https://youtu.be/7BQ1Ji9myZ4
ಬೀಜಿಂಗ್: ಆಫ್ ಡ್ಯೂಟಿಯಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಯುವತಿಯನ್ನ ಸಿನಿಮೀಯ ರೀತಿಯಲ್ಲಿ ರಕ್ಷಿಸಿರುವ ಘಟನೆ ಚೀನಾದಲ್ಲಿ ನಡೆದಿದೆ.
ಚೀನಾದ ಚೆಂಗ್ಡು ನಗರದಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. ಮಹಿಳೆಯೊಬ್ಬಳು ಮಾಂಸ ಕತ್ತರಿಸುವ ಹರಿತವಾದ ಚಾಕುವನ್ನ ಕತ್ತಿನ ಬಳಿ ಹಿಡಿದುಕೊಂಡಿದ್ದಳು. ದೂರದಲ್ಲಿ ನಿಂತಿದ್ದ ಮತ್ತಿಬ್ಬರು ಪೊಲೀಸ್ ಅಧಿಕಾರಿಗಳಿಗೆ ಚಾಕು ತೋರಿಸಿ ಹತ್ತಿರ ಬರದಂತೆ ಎಚ್ಚರಿಸಿದ್ದಳು. ಅಲ್ಲಿ ನೆರೆದಿದ್ದ ಜನ ಬಿಟ್ಟ ಬಾಯಿ ಬಿಟ್ಟಂತೆ ಮಹಿಳೆಯನ್ನ ನೋಡುತ್ತಿದ್ದರು. ಆಕೆ ಏನು ಮಾಡುತ್ತಾಳೋ ಅನ್ನೋ ಭಯದಿಂದ ಆಕೆಯ ಹತ್ತಿರ ಬರಲು ಹಿಂದೇಟು ಹಾಕಿದ್ರು.
ಕೆಲಸ ಮುಗಿಸಿ ಹೊರಟಿದ್ದ ಪೊಲೀಸ್ ರಕ್ಷಣೆಗೆ ಬಂದ್ರು: ಕೆಲಸ ಮುಗಿಸಿ ಸಿವಿಲ್ ಡ್ರೆಸ್‍ನಲ್ಲಿ ಮನೆಗೆ ಹೊರಟಿದ್ದ ಪೊಲೀಸ್ ಅಧಿಕಾರಿ ವೆನ್ ಕ್ಸಿ ಮಹಿಳೆಯ ಹಿಂದಿನಿಂದ ಬಂದು ಆಕೆಯ ಮೇಲೆರಗಿ ಕೈಯ್ಯಲ್ಲಿದ್ದ ಚಾಕುವನ್ನು ಕಿತ್ತೆಸೆಯುತ್ತಾರೆ. ಈ ವೇಳೆ ಅಲ್ಲಿದ್ದ ಮತ್ತಿಬ್ಬರು ಪೊಲೀಸ್ ಅಧಿಕಾರಿಗಳು ಓಡಿಬಂದು ಮಹಿಳೆಯನ್ನ ವಶಕ್ಕೆ ಪಡೆಯುತ್ತಾರೆ. ಪ್ರತ್ಯಕ್ಷದರ್ಶಿಯೊಬ್ಬರು ಈ ಘಟನೆಯನ್ನ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ.
Comments are closed.