ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಕಾರ್ಯಕ್ರಮ ಇನ್ ಕ್ರೆಡಿಬಲ್ ಇಂಡಿಯಾ ಅಭಿಯಾನದ ನೂತನ ರಾಯಭಾರಿಯಾಗಲಿದ್ದಾರೆ ಎಂದು ಸುದ್ದಿ ವಾಹಿನಿಯೊಂದು ವರದಿ ಮಾಡಿದೆ.
ಇಂಡಿಯಾ ಟುಡೇ ವರದಿಯ ಪ್ರಕಾರ, ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವಾಲಯ ತೀವ್ರ ಚರ್ಚೆಗೆ ಕಾರವಾಗಿದ್ದ ಇನ್ ಕ್ರೆಡಿಬಲ್ ಇಂಡಿಯಾ ಪ್ರಚಾರ ರಾಯಭಾರಿ ಹುದ್ದೆಗೆ ಪ್ರಧಾನಿ ಮೋದಿ ಅವರನ್ನೇ ಆಯ್ಕೆ ಮಾಡಿದೆ.
ಒಂದು ವಾರದಲ್ಲಿ ನಿರ್ಮಾಪಕರಿಗೆ ಜಾಹೀರಾತು ಚಿತ್ರಗಳ ಪರಿಕಲ್ಪನೆಗಳನ್ನು ಸಲ್ಲಿಸುವಂತೆ ಪ್ರವಾಸೋದ್ಯಮ ಸಚಿವಾಲಯ ಕೇಳಿಕೊಂಡಿದ್ದು, ಅವುಗಳಲ್ಲಿ ಪ್ರಧಾನಿ ಮೋದಿ ಅವರು ದೇಶದ ವಿವಿಧ ಸ್ಥಳಗಳ ಬಗ್ಗೆ ಮಾತನಾಡಲಿದ್ದಾರೆ ಎನ್ನಲಾಗಿದೆ.
ಇದಕ್ಕು ಮುನ್ನ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಮಹೇಶ್ ಶರ್ಮಾ ಅವರು ಇನ್ ಕ್ರೆಡಿಬಲ್ ಇಂಡಿಯಾ ಇಂಡಿಯಾ ಅಭಿಯಾನದ ಪ್ರಚಾರಕ್ಕೆ ಪ್ರಧಾನಿಯೇ ಸೂಕ್ತ ಎಂದು ಹೇಳಿದ್ದರು.
ಅಸಹಿಷ್ಣುತೆ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ದೇಶಾದ್ಯಂತ ಕೋಲಾಹಲಕ್ಕೆ ಕಾರಣನಾಗಿದ್ದ ಬಾಲಿವುಡ್ ನಟ ಆಮೀರ್ ಖಾನ್ ಅವರನ್ನು ಇನ್ ಕ್ರೆಡಿಬಲ್ ಇಂಡಿಯಾ ರಾಯಭಾರಿ ಸ್ಥಾನದಿಂದ ತೆಗೆದು ಹಾಕಲಾಗಿತ್ತು. ನಂತರ ಆ ಸ್ಥಾನಕ್ಕೆ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಹಾಗೂ ಪ್ರಿಯಾಂಕ ಚೋಪ್ರ ಅವರ ಹೆಸರುಗಳು ಕೇಳಿಬಂದಿದ್ದವು.
Comments are closed.