ಬೆಂಗಳೂರು: ನಿರ್ದೇಶಕ ಪ್ರೇಮ್ ಅವರ ನೂತನ ಚಿತ್ರ ‘ದ ವಿಲನ್’ ನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಜತೆಯಾಗಿ ನಟಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ತನ್ನ ಸಿನಿಮಾಗಳಲ್ಲಿ ಏನಾದರೊಂದು ‘ವಿಶೇಷ’ ಸ್ಟೈಲ್‍ಗಳನ್ನು ಮಾಡುವುದರಲ್ಲಿ ನಿಸ್ಸೀಮರಾಗಿರುವ ಪ್ರೇಮ್, ‘ದ ವಿಲನ್’ ನಲ್ಲಿಯೂ ಹೊಸ ಸ್ಟೈಲ್‍ಗಳನ್ನು ಮಾಡಿ ಗಮನ ಸೆಳೆಯುತ್ತಿದ್ದಾರೆ.
ವಿಶೇಷ ಅಂದರೆ ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಮತ್ತು ಸುದೀಪ್ ವಿಶೇಷ ವಿಗ್ ಧರಿಸಲಿದ್ದಾರೆ. ಡಿಫರೆಂಟ್ ಲುಕ್ ನೀಡುವುದಕ್ಕಾಗಿ ಈ ವಿಗ್‍ಗಳ ವಿನ್ಯಾಸವನ್ನು ಸ್ವತಃ ಪ್ರೇಮ್ ಅವರೇ ಮಾಡಿದ್ದಾರೆ.
ತಲಾ ರು. 4 ಲಕ್ಷ ಮೌಲ್ಯವಿರುವ ವಿಗ್ ಇದಾಗಿದ್ದು, ಮುಂಬೈನಲ್ಲಿ ಇದನ್ನು ತಯಾರಿಸಲಾಗಿದೆ.
Comments are closed.