ತಿರುವನಂತಪುರಂ: ಖ್ಯಾತ ನಟ ಮೋಹನ್ ಲಾಲ್ ನಟನೆಯ ‘ಪುಲಿಮುರುಗನ್’ ಚಿತ್ರ ನೂರು ಕೋಟಿ ಗಳಿಸುವ ಮೂಲಕ ಈ ಸಾಧನೆ ಮಾಡಿದ ಮೊದಲ ಮಲೆಯಾಳಂ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸುಮಾರು 25ಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಾಗಿದ್ದ ‘ಪುಲಿಮುರುಗನ್’ ಅಕ್ಟೋಬರ್ 7ರಂದು ಕೇರಳದಾದ್ಯಂತ ತೆರೆಗೆ ಅಪ್ಪಳಿಸಿ, ಮೊದಲ ದಿನವೇ ನಾಲ್ಕು ಕೋಟಿ ಗಳಿಸಿ ಮಲೆಯಾಳಂ ಚಿತ್ರ ರಂಗದ ಮಟ್ಟಿಗೆ ಮೊದಲ ದಿನದ ಗಳಿಕೆಯಲ್ಲೂ ಹೊಸ ಮೈಲುಗಲ್ಲು ಸ್ಥಾಪಿಸಿತ್ತು.
ಮನುಷ್ಯ ಹಾಗೂ ಪ್ರಾಣಿ ಸಂಕುಲದ ನಡುವಿನ ಸಂಘರ್ಷದ ಎಳೆಯೊಂದನ್ನು ಇಟ್ಟುಕೊಂಡು ಕತೆ ಎಣೆದಿದ್ದ ನಿರ್ದೇಶಕ ವೈಸಾಖ್ ಚಿತ್ರ ರಸಿಕರ ಮನ ಗೆದ್ದಿದ್ದಾರೆ.
ಸಾಹಸ ಪ್ರಧಾನ ಚಿತ್ರವಾಗಿರುವ ಇದರಲ್ಲಿ ಮೋಹನ್ ಲಾಲ್ ಪತ್ನಿಯ ಪಾತ್ರದಲ್ಲಿ ಬೆಂಗಾಳಿ ಚೆಲುವೆ ಕಮಲಿನಿ ಮುಖರ್ಜಿ ನಟಿಸಿದ್ದಾರೆ.
ಫೇಸ್‌ಬುಕ್ ನಲ್ಲಿ ಚಿತ್ರತಂಡ ಹಾಗೂ ಅಭಿಮಾನಿಗಳಿಗೆ ಧನ್ಯವಾದ ಹೇಳುವ ಮೂಲಕ ನಾಯಕ ಮೋಹನ್ ಲಾಲ್ ಚಿತ್ರದ ಸಾಧನೆಯ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.
Comments are closed.