ಕರಾವಳಿ

ಬಕ್ರೀದ್ ಹಬ್ಬಕ್ಕೆ ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ಸೋಮವಾರವೇ ಸರಕಾರಿ ರಜೆ

Pinterest LinkedIn Tumblr

ಉಡುಪಿ: ಬಕ್ರೀದ್ ಪ್ರಯುಕ್ತ ರಾಜ್ಯಾದ್ಯಂತ ಮಂಗಳವಾರ (ಸೆ. 13) ಘೋಷಿಸಲಾಗಿರುವ ಸಾರ್ವತ್ರಿಕ ರಜೆಯನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಮಾರ್ಪಾಡು ಮಾಡಲಾಗಿದ್ದು, ಆ ಎರಡು ಜಿಲ್ಲೆಗಳಿಗೆ ಸೋಮವಾರವೇ (ಸೆ. 12) ಸರಕಾರಿ ರಜೆ ಘೋಷಿಸಲಾಗಿದೆ.

eid-al-adha-2016-date-india-bangladesh-pakistan-dubai

ಈ ಹಿಂದೆ ಬಕ್ರೀದ್‌ಗೆ ಸೆ.12ರಂದು ರಜೆ ಘೋಷಿಸಲಾಗಿತ್ತಾದರೂ ಹಬ್ಬ ಸೆ. 13ರಂದು ನಡೆಯಲಿದೆ ಎಂದು ಚಂದ್ರದರ್ಶನ ಸಮಿತಿ ಹೇಳಿದ್ದರಿಂದ ಸೆ. 12ರ ರಜೆ ರದ್ದುಗೊಳಿಸಿ ಸೆ. 13ರಂದು ರಜೆ ಘೋಷಿಸಲಾಗಿತ್ತು. ಆದರೆ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸೋಮವಾರವೇ (ಸೆ. 12) ಬಕ್ರೀದ್ ಆಚರಣೆ ಹಿನ್ನೆಲೆಯಲ್ಲಿ ಆ ಎರಡು ಜಿಲ್ಲೆಗಳಿಗೆ ಸೋಮವಾರ ರಜೆ ಘೋಷಿಸಲಾಗಿದೆ. ಉಳಿದಂತೆ ರಾಜ್ಯದ ಎಲ್ಲ ಕಡೆ ಮಂಗಳವಾರ ಸಾರ್ವತ್ರಿಕ ರಜೆ ಇರುತ್ತದೆ.

Comments are closed.