ಕರಾವಳಿ

ರೋಟರಿ ಉತ್ತಮ ಶಿಕ್ಷಕ – ಶಿಕ್ಷಕಿ ಪ್ರಶಸ್ತಿ ಪ್ರದಾನ

Pinterest LinkedIn Tumblr

rotary_child_1

ಮಂಗಳೂರು: ರೋಟರಿ ಕ್ಲಬ್, ದೇರಳಕಟ್ಟೆ ಇದರ ವತಿಯಿಂದ 2016-17 ನೇ ಸಾಲಿನ ಕುಟುಂಬ-ಮಿಲನ ಕಾರ್ಯಕ್ರಮ ಮತ್ತು ರೋಟರಿ ಜಿಲ್ಲೆ R. I. Dist 3181 ಇದರ ವತಿಯಿಂದ ಕೊಡ ಮಾಡಲ್ಪಡುವ ಉತ್ತಮ ಶಿಕ್ಷಕ – ಶಿಕ್ಷಕಿ ಪ್ರಶಸ್ತಿ ಪ್ರಧಾನ ಸಮಾರಂಭವು ಇತ್ತೀಚೆಗೆ ಕೆ.ಎಸ್.ಹೆಗ್ಡೆ ಆಸ್ಪತ್ರೆ, ದೇರಳಕಟ್ಟೆ ಇದರ ಸೆಮಿನಾರ್ ಹಾಲ್‌ನಲ್ಲಿ ಜರುಗಿತು.

ಮುಖ್ಯ ಅತಿಥಿಯಾಗಿ ನಿತ್ಯಾಧರ್ ಚರ್ಚ್ ಪೆರ್ಮನ್ನೂರಿನ ಧರ್ಮಾಧಿಕಾರಿ (ವಂದನೀಯ) ರೆ| ಫ಼ಾ| ಇಲಿಯಾಸ್ ಡಿ’ಸೋಜಾ ಭಾಗವಹಿಸಿದರು. ರೊ. PHF ಡಾ| ಬಿ. ದೇವದಾಸ ರೈ ಮಾಜಿ ಗವರ್ನರ್ R. I. Dist 3180. ಇವರು ರೋಟರಿಯ ಮಹತ್ವದ ಬಗ್ಗೆ ವಿವರಿಸಿದರು.

ಇದೇ ಸಂದರ್ಭದಲ್ಲಿ 2016-17 ನೇ ಸಾಲಿನ ರೋಟರಿ ಉತ್ತಮ ಶಿಕ್ಷಕ – ಶಿಕ್ಷಕಿ ಪ್ರಶಸ್ತಿಯನ್ನು ಶ್ರೀ ಲೋಕನಾಥ ರೈ ಕೆ. (ದೈಹಿಕ ಶಿಕ್ಷಕರು – ಮದನಿ ಹೈಸ್ಕೂಲ್, ಅಳೇಕಲ), ಶ್ರೀಮತಿ ಸುಜಾತ (ನಿತ್ಯಾಧರ್ ಇಂಗ್ಲೀಷ್ ಮೀಡಿಯಮ್ ಸ್ಕೂಲ್, ಪೆರ್ಮನ್ನೂರು) ಮತ್ತು ಶ್ರೀಮತಿ ಆಸ್ಮಾ ಭಾನು (ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಲ್ಲಾಪು, ಪಟ್ಲ) ಇವರಿಗೆ ಪ್ರಧಾನ ಮಾಡಲಾಯಿತು.

ರೋಟರಿ ಕ್ಲಬ್ ದೇರಳಕಟ್ಟೆ ಇದರ ಅಧ್ಯಕ್ಷರಾದ ಎನ್.ಟಿ. ರಾಮಕೃಷ್ಣ ನಾಯ್ಕ್‌ರವರು ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀ ಚಂದ್ರಶೇಖರ್ ಹೆನ್ನಾಳ್‌ರವರು ವರದಿ ವಾಚಿಸಿದರು. ಅಸಿಸ್ಟೆಂಟ್ ಗವರ್ನರ್ ರೊ| ವಿಕ್ರಂ ದತ್ತ ಕಾರ್ಯಕ್ರಮ ನಿರ್ವಹಿಸಿದರು. ನಿರ್ದೇಶಕರಾದ ರೊ| ಪಿ.ಡಿ. ಶೆಟ್ಟಿ ವಂದಿಸಿದರು. ಮಾಜಿ ಅಧ್ಯಕ್ಷರುಗಳಾದ ರೊ| ಡಿ. ಎನ್. ರಾಘವ, ಕೆ. ಆರ್. ಶೆಟ್ಟಿ ಹಾಗೂ ಲತೀಶ್ ಉಪಸ್ಥಿತರಿದ್ದರು.

Comments are closed.