ವಿಜಯಪುರ (ನ.09): ವಿಜಯಪುರದಲ್ಲಿ 500, 1000 ಸಾವಿರ ನೋಟು ಚಲಾವಣೆ ರದ್ದುಪಡಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ, ವಿನೂತನ ಪ್ರತಿಭಟನೆ ಮಾಡಾಲಾಯ್ತು. ಮುದ್ದೆಬಿಹಾಳ ತಾಲೂಕು ತಾಳಿಕೋಟೆ ಪಟ್ಟಣದಲ್ಲಿ ಸಾರ್ವಜನಿಕರು ಕತ್ತೆಗಳಿಗೆ 500 ರೂಪಾಯಿ ನೋಟ್ ತಿನ್ನಿಸಿ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ದಿಢೀರ್ ನಿರ್ಧಾರದಿಂದ ಸಾಮಾನ್ಯ ಜನರಿಗೆ ತೀವ್ರ ತೊಂದರೆಯಾಗಿದೆ. ದೈನಂದಿನ ವ್ಯವಹಾರಕ್ಕೆ ಜನರು ಪರದಾಡುವಂತಾಗಿದೆ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು.
Comments are closed.