ರಾಷ್ಟ್ರೀಯ

ಮೂಟೆಗಳಲ್ಲಿ 500 ಮತ್ತು 1000 ನೋಟುಗಳನ್ನು ತಂದು ಬೆಂಕಿ ಇಟ್ಟರು

Pinterest LinkedIn Tumblr

mooteಬರೇಲಿ(ನ.09:): ನಿನ್ನೆ ರಾತ್ರಿ ಪ್ರಧಾನಮಂತ್ರಿ ನರೇಂದ್ರಮೋದಿ, 500 ಮತ್ತು 1000 ರೂಪಾಯಿ ನೋಟುಗಳನ್ನ ರದ್ದುಗೊಳಿಸಿದ ಆದೇಶ ಪ್ರಕಟಿಸಿದ ಬೆನ್ನಲ್ಲೇ ಕಪ್ಪುಹಣ ಅಡಗಿಸಿಟ್ಟಿರುವವರ ಎದೆಯಲ್ಲಿ ನಡುಕ ಉಂಟಾಗಿರುವುದು ಸುಳ್ಳಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಉತ್ತರಪ್ರದೇಶದ ರಾಯ್ ಬರೇಲಿ ಬಳಿ ಮೂಟೆಗಳಲ್ಲಿ ಹಣವನ್ನ ತಂದು ಬೆಂಕಿ ಇಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ಖಾಸಗಿ ಕಂಪನಿಯೊಂದರ ನೌಕರರು ಮೂಟೆಗಳಲ್ಲಿ 500 ಮತ್ತು 1000 ರೂಪಾಯಿ ನೋಟುಗಳನ್ನ ತಂದು ಸಿಬಿ ಗಂಜ್`ನ ಪಾರ್ಸಾ ಖೇಡಾ ರಸ್ತೆಯಲ್ಲಿ ಒಂದೆಡೆ ಹಾಕಿ ಬೆಂಕಿ ಹಚ್ಚಿದ್ದಾರೆ ಎಂದು ಎನ್`ಡಿಟಿವಿ ವರದಿ ಮಾಡಿದೆ.
ಮೊದಲಿಗೆ ನೋಟುಗಳನ್ನ ಕಟ್ ಮಾಡಿ ಹಾಳುಗೆಡವಲಾಗಿದೆ. ಬಳಿಕ ಬೆಂಕಿಹಚ್ಚಲಾಗಿದೆ ಎಂದು ಪೊಳಿಸರು ತಿಳಿಸಿದ್ದಾರೆ. ಘಟನೆ ಕುರಿತಂತೆ ಅಧಿಕಾರಿಗಳು ಆರ್`ಬಿಐಗೆ ಮಾಹಿತಿ ನೀಡಿದ್ದಾರೆ.

Comments are closed.