ಕರ್ನಾಟಕ

ದಲಿತರ ಏಳಿಗೆಗೆ 450 ಕೋ.ರೂ. ವೆಚ್ಚ

Pinterest LinkedIn Tumblr

dalitaಬೆಂಗಳೂರು, ಆ. ೨೨- ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ನೀಡಲಾಗಿದ್ದ 450 ಕೋಟಿ ರೂ. ಗಳನ್ನು ದಲಿತರ ಅಭಿವೃದ್ಧಿ ಯೋಜನೆಗಳಿಗೆ ಬಳಸಲಾಗಿದೆ ಎಂದು ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಲ್ಲಾಜಮ್ಮ ಅವರು ತಿಳಿಸಿದ್ದಾರೆ.
ನಿಗಮದ ಅಭಿವೃದ್ಧಿ ಯೋಜನೆಗಳಿಗೆ ಇನ್ನೂ ಹೆಚ್ಚಿನ ಆರ್ಥಿಕ ನೆರವಿನ ಅಗತ್ಯವಿದ್ದು, ರಾಜ್ಯದ ಸಂಸದರೊಂದಿಗೆ ಕೇಂದ್ರ ಸಚಿವರನ್ನು ಹೆಚ್ಚಿನ ನೆರವಿಗಾಗಿ ಮನವಿ ಮಾಡಲಾಗಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬೆಂಗಳೂರು ಸೇರಿ ರಾಜ್ಯದ 7 ಜಿಲ್ಲೆಗಳಲ್ಲಿ ಅಭಿವೃದ್ಧಿ ನಿಗಮದ ನಿವೇಶನಗಳಿದ್ದು, ಅಲ್ಲಿ ಸ್ವಂತ ಕಟ್ಟಡ ಕಟ್ಟಲು ನಿರ್ಧರಿಸಲಾಗಿದೆ. ಹಾಸನದಲ್ಲಿ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ಚಾಮರಾಜನಗರ, ಮಂಡ್ಯ, ಚಿಕ್ಕಮಗಳೂರು, ಗುಲ್ಬರ್ಗ, ಬೀದರ್, ಬಿಜಾಪುರ ಜಿಲ್ಲೆಗಳಲ್ಲಿ ಸ್ವಂತ ಕಟ್ಟಡದ ನಿರ್ಮಾಣ ಕಾರ್ಯ ಕೈಗೊಳ್ಳಲಾಗುವುದೆಂದು ಹೇಳಿದರು.
ದಲಿತರಲ್ಲಿ 101 ಜಾತಿಗಳಿದ್ದು, ಎಲ್ಲಾ ಜಾತಿಗಳ ಅಭಿವೃದ್ಧಿ ಯೋಜನೆಗಳಿಗೆ ನೆರವು ನೀಡಲಾಗಿದೆ. ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿ ನೀಡಿದ ಫಲಾನುಭವಿಗಳಿಗೆ ಆರ್ಥಿಕ ನೆರವು ಒದಗಿಸಲಾಗಿದೆ ಎಂದು ಹೇಳಿದರು. ನಿಗಮದಲ್ಲಿ ಸಿಬ್ಬಂದಿಗಳ ಕೊರತೆಯಿದ್ದು, 371 ಸಿಬ್ಬಂದಿಯ ನೇಮಕಕ್ಕೆ ಮನವಿ ಮಾಡಲಾಗಿದೆ. ಐಎ‌ಎಂ ಮೂಲಕ ಸಿಬ್ಬಂದಿಯ ನೇಮಕಾತಿ ನಡೆಸಲಾಗುವುದು ಎಂದು ಹೇಳಿದರು.
ದಲಿತರ ಮೇಲೆ ನಡೆದಿರುವ ದೌರ್ಜನ್ಯ ಪ್ರಕರಣಗಳಲ್ಲಿ ನಿಗಮದಿಂದ ಆರ್ಥಿಕ ನೆರವು ನೀಡಲಾಗಿದೆ. 100 ಮಂದಿ ದಲಿತರಿಗೆ ಸ್ವಂತ ಕಚೇರಿ, ಪುಸ್ತಕ ಖರೀದಿಸಲು ಸಾಲಸೌಲಭ್ಯ ನೀಡಲಾಗಿದೆ. 21 ತಿಂಗಳ ಅಧಿಕಾರಾವಧಿಯಲ್ಲಿ ರಾಜ್ಯದ ಎಲ್ಲಾ ಭಾಗಗಳಲ್ಲಿ ಪ್ರವಾಸ ಕೈಗೊಂಡು ಯೋಜನೆಗಳನ್ನು ಅನುಷ್ಠಾನಗೊಳಿಸಲು ಶ್ರಮಿಸಿದ ತೃಪ್ತಿ ತಮಗಿದೆ ಎಂದು ತಿಳಿಸಿದರು.
ನಿಗಮದ ಅಧ್ಯಕ್ಷರಾಗಿ 21 ತಿಂಗಳ ಕಾಲಾವಧಿ ಮುಗಿದಿರುವುದರಿಂದ ಮತ್ತೊಂದು ಅವಧಿಗೆ ತಮ್ಮನ್ನು ಮುಂದುವರೆಸುವಂತೆ ಯಾರ ಮೇಲೂ ಒತ್ತಡ ತರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Comments are closed.