ನವದೆಹಲಿ: 500 ಹಾಗೂ 1000 ರೂಪಾಯಿ ನಕಲಿ ನೋಟುಗಳು ಬಂದಿವೆ. ವ್ಯವಹರಿಸುವಾಗ ಈ ಬಗ್ಗೆ ಎಚ್ಚರಿಕೆ ಇರಲಿ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಅಲ್ಲದೇ ನಕಲಿ ಅಥವಾ ಅಸಲಿ ಯಾವುದು ಎಂದು ಗುರುತಿಸೋದು ಕೂಡಾ ಗೊತ್ತು. ಆದರೆ ಈಗ ಅಂಗಡಿ, ಮಾರ್ಕೆಟ್ ಸೇರಿದಂತೆ ಎಲ್ಲೆಡೆ 10 ರೂಪಾಯಿ ನಕಲಿ ನಾಣ್ಯ ಚಲಾವಣೆಯಾಗುತ್ತಿದೆ.
ಈ 10 ರೂಪಾಯಿ ನಕಲಿ ನಾಣ್ಯದ ಜಾಲವನ್ನು ಕಳೆದ ತಿಂಗಳು ಕ್ರೈಂ ಬ್ರಾಂಚ್ ಬಯಲಿಗೆಳೆದಿತ್ತು. ಆದರೂ ನಕಲಿ ನಾಣ್ಯ ಸರಾಗವಾಗಿ ಚಲಾವಣೆಯಾಗುತ್ತಿದೆ. ಸಣ್ಣ ವ್ಯಾಪಾರಸ್ಥರಲ್ಲಿ, ಟೀ ಸ್ಟಾಲ್ ಗಳಲ್ಲಿ ಈ ನಾಣ್ಯ ಚಲಾವಣೆಯಾಗುತ್ತಿದೆ…ಹಾಗಾಗಿ ನೀವೂ ಈ ಬಗ್ಗೆ ಎಚ್ಚರಿಕೆಯಿಂದಿರಿ…ಅಷ್ಟೇ ಅಲ್ಲ 10 ರೂಪಾಯಿ ನಾಣ್ಯ ನಕಲಿ ಯಾವುದು, ಅಸಲಿ ಯಾವುದು ಎಂಬುದು ನಿಮಗೂ ಗೊತ್ತಿರಲಿ..ಅದಕ್ಕಾಗಿ ವಿಡಿಯೋ ವೀಕ್ಷಿಸಿ.
Comments are closed.