ದೇಶವನ್ನು ನಾವು ತಿಳಿದುಕೊಂಡು ಅದನ್ನು ಮೈಗೂಡಿಸಿಕೊಳ್ಳ ಬೇಕು,ಎಲ್ಲರೂ ಸಮಾನರಾಗಿ ಬದುವಂತಾಗಬೇಕು ,ಶಿಕ್ಷಣ,ಉದ್ಯೋಗ ಎಲ್ಲರಿಗೂ ಸಿಗಬೇಕು ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷರಾದ ಮಹಾಬಲ.ಟಿ,ಗೌರವಾಧ್ಯಕ್ಷರಾದ ಶ್ರೀಧರ್ ಸಾಲ್ಯಾನ್ ಉಪಸ್ಥಿತರಿದ್ದರು,ಕಾರ್ಯದರ್ಶಿ ಮಿಥುನ್ ರಾಜ್ ಕಂಪ ಸ್ವಾಗತಿಸಿ ,ಕಾರ್ಯಕ್ರಮ ನಿರೂಪಿಸಿದರು, ರೂಪೇಶ್.ಕೆ ವಂದಿಸಿದರು.
Comments are closed.