ಮಂಗಳೂರು : ಮಂಗಳೂರಿನ ಅಂತರಾಷ್ಹ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ಇಂದು ಬೆಳಿಗ್ಗೆ ತಪಾಸಣೆ ನಡೆಸುತ್ತಿದ್ದ ವೇಳೆ 26 ನಕಲಿ ಪಾಸ್‌ಪೋರ್ಟ್ ಹೊಂದಿದ್ದ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ದುಬೈನಿಂದ ಬಂದಿಳಿದಿದ್ದ ಮಹಮ್ಮದ್ ಪನವಪಿಲ್ ಎಂಬಾತನ ಮೇಲೆ ಸಂಶಯ ಬಂದ ಕಾರಣ ಅಧಿಕಾರಿಗಳು ತೀವ್ರ ತಪಾಸಣೆಗೊಳಪಡಿಸಿದ್ದಾರೆ. ಈ ವೇಳೆ 26 ಪಾಸ್ ಪೋರ್ಟ್‌ಗಳು ಪತ್ತೆಯಾಗಿದ್ದು, ಅವುಗಳ ಪೈಕಿ 2 ಅಮೆರಿಕಕ್ಕೆ ಸೇರಿದ್ದಾಗಿವೆ ಎಂದು ತಿಳಿದು ಬಂದಿದೆ.
ಒಬ್ಬ ವ್ಯಕ್ತಿಗೆ ಒಂದು ಪಾಸ್‌ಪೋರ್ಟ್ ಸಿಗುವುದೇ ಬಹಳ ಕಷ್ಟಕರವಾಗಿರುವ ಈ ದಿನಗಳಲ್ಲಿ ಒಬ್ಬನೇ ವ್ಯಕ್ತಿ 6 ನಕಲಿ ಪಾಸ್‌ಪೋರ್ಟ್ ಹೊಂದಿರುವ ಈ ಆತಂಕಕಾರಿ ಬೆಳವಣಿಗೆ ತುಂಬಾ ಅಪಯಕಾರಿಯಾಗಿದೆ.
ತಪಾಸಣೆಯ ಬಳಿಕ ವ್ಯಕ್ತಿಯನ್ನು ಬಜ್ಪೆ ಪೊಲೀಸರ ವಶಕ್ಕೆ ನೀಡಲಾಗಿದ್ದು ಕೂಲಂಕಷ ವಿಚಾರಣೆ ನಡೆಸಲಾಗುತ್ತಿದೆ. ಈಗಾಗಲೆ ಕೇರಳದ ಹಲವು ಯುವಕರು ಐಸಿಸಿ ನಂತಹ ಉಗ್ರ ಸಂಘಟನೆ ಸೇರಿಕೊಂಡಿರುವ ಹಿನ್ನಲೆಯಲ್ಲಿ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತೀವ್ರ ವಿಚಾರಣೆಯಲ್ಲಿ ತೊಡಗಿದ್ದಾರೆ.
Comments are closed.