ಕರಾವಳಿ

ಮೀನಿನ ತಲೆಭಾಗ ತಿಂದು ಅಸ್ವಸ್ಥ ಪ್ರಕರಣ : ಮೀನಿನ ನಿಗೂಡ ರಹಸ್ಯ ಬಯಲು

Pinterest LinkedIn Tumblr

kemberi_fish_1

ಉಳ್ಳಾಲ, ಅ.09 : ಇತ್ತೀಚೆಗೆ ಉಳ್ಳಾಲ ಸುತ್ತಮುತ್ತಲು ವರದಿಯಾದ ಮೀನಿನ ತಲೆಭಾಗ ತಿಂದು ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಕೊಂಡ ಪ್ರಕರಣಗಳನ್ನು ಪರಿಶೀಲಿಸಲಾಗಿದೆ ಇದು ಕೆಂಬೇರಿ (2-spoiled red snapped) ಮೀನಿನ ತಲೆಯ ಸೇವನೆಯಿಂದಾಗಿದ್ದು, ಈ ಜಾತಿಯ ಮೀನು ಹವಳ ದ್ವೀಪ, ಕಲ್ಲುಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ವರದಿಯಾದ ಪ್ರಕರಣಗಳಲ್ಲಿ ಸಂಸ್ಕರಣಾ ಘಟಕವು ಈ ಮೀನನ್ನು ಕೊಚ್ಚಿನ್‌ನಿಂದ ಪಡಕೊಂಡಿದ್ದು, ತನಿಖೆ ನಡೆಸಲಾಗಿ ಈ ಮೀನನ್ನು ಸೌತ್‌ಆಫ್ರಿಕಾ / ಮಾಲ್ಡೀವ್ಸ್ ಪಕ್ಕದ ನೀರಿನಿಂದ ಹಿಡಿದು ಪಡೆದಿದ್ದು, ಈ ಅಸ್ವಸ್ಥತೆಗೆ ಕಾರಣವು ಸಿಗ್ವುಟೇರಾ ಎಂದು ಶಂಕಿಸಲಾಗಿದೆ.

ಸಮುದ್ರದಲ್ಲಿ ಉಂಟಾದ ಬ್ಲೂಮ್‌ನಿಂದ (dinoflagellates) ಈ ವಿಷಕಾರಿ ಅಂಶವು ಉತ್ಪತ್ತಿಯಾಗಿದ್ದು, ಇದನ್ನು ತಿಂದ ಸಸ್ಯಾಹಾರಿ ಮೀನುಗಳನ್ನು ತಿನ್ನುವ ಮಾಂಸಾಹಾರಿ ಮೀನಿನ ತಲೆ, ಕಿವಿರುಭಾಗ ಇತ್ಯಾದಿಗಳಲ್ಲಿ ವಿಷವು ಸಂಗ್ರಹವಾಗಿ, ಸೇವಿಸುವವರಿಗೆ ಅಸ್ವಸ್ಥತೆ ಉಂಟಾಗಿದೆ.

ಈ ಆಲ್ಗೆಯು ಕರ್ನಾಟಕ ಸಮುದ್ರದಲ್ಲಿ ಕಾಣಿಸದೇ ಇರುವುದರಿಂದ ಇಲ್ಲಿ ಈ ಸಮಯದಲ್ಲಿ ಹಿಡುವಳಿಯಾದ ಮೀನುಗಳು ಆಹಾರ ಯೋಗ್ಯವಾಗಿದೆ. ಆದರೆ ಬೇರೆ ಸಮುದ್ರದಿಂದ ವಿಷಕಾರಿಯಾದ ಆಲ್ಗೆ (dinoflagellates) ಉತ್ಪತ್ತಿಯಾದ ನೆಲೆಯಿಂದ ಹಿಡುವಳಿಯಾದ Reef ಜಾತಿಯ ಮೀನುಗಳನ್ನು ಸೇವಿಸುವುದು ಆರೋಗ್ಯ ದೃಷ್ಟಿಯಿಂದ ಒಳಿತಲ್ಲ.

ಆದ್ದರಿಂದ ಫಿಶ್‌ಮಾರ್ಕೆಟ್‌ಗಳಲ್ಲಿ ಅಸ್ವಾಭಾವಿಕವಾಗಿ ಪತ್ತೆ ಆಗುವ ದೊಡ್ಡ ಗಾತ್ರದ ಕೆಂಬೇರಿ ಜಾತಿಯ ಮೀನುಗಳನ್ನು ಈ ಋತುವಿನಲ್ಲಿ ಖರೀದಿಸಬಾರದೆಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. ಹಾಗೂ ಸಂಸ್ಕರಣಾ ಘಟಕಗಳು ಈ ಮೀನಿನ ತ್ಯಾಜ್ಯವನ್ನು ಆಹಾರವಾಗಿ ಹೊರಗಡೆ ನೀಡಬಾರದೆಂದು ಸೂಚನೆ ನೀಡಲಾಗಿದೆ.

Comments are closed.