ಮಂಗಳೂರು, ನ.8: ದ.ಕ. ಜಿಲ್ಲೆಗೆ ಹೆಚ್ಚುವರಿ 25 ಗಸ್ತು ಪೊಲೀಸ್ ವಾಹನಗಳನ್ನು ನೀಡಲಾಗುವುದು ಇದರಿಂದ ಜಿಲ್ಲೆಯ ಯಾವುದೇ ಸ್ಥಳದಲ್ಲಿ ಅಹಿತಕರ ಘಟನೆ ಸಂಭವಿಸಿದರೆ ತಕ್ಷಣ ಪೊಲೀಸರು ಅತೀ ಶೀಘ್ರವಾಗಿ ಘಟನಾ ಸ್ಥಳಕ್ಕೆ ತಲುಪಲು ಸಾಧ್ಯವಾಗುತ್ತದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.
ನಗರದ ಸರ್ಕ್ಯುಟ್ ಹೌಸ್‌ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಈಗಾಗಲೇ ಪೊಲೀಸ್ ಗಸ್ತು ವಾಹನ ನೀಡಲಾಗಿದ್ದು, ಪ್ರಕರಣ ನಡೆದ ಸ್ಥಳಕ್ಕೆ 5 ನಿಮಿಷದೊಳಗೆ ತಲುಪಲು ಸಾಧ್ಯವಾಗಿದೆ. ಇದೇ ರೀತಿ ಮಂಗಳೂರು ಪೊಲೀಸ್ ಕಮಿ ಷನರೇಟ್ ವ್ಯಾಪ್ತಿಯಲ್ಲೂ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಿದರು.
ಟಿಪ್ಪು ಜಯಂತಿ ಆಚರಣೆ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಟಿಪ್ಪು ಕಿರೀಟ ಧರಿಸಿ, ಖಡ್ಗ ಹಿಡಿದು ಟಿಪ್ಪು ಪರ ಘೋಷಣೆ ಕೂಗಿದವರೇ ಇಂದು ಟಿಪ್ಪು ಜಯಂತಿ ಆಚರಣೆಯನ್ನು ವಿರೋಧಿಸುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದರು.
ಸಚಿವರಾದ ಬಿ.ರಮಾನಾಥ ರೈ, ಯು.ಟಿ.ಖಾದರ್ ಈ ವೇಳೆ ಉಪಸ್ಥಿತರಿದ್ದರು.
Comments are closed.