ಮನೋರಂಜನೆ

ಸಿಂಧು, ಸಾಕ್ಷಿ, ದೀಪಾ, ಜಿತುಗೆ ‘ಖೇಲ್ ರತ್ನ’; ರಹಾನೆ ಸೇರಿ 15 ಕ್ರೀಡಾಪಟುಗಳಿಗೆ ‘ಅರ್ಜುನ ಪ್ರಶಸ್ತಿ’

Pinterest LinkedIn Tumblr

sports

ನವದೆಹಲಿ: 2016ನೇ ಸಾಲಿನ ರಾಜೀವ್‍ಗಾಂಧಿ ಖೇಲ್ ರತ್ನ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಇದೇ ಮೊದಲ ಬಾರಿಗೆ ಭಾರತದ ನಾಲ್ವರು ಕ್ರೀಡಾ ಸಾಧಕರಿಗೆ ಏಕಕಾಲಕ್ಕೆ ಖೇಲ್ ರತ್ನ ಪ್ರಶಸ್ತಿ ಲಭಿಸುತ್ತಿದೆ. ಈ ಮೂಲಕ ಇದೊಂದು ಐತಿಹಾಸಿಕ ದಾಖಲೆಯಾಗಲಿದೆ.

ರಿಯೋ ಒಲಿಂಪಿಕ್ಸ್‍ನಲ್ಲಿ ಬೆಳ್ಳಿ ಪದಕ ಗೆದ್ದ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ,ಕಂಚಿನ ಪದಕ ಗೆದ್ದ ಮಹಿಳಾ ಕುಸ್ತಿಪಟು ಸಾಕ್ಷಿ ಮಲ್ಲಿಕ್, ಜಿಮ್ನಾಸ್ಟ್ ದೀಪಾ ಕರ್ಮಾಕರ್ ಮತ್ತು ಶೂಟರ್ ಜಿತುರಾಯ್ ಖೇಲ್ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಕ್ರಿಕೆಟಿಗ ಅಜಿಂಕ್ಯ ರಹಾನೆ, ಲಲಿತಾ ಬಬ್ಬರ್, ಶಿವಾ ತಪಾ, ಅಪೂರ್ವಿ ಚಂದೆಲಾ ಸೇರಿದಂತೆ 15 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ ಘೋಷಿಸಲಾಗಿದೆ. ದೀಪಾ ಕರ್ಮಾಕರ್ ಕೋಚ್ ಸೇರಿದಂತೆ ಒಟ್ಟು ಆರು ಮಂದಿಗೆ ದ್ರೋಣಾಚಾರ್ಯ ಪ್ರಶಸ್ತಿ ನೀಡಲಾಗುತ್ತಿದೆ. ಮೂವರಿಗೆ ಧ್ಯಾನ್‍ಚಂದ್ ಪ್ರಶಸ್ತಿ ನೀಡಲಾಗ್ತಿದೆ.

2009ರಲ್ಲಿ ಮೂವರಿಗೆ ಪ್ರಶಸ್ತಿ: 2009ರಲ್ಲಿ ಮೂವರಿಗೆ ಖೇಲ್ ರತ್ನ ಪ್ರಶಸ್ತಿ ನೀಡಿ ಗೌರವಿಸಿದ್ದರು. ಆಗಸ್ಟ್ 29ರಂದು ಕ್ರೀಡಾ ದಿನಾಚರಣೆ ವೇಳೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಖೇಲ್ ರತ್ನ ಹಾಗೂ ಅರ್ಜುನ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ದ್ರೋಣಾಚಾರ್ಯ ಪ್ರಶಸ್ತಿ- 2016
ನಾಗ್‍ಪುರಿ ರಮೇಶ್- ಅಥ್ಲೆಟಿಕ್ಸ್
ಸಾಗರ್ ಮಲ್ ದಯಾಲ್- ಬಾಕ್ಸಿಂಗ್
ರಾಜ್ ಕುಮಾರ್ ಶರ್ಮಾ- ಕ್ರಿಕೆಟ್
ಬಿಶ್ವೇಶ್ವರ್ ನಂದಿ- ಜಿಮ್ನಾಸ್ಟಿಕ್ಸ್ (ದೀಪಾ ಕರ್ಮಾಕರ್ ಕೋಚ್)
ಪ್ರದೀಪ್ ಕುಮಾರ್- ಈಜುಗಾರಿಕೆ (ಜೀವಮಾನ ಸಾಧನೆ)
ಮಹಾಬೀರ್ ಸಿಂಗ್- ಕುಸ್ತಿ (ಜೀವಮಾನ ಸಾಧನೆ)

ಅರ್ಜುನ ಪ್ರಶಸ್ತಿ- 2016
ರಜತ್ ಚೌಹಾಣ್- ಬಿಲ್ಲುಗಾರಿಕೆ
ಲಲಿತಾ ಬಬ್ಬರ್- ಅಥ್ಲೆಟಿಕ್ಸ್
ಸೌರವ್ ಕೊಠಾರಿ- ಬಿಲ್ಲಿಯಡ್ರ್ಸ್ ಮತ್ತು ಸ್ನೂಕರ್
ಶಿವ ಥಾಪಾ- ಬಾಕ್ಸಿಂಗ್
ಅಜಿಂಕ್ಯ ರಹಾನೆ- ಕ್ರಿಕೆಟ್
ಸುಬ್ರಾತಾ ಪೌಲ್- ಫುಟ್‍ಬಾಲ್
ರಾಣಿ- ಹಾಕಿ
ರಘುನಾಥ್ ವಿಆರ್- ಹಾಕಿ
ಗುರುಪ್ರೀತಿ ಸಿಂಗ್- ಶೂಟಿಂಗ್
ಅಪೂರ್ವಿ ಚಂದೇಲಾ- ಶೂಟಿಂಗ್
ಸೌಮ್ಯಜಿತ್ ಘೋಷ್- ಟೇಬಲ್ ಟೆನ್ನಿಸ್
ವಿನೇಶ್- ಕುಸ್ತಿ
ಅಮಿತ್ ಕುಮಾರ್- ಕುಸ್ತಿ
ಸಂದೀಪ್ ಸಿಂಗ್- ಪ್ಯಾರಾ ಅಥ್ಲೆಟಿಕ್ಸ್
ವೀರೇಂದರ್ ಸಿಂಗ್- ಕುಸ್ತಿ

ಧ್ಯಾನ್ ಚಂದ್ ಪ್ರಶಸ್ತಿ- 2015
ಸತ್ತಿ ಗೀತಾ – ಅಥ್ಲೆಟಿಕ್ಸ್
ಸಿಲ್‍ವನಸ್- ಹಾಕಿ
ರಾಜೇಂದ್ರ ಪ್ರಹ್ಲಾದ್ ಶೆಲ್ಕೆ- ರೋಯಿಂಗ್(ದೋಣಿ ಓಟ)

Comments are closed.