ರಾಷ್ಟ್ರೀಯ

14 ಸೆಕೆಂಡ್ಸ್ ಮಹಿಳೆಯನ್ನು ದಿಟ್ಟಿಸಿ ನೋಡಿ; ನೀವು ಜೈಲು ಪಾಲಾಗುವಿರಿ!

Pinterest LinkedIn Tumblr

stare-a-girl-600ತಿರುವನಂತಪುರ : ಮಹಿಳೆಯೊಬ್ಬಳನ್ನು ನೀವು ಹದಿನಾಲ್ಕು ಸೆಕೆಂಡುಗಳ ಕಾಲ ಎವೆಯಿಕ್ಕದೆ ದಿಟ್ಟಿಸಿ ನೋಡಿದರೆಂದರೆ ನೀವು ಜೈಲು ಪಾಲಾಗುತ್ತೀರಿ; ನಿಮ್ಮ ವಿರುದ್ಧ ಕೇಸು ದಾಖಲಾಗುತ್ತದೆ ಎಂಬುದು ನಿಮಗೆ ತಿಳಿದಿದೆಯೇ ? ಅಂತಹ ಅವಕಾಶಗಳು ಕಾನೂನಿನಲ್ಲಿ ಇವೆ !

ಪುರುಷರನ್ನು ತಿವಿಯುವಂತೆ ಈ ಪ್ರಶ್ನೆಯನ್ನು ಕೇಳಿದವರು ಬೇರಾರೂ ಅಲ್ಲ – ಕೇರಳದ ಅಬಕಾರಿ ಆಯುಕ್ತ ರಿಷಿರಾಜ್‌ ಸಿಂಗ್‌.

ರಿಷಿರಾಜ್‌ ಸಿಂಗ್‌ ಅವರ ಈ ಮಾತು ಈಗ ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಾಪಕ ಟೀಕೆ, ಖಂಡನೆಗೆ ಗುರಿಯಾಗಿದೆ ಮಾತ್ರವಲ್ಲದೆ ಕೇರಳದ ಕ್ರೀಡಾ ಸಚಿವ ಇ ಪಿ ಜಯರಾಜನ್‌ ಅವರು “ಇದು ಕಿರಿಕಿರಿಯ ಹೇಳಿಕೆ’ ಎಂದು ಮೂದಲಿಸಿದ್ದಾರೆ.

-ಉದಯವಾಣಿ

Comments are closed.