ಶ್ರೀನಗರ: ಭಾರತೀಯ ಯೋಧನನ್ನು ಗುಂಡಿಟ್ಟು ಹತ್ಯೆ ಮಾಡಿರುವ ಉಗ್ರರು ಆತನ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಅಟ್ಟಹಾಸ ಮೆರೆದಿರುವ ದುಷ್ಕೃತ್ಯ ಜಮ್ಮು ಕಾಶ್ಮೀರದ ಕುಪ್ವಾರದಲ್ಲಿ ನಡೆದಿದೆ.
ಕುಪ್ವಾರಾ ವಲಯದಲ್ಲಿ ಗಡಿ ನಿಯಂತ್ರಣ ರೇಖೆ ಒಳನುಗ್ಗಿದ ಉಗ್ರರು ಭಾರತೀಯ ಯೋಧನನ್ನು ಕೊಂದಿದ್ದಾರೆ. ಯೋಧನ ಕತ್ತರಿಸಿದ ಶರೀರ ಮಚಿಲ್ ವಲಯದಲ್ಲಿ ಪತ್ತೆಯಾಗಿದೆ. ಭಾರತೀಯ ಸೇನೆ ನಡೆಸಿದ ಗುಂಡಿನ ದಾಳಿಗೆ ಓರ್ವ ಉಗ್ರ ಬಲಿಯಾಗಿದ್ದಾನೆ ಎಂದು ಸೇನಾ ಮೂಲಗಳು ತಿಳಿಸಿವೆ.
ಗಡಿ ನಿಯಂತ್ರಣ ರೇಖೆ ಬಳಿ ಈ ಕೃತ್ಯ ನಡೆದಿದ್ದು, ಉಗ್ರರು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಪ್ರದೇಶಕ್ಕೆ ನುಗ್ಗುವ ಮುನ್ನ ಯೋಧನ ದೇಹವನ್ನು ಛಿದ್ರಗೊಳಿಸಿದ್ದಾರೆ. ಪಾಕಿಸ್ತಾನ ಸೇನೆ ಗುಂಡಿನ ದಾಳಿ ನಡೆಸುವ ಮೂಲಕ ಉಗ್ರರು ಪರಾರಿಯಾಗಲು ಸಹಾಯ ಮಾಡಿದೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.
Comments are closed.