ರಾಷ್ಟ್ರೀಯ

ದಾಖಲೆಗಳಿಗೆ ಎಡಗೈಯಲ್ಲಿ ಹೆಬ್ಬೆಟ್ಟು ಒತ್ತಿದ ಜಯಲಲಿತಾ !

Pinterest LinkedIn Tumblr

Jayalalita-700

ಚೆನ್ನೈ: ಅನಾರೋಗ್ಯದಿಂದ ಆಸ್ಪತ್ರೆ ಸೇರಿರುವ ತಮಿಳುನಾಡು ಸಿಎಂ ಜಯಲಲಿತಾ, ನವೆಂಬರ್‌ 19 ರಂದು ಉಪಚುನಾವಣೆಗೆ ಸ್ಪರ್ಧಿಸುತ್ತಿರುವ ತಮ್ಮ ಪಕ್ಷದ ಅಭ್ಯರ್ಥಿಯೊಬ್ಬರ ನಾಮಪತ್ರ, ಬಿ-ಫಾರಂಗೆ ಸಂಬಂಧಿಸಿದ ದಾಖಲೆಗಳಿಗೆ ಎಡಗೈ ಹೆಬ್ಬೆಟ್ಟು ಒತ್ತಿದ್ದಾರೆ.

ನವೆಂಬರ್‌ 19ರಂದು ತಿರುಪುರನಾಗುಂಡ್ರಂ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದೆ. ಎಐಡಿಡಿಎಂಕೆ ಪಕ್ಷದಿಂದ ಎ.ಕೆ.ಬೋಸ್‌ ಸ್ಪರ್ಧಿಸುತ್ತಿದ್ದಾರೆ. ಜಯಾ ಎಐಡಿಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದು, ಚುನಾವಣೆಗೆ ಸ್ಪರ್ಧಿಸುವ ಅರ್ಭ್ಯರ್ಥಿಗಳ ಬಿ-ಫಾರಂಗೆ ಸಹಿ ಹಾಕುವುದು ಕಡ್ಡಾಯ. ಅಂತೆಯೇ ಅಸ್ವಸ್ಥರಾಗಿ ಸಹಿ ಹಾಕದ ಸ್ಥಿತಿಯಲ್ಲಿರೋ ಕಾರಣಕ್ಕೆ ಜಯಾ ಎ.ಕೆ.ಬೋಸ್ ಅವರ ಬಿ-ಪಾರಂ ಸೇರಿದಂತೆ ಹಲವು ಪತ್ರಗಳಿಗೆ ಎಡಗೈ ಹೆಬ್ಬೆರಳ ಮುದ್ರೆ ಹಾಕಿದ್ದಾರೆ.

ಒಟ್ಟು ಐದು ಕಡೆ ಜಯಾ ಎಡಗೈನ ಹೆಬ್ಬೆರಳಿನ ಹೆಬ್ಬೆಟ್ಟು ಒತ್ತಿದ್ದಾರೆ. ಜಯ ಹೆಬ್ಬೆರಳು ಮುದ್ರೆ ಹಾಕಿರುವ ದಾಖಲೆಗಳನ್ನು ಎಐಎಡಿಎಂಕೆ ಮಾಧ್ಯಮಗಳಿಗೆ ಬಿಡುಗಡೆ ಮಾಡಿದೆ. ಮದ್ರಾಸ್‌ ಮೆಡಿಕಲ್ ಕಾಲೇಜ್ ವೈದ್ಯರು ಜಯಾ ಹೆಬ್ಬೆಟ್ಟನ್ನು ದೃಢೀಕರಿಸಿರುವುದರಿಂದ ಚುನಾವಣಾ ಆಯೋಗ ಬೋಸ್ ಅವರ ನಾಮಪತ್ರವನ್ನು ಸ್ವೀಕರಿಸಿದೆ.

ಆನಾರೋಗ್ಯದ ಕಾರಣದಿಂದಾಗಿ ಚೆನ್ನೈ ಅಪೊಲೋ ಆಸ್ಪತ್ರೆಗೆ ದಾಖಲಾಗಿರವ ಜಯಲಲಿತಾ ಚಿಕಿತ್ಸೆ ಪಡೆಯುತ್ತಿದ್ದಾರೆ.

Comments are closed.