ಪ್ರಮುಖ ವರದಿಗಳು

ಅ.22ಕ್ಕೆ ನಟ ದರ್ಶನ್ ಮನೆ ತೆರವು; ಮನೆ ಧ್ವಂಸವಿಲ್ಲ…!

Pinterest LinkedIn Tumblr

darshan-house1

ಬೆಂಗಳೂರು: ತೀವ್ರ ವಿವಾದ ಸೃಷ್ಟಿಸುವುದರೊಂದಿಗೆ ಆಕ್ರೋಶಕ್ಕೆ ಕಾರಣವಾಗಿದ್ದ ದರ್ಶನ್ ಮನೆ ಹಾಗೂ ಎಸ್ ಎಸ್ ಆಸ್ಪತ್ರೆ ಒತ್ತುವರಿ ತೆರವಿಗೆ ಮುಹೂರ್ತ ಫಿಕ್ಸ್ ಮಾಡಲಾಗಿದೆ.

ಈ ಕುರಿತಾಗಿ ಹೇಳಿಕೆ ನೀಡಿರುವ ಜಿಲ್ಲಾಧಿಕಾರಿ ಶಂಕರ್, ‘ಅ.22ಕ್ಕೆ ದರ್ಶನ್ ನಿವಾಸ ಮತ್ತು SS ಆಸ್ಪತ್ರೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತೇವೆ. ಒತ್ತುವರಿ ಜಾಗದಲ್ಲಿ ನಿರ್ಮಿಸಿರುವ ದರ್ಶನ್ ಮನೆ ಹಾಗೂ ಆಸ್ಪತ್ರೆಯನ್ನು ನಾವು ಧ್ವಂಸಗೊಳಿಸುವುದಿಲ್ಲ. ಆದರೆ ಈ ಒತ್ತುವರಿ ಜಾಗವನ್ನು ಸರ್ಕಾರದ ವಶಕ್ಕ ಪಡೆಯಲಾಗುವುದು ಎಂದಿದ್ದಾರೆ.

ಐಡಿಯಲ್ ಹೋಮ್ ಒತ್ತುವರಿ ತೆರವು ಹಿನ್ನೆಲೆಯಲ್ಲಿ, ಇಲ್ಲಿನ 7 ಎಕರೆ 31 ಗುಂಟೆಯನ್ನು ಸರ್ಕಾರದ ಜಾಗ ಎಂದು ನಾಮಫಲಕ ಹಾಕಿ ಒತ್ತುವರಿ ವಶಕ್ಕೆ ಪಡೆಯಲಾಗುವುದು. ಇನ್ನು ಒತ್ತುವರಿದಾರರಿಗೆ ಚಿರಾಸ್ತಿ ಖಾಲಿ ಮಾಡಲು 2 ದಿನ ಅವಕಾಶ ನೀಡಲಾಗುವುದು ಎಂದೂ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಕಟ್ಟಡಗಳ ಧ್ವಂಸವಿಲ್ಲ, ಆದರೆ ಸರ್ಕಾರಿ ಜಾಗವೆಂದು ಘೋಷಣೆ
ಈಗಾಗಲೇ ರಾಜಕಾಲುವೆ ಮೇಲಿರುವ ಕಟ್ಟಡಗಳನ್ನು ಧ್ವಂಸಗೊಳಿಸಲು ಸರ್ಕಾರ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ. ಈ ಅನ್ವಯ ನಟ ದರ್ಶನ್ ಮನೆ ಹಾಗೂ ಎಸ್. ಎಸ್ ಆಸ್ಪತ್ರೆ ಬಿ ಖರಾಬು ಭೂಮಿಯಲ್ಲಿ ಬರುತ್ತದೆ. ಹೀಗಾಗಿ ಒತ್ತುವರಿ ತೆರವು ಖರ್ಚು ಮತ್ತು ಪರಿಸ್ಥಿತಿಯನ್ನು ನಿಯಂತ್ರಿಸುವ ಸಲುವಾಗಿ ದರ್ಶನ್ ಮನೆ ಹಾಗೂ ಎಸ್.ಎಸ್ ಆಸ್ಪತ್ರೆಯನ್ನು ಸರ್ಕಾರಿ ಭೂಮಿ ಎಂದು ಘೋಷಿಸಲಾಗುತ್ತದೆ. ಮುಂದೆ ಈ ಕಟ್ಟಡಗಳನ್ನು ಸರ್ಕಾರಿ ಕಚೇರಿಗಳನ್ನಾಗಿ ಮಾರ್ಪಾಡು ಮಾಡಲಾಗುತ್ತದೆ.

Comments are closed.