ಉಡುಪಿ: ಉಡುಪಿ ಸಮೀಪದ ಸಂತೆಕಟ್ಟೆಯ ಕಲ್ಯಾಣಪುರ ಸೇತುವೆಯಿಂದ ಸ್ವರ್ಣ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಯುವತಿ ಮೃತದೇಹ ಶುಕ್ರವಾರ ಪತ್ತೆಯಾಗಿದ್ದು, ಉಡುಪಿ ತಾಲೂಕಿನ ಬ್ರಹ್ಮಾವರ ಸಮೀಪದ ಹೊನ್ನಾಳ ಗ್ರಾಮದ ಬಳಿಯ ನದಿ ತಟದಲ್ಲಿ ಪತ್ತೆ.
ಚೈತ್ರ (18) ಎರಡು ದಿನಗಳ ಹಿಂದೆ ಕಲ್ಯಾಣಪುರ ಸೇತುವೆಯಿಂದ ನದಿಗೆ ಹಾರಿದ್ದಳು. ಮೊಬೈಲ್‌ನಲ್ಲಿ ಮಾತನಾಡುತ್ತಾ, ಅಳುತ್ತಾ ನದಿಗೆ ಹಾರಿದ್ದ ಚೈತ್ರ ಕಲ್ಯಾಣಪುರ ನಿವಾಸಿ ಚಂದ್ರಶೇಖರ್ ಅವರ ಪುತ್ರಿ.
ಯುವತಿ ನದಿಗೆ ಜಿಗಿಯುತ್ತಲೇ ಸ್ಥಳೀಯರು ಸಂಬಂದಪಟ್ಟವರಿಗೆ ಮಾಹಿತಿ ನೀಡಿದ್ದು, ಅಗ್ನಿಶಾಮಕ ದಳ, ಮುಳುಗು ತಜ್ಞರು ಎರಡು ದಿನಗಳಿಂದ ಹುಡುಕಾಟ ನಡೆಸಿದ್ದರು. ಇವತ್ತು ಚೈತ್ರಾ ಮೃತದೇಹ ಪತ್ತೆಯಾಗಿದೆ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈವರೆಗೂ ಕೂಡ ಆತ್ಮಹತ್ಯೆಗೆ ಸ್ಪಷ್ಟ ಕಾರಣ ಗೊತ್ತಾಗಿಲ್ಲ.
ಇದನ್ನೂ ಓದಿರಿ:
ಮೊಬೈಲಿನಲ್ಲಿ ಮಾತನಾಡುತ್ತಾ ಕಲ್ಯಾಣಪುರ ಸೇತುವೆಯಿಂದ ನದಿಗೆ ಹಾರಿದ ಯುವತಿಗಾಗಿ ಶೋಧ- https://www.kannadigaworld.com/kannada/karavali-kn/284729.html
Comments are closed.