ಕುಂಬ್ರ: ದೇಶದ ಎಪ್ಪತ್ತನೇ ಸ್ವಾತಂತ್ರ್ಯೋತ್ಸ ಕಾರ್ಯಕ್ರಮದ ಅಂಗವಾಗಿ ಕೆಐಸಿಯಲ್ಲಿ ದ್ವಜಾರೋಹಣ ಹಾಗೂ ಅನಿವಾಸಿ ಪ್ರತಿನಿಧಿಗಳ ಸಮಾವೇಶ ನಡೆಯಿತು. ಸಂಸ್ಥೆಯ ಪ್ರ.ಕಾರ್ಯದರ್ಶಿ ಕೆ.ಎಂ ಬಾವಾ ಹಾಜಿ ಧ್ವಜಾರೋಹಣ ನಿರ್ವಹಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೆಐಸಿ ಕೇಂದ್ರ ಸಮಿತಿ ಅಧ್ಯಕ್ಷರಾದ ಮೊಯಿದೀನ್ ಕುಟ್ಟಿ ಹಾಜಿ ದಿಬ್ಬ ಕೆಐಸಿಯ ಅಭಿವೃದ್ಧಿಯ ಕುರಿತು ಕೊಂಡಾಡುತ್ತಾ ನಮ್ಮ ಮಾತು ಕೃತಿಗಳಿಂದ ಯಾವ ಧರ್ಮದವನಿಗೂ ತೊಂದರೆ ಆಗದ ರೂಪದಲ್ಲಿ ನಡೆದುಕೊಳ್ಳಬೇಕೆಂಬುದಾಗಿದೆ ಸ್ವಾತಂತ್ರ್ಯೋತ್ಸವದಂದು ನೀಡಬಹುದಾದ ಗರಿಷ್ಠ ಸಂದೇಶವಾಗಿದೆ ಎಂದು ಅಭಿಪ್ರಾಯಪಟ್ಟರು. ಕೆಐಸಿ ಯುಎಇ ಪ್ರತಿನಿಧಿಗಳಾದ ಶಾಫಿ ಮುಲಾರಪಟ್ನ, ಸುಲೈಮಾನ್ ಫೈಝಿ, ಅನ್ವರ್ ಮನಿಲ, ಶಾಫಿ ಕೇಕನಾಜೆ ಸೌದಿ ಅರೇಬಿಯಾ, ಅಶ್ರಫ್ ಪರ್ಲಡ್ಕ ಶುಭ ಹಾರೈಸಿ ಮಾತನಾಡಿದರು.
ಜಲಾಲಿಯ್ಯಾ ಯಂಗ್ ಮೆನ್ಸ್ ಪ್ರತಿನಿಧಿಗಳಾ ಅಶ್ರಫ್ ಸನ್ಶೈನ್, ಹಾರಿಸ್ ಮುಡಾಲ, ರಿಯಾಝ್ ಕುರಿಯಾ, ಸಲಾಂ ಕುಂಬ್ರ, ಮುಖ್ತಾರ್ ಕುಂಬ್ರ, ಅಶ್ರಫ್ ಸಾರೆಪುಣಿ ಉಪಸ್ಥಿತರಿದ್ದರು.ಅಲ್ಲದೆ ಸಂಸ್ಥೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಕನ್ನಡ ಇಂಗ್ಲಿಷ್ ಮಲಯಾಳಂ ಭಾಷೆಗಳಲ್ಲಿ ಸ್ವಾತಂತ್ರ್ಯೋತ್ಸವ ದಿನದ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು
ಸಂಸ್ಥೆಯ ಪ್ರ.ಕಾ ಕೆ.ಎಂ ಬಾವಾ ಹಾಜಿ ಕಾರ್ಯಕ್ರಮದ ಅಧಯಕ್ಷತೆ ವಹಿಸಿದ್ದರು, ಹುಸೈನ್ ದಾರಿಮಿ ರೆಂಜಲಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನೀಸ್ ಕೌಸರಿ ಸ್ವಾಗತಿಸಿ ಸತ್ತಾರ್ ಕೌಸರಿ ಧನ್ಯವಾದ ಸಮರ್ಪಿಸಿದರು.
ಕೆಐಸಿಯ ದೈನಂದಿನ ಒಡನಾಡಿಯೂ ಸ್ವಾತಂತ್ರ್ಯ ಹೋರಾಟಗಾರರೂ ಆದ ಇಬ್ರಾಹಿಂ ಹಾಜಿ ಬೊಳ್ಳಾಡಿ ಯವರಿಗೆ ವಿಶೇಷ ಗೌರವ ನೀಡಲಾಯಿತು. ಈ ಸಂಧರ್ಬದಲ್ಲಿ ಕೆ ಐ ಸಿ ಅಕಾಡೆಮಿ ವಿದ್ಯಾರ್ಥಿಗಳು ಭವ್ಯ ಭಾರತದ ಭೂಪಟದ ಮಾದರಿ ಆಕೃತಿಯಲ್ಲಿ ಅಚ್ಚುಕಟ್ಟಾಗಿ ನಿಂತು ಕಾರ್ಯಕ್ರಮಕ್ಕೆ ಮೆರುಗು ನೀಡಿದರು.
Comments are closed.