ಕಟಕ್: ಅತ್ಯಾಚಾರ ಆರೋಪಿಗೆ ಚಪ್ಪಲಿ ಹಾರ ಹಾಕಿ ಊರೆಲ್ಲಾ ಮೆರವಣಿಗೆ ಮಾಡಿಸಿದ್ದರಿಂದ ಅವಮಾನಗೊಂಡ ಆತ ನಾಪತ್ತೆಯಾಗಿರುವ ಘಟನೆ ಕುರ್ದಾ ಜಿಲ್ಲೆಯ ಬೆತ್ತೆಂದಾ ಗ್ರಾಮದಲ್ಲಿ ನಡೆದಿದೆ.
ಕಕುರುದ್ರುಪುರ ಗ್ರಾಮದ ಪ್ರಶಾಂತ್ ಕಾಮೆಲಾ ನಾಪತ್ತೆಯಾಗಿರುವ ಆರೋಪಿ, ತನ್ನ ಪತಿ ನಾಪತ್ತೆಯಾಗಿದ್ದಾರೆಂದು ಆತನ ಪತ್ನಿ ಸರಿತಾ ದೂರು ದಾಖಲಿಸಿದ್ದಾಳೆ. ನನ್ನ ಪತಿ ಮುಗ್ಧ, ಆತ ಇಂಥ ಕೆಲಸ ಮಾಡುವುದಿಲ್ಲ ಎಂದು ಹೇಳಿರು ಆಕೆ ಗ್ರಾಮದ ಜನ ಮಾಡಿದ ಅವಮಾನದಿಂದಾಗಿ ನನ್ನ ಪತಿ ನಾಪತ್ತೆಯಾಗಿದ್ದಾರೆ ಎಂದು ದೂರು ನೀಡಿದ್ದಾಳೆ.
ಶಾಲೆಗೆ ತೆರಳಿದ್ದ ಬೆತ್ತೆಂಡಾ ಗ್ರಾಮದ 7ನೇ ತರಗತಿ ವಿದ್ಯಾರ್ಥಿನಿ ಅಕ್ಟೋಬರ್ 21 ರಂದು ಗ್ಯಾಸ್ಟ್ರಿಕ್ ಸಮಸ್ಯೆಯಿಂದಾಗಿ ಬಳಲುತ್ತಿದ್ದಳು. ಈ ವೇಳೆ ಶಾಲೆಯ ಪ್ರಾಂಶುಪಾಲರು ಆಕೆಯನ್ನು ಶಾಲೆಯ ವ್ಯಾನ್ ಡ್ರೈವರ್ ಆಗಿದ್ದ ಪ್ರಶಾಂತ್ ಕಾಮೇಲಾ ಜೊತೆ ಮನೆಗೆ ಕಳುಹಿಸಿದ್ದಾರೆ. ಈ ವೇಳೆ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದ ಆತ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿದ್ದಾನೆ.
ನಂತರ ಅಲ್ಲಿಂದ ತೆರಳಿ ಆಕೆಯನ್ನು ಮನೆಯ ಹತ್ತಿರ ಕರೆದೊಯ್ದು, ನಂತರ ಅಲ್ಲಿಂದ ವಾಪಸ್ ಶಾಲೆ ಬಳಿ ಕರೆ ತಂದಿದ್ದಾನೆ. ಈ ವೇಳೆ ಶಾಲೆಯ ಟೀಚರ್ ಬಳಿ ಆಕೆ ನಡೆದ ವಿಷಯವನ್ನೆಲ್ಲಾ ತಿಳಿಸಿದ್ದಾಳೆ.
ನಂತರ ಮನೆಗೆ ಬಂದ ಬಾಲಕಿ ತನ್ನ ಪೋಷಕರಿಗೆ ವಿಷಯ ತಿಳಿಸಿದ್ದಾಳೆ. ಅಕ್ಟೋಬರ್ 30 ರಂದು ಸೇರಿದೆ ಗ್ರಾಮದ ಕಂಗಾರು ಕೋರ್ಟ್, ಮಾಡಿದ ತಪ್ಪಿಗೆ 5 ಲಕ್ಷ ದಂಡ ಕಟ್ಟುವಂತೆ ಸೂಚಿಸಿದೆ, ಆದರೆ ಆತ ತನ್ನ ಬಳಿ ಹಣವಿಲ್ಲ ಎಂದು ಹೇಳಿದ್ದಾನೆ. ಹೀಗಾಗಿ ಆತನಿಗೆ ಚಪ್ಪಲಿ ಹಾರ ಹಾಕಿ ಊರಿನ ತುಂಬೆಲ್ಲಾ ಮೆರವಣಿಗೆ ಮಾಡಿದ್ದಾರೆ.
ಆತನನ್ನು ಮೆರವಣಿಗೆ ಮಾಡುವ ವಿಡಿಯೋ ಹಲವು ವಾಹಿನಿಗಳಲ್ಲಿ ಪ್ರಸಾರಗೊಂಡಿದೆ. ಸಂತ್ರಸ್ತೆಯ ತಂದೆ ಪ್ರಶಾಂತ್ ವಿರುದ್ಧ ದೂರು ದಾಖಲಿಸಿದ್ದಾರೆ. ವೈದ್ಯಕೀಯ ಪರೀಕ್ಷೆ ನಂತರ ಸಂತ್ರಸ್ತೆ ಹೇಳಿಕೆ ದಾಖಲಿಸಲಾಗಿದೆ.
Comments are closed.