https://youtu.be/19oEIeFt2KM
ಕೆಲವು ರಾಜಕಾರಣಿಗಳು ತಾವು ವ್ಯವಸ್ಥೆಗಿಂತ ಮೇಲಿನವರು ಎಂಬಂತೆ ವರ್ತಿಸುತ್ತಾರೆ. ಎನ್ಸಿಪಿ ಶಾಸಕ ಹಿರಿಯ ಅಧಿಕಾರಿಯೊಬ್ಬರಿಗೆ ಕಪಾಳಮೋಕ್ಷ ಮಾಡಿ ಅವಮಾನಿಸಿರುವ ಘಟನೆ ನಡೆದಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಶಾಸಕನ ಅಧಿಕಾರದ ಮದ, ದರ್ಪಕ್ಕೆ ತೀವ್ರ ಟೀಕೆ ವ್ಯಕ್ತಗೊಂಡಿದೆ. ಸಾಕಷ್ಟು ಮಂದಿ ಛೀಮಾರಿ ಹಾಕಿದ್ದಾರೆ.
ಮಹಾರಾಷ್ಟ್ರದ ಕರ್ಜತ್ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಸುರೇಶ್ ಲಾಡ್ ದರ್ಪ ಪ್ರದರ್ಶಿಸಿ ಈ ವಿವಾದದ ಸುಳಿಯಲ್ಲಿ ಸಿಲುಕಿಕೊಂಡಿರುವ ಶಾಸಕ. ಎನ್ಡಿಟಿವಿ ವರದಿಯ ಪ್ರಕಾರ ಉಪ ಸಂಗ್ರಾಹಕ (ಅಧಿಕಾರಿ) ಅಬಯ್ ಕಲ್ಗುಡ್ಕರ್ ಮಂಗಳವಾರ ಕರೆದಿದ್ದ ಸಭೆ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಭೂಸ್ವಾಧೀನ ಸಂಬಂಧಿತ ಸಮಸ್ಯೆಗಳ ಬಗ್ಗೆ ರ್ಚಚಿಸಲೆಂದು ಸಭೆ ಕರೆಯಲಾಗಿತ್ತು. ಸುರೇಶ್ ಲಾಡ್ ಸೇರಿ, ಹಲವು ರೈತರ ಜಾಗ ಸ್ವಾಧೀನ ಪಡಿಸಿಕೊಂಡ ವಿಚಾರದಲ್ಲಿ ಘರ್ಷಣೆ ತಾರಕಕ್ಕೇರಿದೆ. ಆಗ ಶಾಸಕರು ಅಧಿಕಾರಿಯ ಮೇಲೆ ಕೈ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
Comments are closed.