ರಾಷ್ಟ್ರೀಯ

ಒಂದು ಹನಿ ನೀರು ಸಿಕ್ಕಿಲ್ಲ; ರಿಯೊದಲ್ಲಿ ನಾನು ಸತ್ತೇ ಹೋಗುತ್ತಿದ್ದೆ: ಜೈಷಾ

Pinterest LinkedIn Tumblr

OP-Jaishaನವದೆಹಲಿ: ರಿಯೊ ಒಲಿಂಪಿಕ್ಸ್ ಮ್ಯಾರಥಾನ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ತನಗೆ ಸ್ಪರ್ಧೆಯ ನಡುವೆ ಒಂದು ಹನಿ ನೀರು ಕೂಡಾ ಸಿಗಲಿಲ್ಲ. ಭಾರತದ ಸ್ಪರ್ಧಾಳುಗಳಿಗೆ ನೀರು ಕೊಡಲು ಅಲ್ಲಿ ಯಾರೂ ಇರಲಿಲ್ಲ ಎಂದು ಓಟಗಾರ್ತಿ ಒಪಿ ಜೈಷಾ ಕಣ್ಣೀರಿಟ್ಟಿದ್ದಾರೆ.

42 ಕಿಮೀ ದೂರದ ಮ್ಯಾರಥಾನ್ ಓಟದಲ್ಲಿ ಪ್ರತೀ ಎರಡು ಕಿ.ಮೀ ಪೂರೈಸುವಾಗ ಪ್ರತೀ ದೇಶದವರು ತಮ್ಮ ಸ್ಪರ್ಧಾಳುಗಳಿಗೆ ನೀರು, ಗ್ಲುಕೋಸ್, ಎನರ್ಜಿ ಜೆಲ್ ಮೊದಲಾದವುಗಳನ್ನು ನೀಡುತ್ತಿದ್ದರು. ಆದರೆ ಭಾರತೀಯ ಡೆಸ್ಕ್ ಗಳಲ್ಲಿ ದೇಶದ ಹೆಸರು ಮತ್ತು ರಾಷ್ಟ್ರಧ್ವಜ ಬಿಟ್ಟರೆ ನೀರಾಗಲೀ, ಬೇರೆ ಯಾವ ವಸ್ತು ಕೂಡಾ ಇರಲಿಲ್ಲ.

ಬೇರೆ ದೇಶದವರ ಕೌಂಟರ್‍‍ನಿಂದ ನೀರು ಅಥವಾ ಇನ್ಯಾವುದೇ ವಸ್ತುಗಳನ್ನು ಸ್ವೀಕರಿಸಿದರೆ ಸ್ಪರ್ಧೆಯಿಂದಲೇ ಹೊರಹಾಕಲ್ಪಡುವ ನಿಯಮವಿರುವುದರಿಂದ ಜೈಷಾ ಅವರಿಗೆ ಒಲಿಂಪಿಕ್ ಸಮಿತಿಯ ಕೌಂಟರ್‍‍ನ್ನು ಮಾತ್ರ ಅವಲಂಬಿಸಬೇಕಾಗಿ ಬಂದಿತ್ತು. ಆದರೆ ಎಂಟು ಕಿ.ಮೀ ಅಂತರದಲ್ಲಿ ಮಾತ್ರ ಒಲಿಂಪಿಕ್ ಸಮಿತಿ ಕೌಂಟರ್ ಇದ್ದದ್ದು.

ಮೂರು ಗಂಟೆಗಳ ಅವಧಿಯಲ್ಲಿ ಫಿನಿಶಿಂಗ್ ಪಾಯಿಂಟ್ ತಲುಪಿದ ಜೈಷಾ, ಅಲ್ಲಿ ತಲುಪಿದ ಕೂಡಲೇ ಸುಸ್ತಾಗಿ ಬಿದ್ದು ಬಿಟ್ಟಿದ್ದರು. ಹಾಗೆ ಬಿದ್ದಾಗಲೂ ಅಲ್ಲಿ ಭಾರತದ ವೈದ್ಯಕೀಯ ತಂಡವಾಗಲೀ, ವೈದ್ಯರಾಗಲೀ ಇರಲಿಲ್ಲ.

ಅಲ್ಲಿದ್ದ ಕೇರಳದ ಆಟಗಾರ ಟಿ. ಗೋಪಿ ಮತ್ತು ಅವರ ತರಬೇತುದಾರ ರಾಧಾಕೃಷ್ಣನ್ ನಾಯರ್ ಜೈಷಾಗೆ ಸಹಾಯ ಮಾಡಿದ್ದರು. ಅನಂತರ ಒಲಿಂಪಿಕ್ ಸಮಿತಿಯ ವೈದ್ಯಕೀಯ ತಂಡದ ಸಹಾಯದಿಂದ ಜೈಷಾಳನ್ನು ಆಸ್ಪತ್ರೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಈಕೆಗೆ ಏಳು ಬಾಟಲಿ ಗ್ಲುಕೋಸ್ ಡ್ರಿಪ್ ನೀಡಲಾಗಿತ್ತು.

ರಿಯೊ ಒಲಿಂಪಿಕ್ಸ್ ಮಹಿಳಾ ವಿಭಾಗದ ಮ್ಯಾರಥಾನ್ ಸ್ಪರ್ಧೆಯಲ್ಲಿ ಜಿಶಾ 2:47:19 ನಿಮಿಷದಲ್ಲಿ ಗುರಿ ಮಟ್ಟಿದ್ದು, 89 ನೇ ಸ್ಥಾನವನ್ನು ಪಡೆದಿದ್ದಾರೆ.

ಜೈಷಾ ಪ್ರತಿಕ್ರಿಯೆ ಇಲ್ಲಿದೆ

#WATCH: Indian athlete OP Jaisha recalls her lonely #Rio2016 marathon run, says Tricolour was nowhere to be seenhttps://t.co/LASHfwhY7I

— ANI (@ANI_news) August 22, 2016

Comments are closed.