ಬೆಂಗಳೂರು: ಭಾರತ ಧ್ವಜದ ಮೇಲೆ ನಟಿ ಚಪ್ಪಲಿ ಹಾಕಿಕೊಂಡು ರಚಿತಾ ರಾಮ್ ನಿಂತಿರುವಂತಹ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಆಗಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.
“ಡಿಂಪಲ್ ಕ್ವೀನ್ ರಚಿತಾ ರಾಮ್’ ಎಂಬ ಫೇಸ್ ಬುಕ್ ಪೇಜ್‌ನಲ್ಲಿ ಸ್ವಾತಂತ್ರ್ಯೋತ್ಸವಕ್ಕೆ ಶುಭಕೋರಿ
ಈ ಫೋಟೋ ಅಪ್‌ಲೋಡ್ ಆಗಿದ್ದು, ಈ ಬಗ್ಗೆ ಎಲ್ಲಾ ಕಡೆ ಚರ್ಚೆಯಾಗುತ್ತಿದ್ದಂತೆ ಫೋಟೋ ಡಿಲೀಟ್ ಮಾಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸುವ ನಟಿ ರಚಿತಾ, “ನನ್ನ ಹೆಸರಲ್ಲಿ, ನನ್ನ ಫ್ಯಾನ್‌ಪೇಜ್ ಹೆಸರಲ್ಲಿ ಅನೇಕ ಫೇಕ್ ಅಕೌಂಟ್‌ಗಳಿವೆ.
“ಡಿಂಪಲ್ ಕ್ವೀನ್ ರಚಿತಾ ರಾಮ್’ ಪೇಜ್ ಕ್ರಿಯೇಟ್ ಮಾಡಿದ ಹುಡುಗನಲ್ಲಿ ಮಾತನಾಡಿದಾಗ ಆತ ಕೂಡಾ ಕ್ಷಮೆ ಕೇಳಿದ್ದಾನೆ. “ನಾನು ಕೂಡಾ ಕನ್ನಡದವನು, ನನಗೂ ದೇಶಪ್ರೇಮವಿದೆ. ಆದರೆ ಆತುರದಲ್ಲಿ ಈ ರೀತಿಯ ಫೋಟೋ
ಹಾಕಿದೆ. ಇದರ ಹಿಂದೆ ದುರುದ್ದೇಶವಿಲ್ಲ. ಕ್ಷಮಿಸಿಬಿಡಿ’ ಎಂದಿದ್ದಾರೆ.
-ಉದಯವಾಣಿ
Comments are closed.