ಅಂತರಾಷ್ಟ್ರೀಯ

ದಿನಕ್ಕೊಂದು ಬಾಳೆ ಹಣ್ಣು ತಿಂದರೆ ಆಗುವ ಪ್ರಯೋಜನ….ಇಲ್ಲಿದೆ ನೋಡಿ

Pinterest LinkedIn Tumblr

banana

ಬಾಳೆಹಣ್ಣು ಎಲ್ಲಾ ಕಾಲದಲ್ಲೂ ಸಿಗುವ ಸಾಮಾನ್ಯ ಹಣ್ಣು. ಈ ಹಣ್ಣಿನಲ್ಲಿ ಪೋಷಕಾಂಶಗಳ ಗಣಿಯೇ ಇದೆ ಎಂದರೆ ತಪ್ಪಲ್ಲ. ದಿನಕ್ಕೊಂದು ಸೇಬು ತಿಂದರೆ ವೈದ್ಯರಿಂದ ದೂರವಿರಬಹುದು ದಿನಕ್ಕೊಂದು ಬಾಳೆ ಹಣ್ಣು ತಿನ್ನುವುದರಿಂದ ಕೂಡ ಅಷ್ಟೇ ಪ್ರಯೋಜನಗಳಿವೆ.

ಬಾಳೆಹಣ್ಣಿನಲ್ಲಿ ಜೀವಸತ್ವಗಳು, ಪೊಟ್ಯಾಸಿಯಂ, ಪೈಬರ್, ಮತ್ತು ನೈಸರ್ಗಿಕ ಸಕ್ಕರೆ ಸಮೃದ್ಧವಾಗಿದೆ. ಇದು ಕೊಬ್ಬು ಮತ್ತು ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಬಹಳಷ್ಟು ಆರೋಗ್ಯಯುತವಾದ ಅಂಶಗಳು ಇರುವ ಬಾಳೆಹಣ್ಣನ್ನು ನಿತ್ಯದ ಆಹಾರದಲ್ಲಿ ಸೇವಿಸುವುದರಿಂದ ಉಂಟಾಗುವ ಪ್ರಯೋಜನಗಳು ಇಲ್ಲಿವೆ ನೋಡಿ.

ಸಲಾಡ್ ಅಥವಾ ಹಾಗೆಯೇ ಬಾಳೆಹಣ್ಣನ್ನು ಸೇವಿಸುವುದರಿಂದ ಕ್ಯಾನ್ಸರ್ ಉಂಟುಮಾಡುವ ಜೀವಕೋಶಗಳ ಬೆಳವಣಿಗೆಯನ್ನು ತಡೆಗಟ್ಟಲು ಸಹಾಯಮಾಡುತ್ತದೆ.

ದಿನನಿತ್ಯ ಒಂದು ಬಾಳೆಹಣ್ಣು ತಿನ್ನುವುದರಿಂದ ಎದೆಯುರರಿ ನಿಯಂತ್ರಣಕ್ಕೆ ಬರುತ್ತದೆ.
ಒಂದು ತಿಂಗಳು ನಿತ್ಯ ಬಾಳೆಹಣ್ಣು ಸೇವಿಸುವುದರಿಂದ ಮಲಬದ್ಧತೆ ದೂರವಾಗುತ್ತದೆ. ಫೈಬರ್ ಅಂಶ ಹೆಚ್ಚಿರುವ ಈ ಹಣ್ಣು ಕರುಳಿನ ಚಲನೆ ಸುಧಾರಿಸಲು ಸಹಾಯಮಾಡಿ ಮಲಬದ್ಧತೆ ನಿವಾರಿಸುತ್ತದೆ. ಹಾಗೂ ಜೀರ್ಣಕ್ರಿಯೆಗೆ ಸಹಾಯಮಾಡುತ್ತದೆ.

ಜೀವಸತ್ವಗಳು, ಖನಿಜ, ನಾರು ಮತ್ತು ಪೊಟ್ಯಾಸಿಯಂ ಹೇರಳವಾಗಿರುವ ಬಾಳೆಹಣ್ಣನ್ನು ಸೇವಿಸುವುದರಿಂದ ದೇಹಕ್ಕೆ ಶಕ್ತಿ ಒದಗಿಸುತ್ತದೆ.

ಬಾಳೆಹಣ್ಣು ರಕ್ತದೊತ್ತಡವನ್ನು ಕಡಿಮೆಮಾಡಿ ಪಾರ್ಶ್ವವಾಯುವಿನ ಅಪಾಯವನ್ನು ತಡೆಗಟ್ಟುತ್ತದೆ. ಕಬ್ಬಿಣದ ಅಂಶ ಈ ಹಣ್ಣಿನಲ್ಲಿ ಇರುವುದರಿಂದ ರಕ್ತದಲ್ಲಿ ಹಿಮೋಗ್ಲೋಬಿನ್ ಉತ್ಪಾದನೆಯನ್ನು ಹೆಚ್ಚಿಸಿ, ರಕ್ತ ಪೋರೈಕೆಯನ್ನು ಹೆಚ್ಚಿಸಿ ರಕ್ತಹೀನತೆಯನ್ನು ನಿವಾರಿಸುತ್ತದೆ. ಇದರ ಜೊತೆಗೆ ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಿಸಿ ಹೊಟ್ಟೆ ಹುಣ್ಣಿನ ನಿಯಂತ್ರಣಕ್ಕೆ ಸಹಾಯಮಾಡುತ್ತದೆ.

ಬಾಳೆಹಣ್ಣು ಕಣ್ಣಿನ ಆರೋಗ್ಯಕ್ಕೆ ಉತ್ತಮ ರಾಮಬಾಣವಾಗಿದೆ. ಇದರಲ್ಲಿ ಅಡಗಿರುವ ವಿಟಮಿನ್ ಎ ಕಣ್ಣಿನ ಪೊರೆ ಮತ್ತು ಕಾರ್ನಿಯಾ ಸಮಸ್ಯೆ ಉಂಟಾಗದಂತೆ ಕಣ್ಣನ್ನು ರಕ್ಷಿಸುತ್ತದೆ.

Comments are closed.