ಮಂಗಳೂರು: ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಜನ್ಮ ದಿನದ ಅಂಗವಾಗಿ ಮಂಗಳೂರು ನಗರ ದಕ್ಷಿಣ ಮಂಡಲದ ವತಿಯಿಂದ ಕೊಡಿಯಾಲ್ಬೈಲ್ನ ಶ್ರೀಮತಿ ರಾಧಾಬಾಯಿ ಗಿರಿಧರ್ ರಾವ್ ವೃದ್ಧಾಶ್ರಮದ ನಿವಾಸಿಗಳಿಗೆ ಫಲವಸ್ತು ವಿತರಿಸುವುದರ ಮೂಲಕ ಆಚರಿಸಲಾಯಿತು.
ಮಂಡಲ ಅಧ್ಯಕ್ಷ ವೇದವ್ಯಾಸ ಕಾಮತ್ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ ಮಾತನಾಡಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಭಗವಂತನು ದೇಶದ ಸೇವೆ ಮಾಡಲು ಇನ್ನಷ್ಟು ಉತ್ತಮ ಆಯುರ್ ಆರೋಗ್ಯ ಕರುಣಿಸಲು ಎಂದು ಹಾರೈಸಿದರು.
ಮಾಜಿ ವಿಧಾನ ಸಭಾ ಉಪಸಭಾಪತಿ ಎನ್.ಯೋಗೀಶ್ ಭಟ್, ಮಂಡಲ ಕಾರ್ಯದರ್ಶಿಗಳಾದ ಭಾಸ್ಕರಚಂದ್ರ ಶೆಟ್ಟಿ, ರಮೇಶ್ ಕಂಡೆಟ್ಟು. ಮ.ನ.ಪಾ ಸದಸ್ಯರಾದ ರಾಜೇಂದ್ರ, ಪೂರ್ಣಿಮಾ, ಜಯಂತಿ ಆಚಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕ್ಯಾ| ಬ್ರಿಜೇಶ್ ಚೌಟ, ಮಹಿಳಾ ಮೋರ್ಚಾದ ಅಧ್ಯಕ್ಷ್ಯೆ ಮಂಜುಳಾ ರಾವ್, ಪ್ರಧಾನ ಕಾರ್ಯದರ್ಶಿ ಪೂರ್ಣಿಮ ರಾವ್, ಯುವ ಮೋರ್ಚಾ ಅಧ್ಯಕ್ಷ ಸಂದೀಪ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ನಂದನ್ ಮಲ್ಯ, ಎಸ್.ಸಿ.ಮೋರ್ಚಾ ಅಧ್ಯಕ್ಷ ಉಮಾನಾಥ ಅಮೀನ್, ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಗ್ಲೇಡೈನ್ ಡಿ ಸಿಲ್ವಾ, ಮಂಡಲ ಉಪಾಧ್ಯಕ್ಷ ಶ್ರೀನಿವಾಸ ಶೇಟ್, ಕಾತ್ಯಾಯಿನಿ, ಕಾರ್ಯದರ್ಶಿಗಳಾದ ಅನಿಲ್ ರಾವ್, ದೀಪಕ್ ಪೈ, ಖಜಾಂಚಿ ಕಿರಣ್ ರೈ, ಶಕ್ತಿ ಕೇಂದ್ರ ಅಧ್ಯಕ್ಷರಾದ ದೇವೋಜಿ ರಾವ್, ಗಿರೀಶ್ ಕೊಟ್ಟಾರಿ, ಜನಾರ್ಧನ ಕುಡ್ವ, ಶಕ್ತಿ ಕೇಂದ್ರ ಕಾರ್ಯದರ್ಶಿಗಳಾದ ಶೀಕಾಂತ್ ರಾವ್, ಅಜಯ್, ಲತೀಶ್, ರಮೇಶ್ ಹೆಗ್ಡೆ, ಕಾರ್ಯಾಲಯ ಕಾರ್ಯದರ್ಶಿ ಗುರುಚರಣ್ ಮುಂತಾದವರು ಉಪಸ್ಥಿತರಿದ್ದರು.
Comments are closed.