ಉಡುಪಿ: ವಿಪರೀತ ಜ್ವರದಿಂದ ಬಳಲುತ್ತಿದ್ದ ಕಾರ್ಕಳ ಎ.ಎನ್.ಎಫ್ ಕ್ಯಾಂಪ್ನ ಪೊಲೀಸ್ ಕಾನ್ಸ್ಟೇಬಲ್ ಮೃತಪಟ್ಟ ಘಟನೆ ನಡೆದಿದೆ. ರಮೇಶ ಮ್ಯಾಗರಿ (41) ಮೃತಪಟ್ಟ ಪೊಲೀಸ್ ಸಿಬ್ಬಂದಿ.
ಕಾರ್ಕಳ ಎ.ಎನ್.ಎಫ್ ಕ್ಯಾಂಪ್ನಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಮೇಶ ಮ್ಯಾಗರಿ ಅವರು ಕರ್ತವ್ಯದಲ್ಲಿರುವ ಸಮಯ ವಿಪರೀತ ಜ್ವರದ ಬಂದ ಕಾರಣ ಚಿಕಿತ್ಸೆ ಬಗ್ಗೆ ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು, 15 ದಿನಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರ ಸಲಹೆ ನೀಡಿದ್ದರು. ಇದರಂತೆಯೇ ಮೇಲಾಧಿಕಾರಿಯವರ ಅನುಮತಿ ಹಾಗೂ ಆದೇಶದಂತೆ ರಮೇಶ ಮ್ಯಾಗರಿಯವರನ್ನು ಅವರ ಊರಿಗೆ ಬಿಟ್ಟು ಬರುವಂತೆ ಸಿಬ್ಬಂದಿ ಪಿ.ಆರ್ ದಂಬಳ್ರವರನ್ನು ಜೊತೆಯಲ್ಲಿ ಕಳುಹಿಸಲಾಗಿತ್ತು.
ಶನಿವಾರ ಸಂಜೆ ಬಾಗಲಕೋಟೆಗೆ ಹೋಗುವ ಸಲುವಾಗಿ ಉಡುಪಿ ಕೆಎಸ್ಆರ್ಟಿ ಬಸ್ ನಿಲ್ದಾಣಕ್ಕೆ ಬಂದಿದ್ದು ರಮೇಶ ಮ್ಯಾಗರಿಯವರು ತನಗೆ ಸುಸ್ತಾಗುತ್ತಿದೆ ಎಂದು ಅಲ್ಲಿಯೇ ನೆಲದ ಮೇಲೆ ಕುಳಿತಿದ್ದು ಅವರನ್ನು ಮಾತನಾಡಿಸಲು ಪಿ.ಆರ್ ದಂಬಳ್ರವರು ಪ್ರಯತ್ನಿಸಿದಾಗ ಪ್ರತಿಕ್ರಿಯೆ ಬಂದಿರಲಿಲ್ಲ. ಈ ಬಗ್ಗೆ ANF ಕ್ಯಾಂಪ್ನ ಮೇಲಾಧಿಕಾರಿಯವರಿಗೆ ವಿಷಯ ತಿಳಿಸಿ ಉಡುಪಿ ನಗರ ಪೊಲೀಸ್ ಠಾಣಾ ಹೊಯ್ಸಳ ವಾಹನದಲ್ಲಿ ಚಿಕಿತ್ಸೆ ಬಗ್ಗೆ ಸುಮಾರು ಸಂಜೆ 6:30 ಗಂಟೆಗೆ ಸರಕಾರಿ ಅಜ್ಜರಕಾಡು ಆಸ್ಪತ್ರೆಗೆ ಕರೆತಂದಾಗ ಪರೀಕ್ಷಿಸಿದ ವೈದ್ಯರು ರಮೇಶ ಮ್ಯಾಗರಿಯವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆನ್ನಲಾಗಿದೆ.
ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ಸಾಂದರ್ಭಿಕ ಚಿತ್ರ)
Comments are closed.