ಅರಬ್ ಸಂಯುಕ್ತ ಸಂಸ್ಥಾನದ ಶಾರ್ಜಾ ವಿಭಾಗದಲ್ಲಿ ಕಳೆದ ಹದಿನಾಲ್ಕು ವರ್ಷಗಳಿಂದ ಕನ್ನಡ ಪರ ಚಟುವಟಿಕೆಗಳನ್ನು ನಡೆಸಿಕೊಂಡು ಬರುತಿರುವ ಶಾರ್ಜಾ ಕರ್ನಾಟಕ ಸಂಘ ಯು.ಎ.ಇ.ಯಲ್ಲಿ ಸಾಧನೆ ಮಾಡಿರುವ ಕನ್ನಡಿಗರನ್ನು ಆಯ್ಕೆಮಾಡಿ ಪ್ರತಿಷ್ಠಿತ “ಮಯೂರ ಪ್ರಶಸ್ತಿ”ಯನ್ನು ಪ್ರದಾನಿಸಿ ಗೌರವಿಸಿಕೊಂಡು ಬರುತಿದೆ. ಈ ಬಾರಿ ಶ್ರೀ ಜೋಸೆಫ್ ಮಥಿಯಸ್ ರವರಿಗೆ ನೀಡಿ ಗೌರವಿಸಲಾಗುತಿದೆ. ಶ್ರೀಯುತರು ಸುಮಧುಅರ ಕಂಠಸಿರಿಯ ಗಾಯಕರಾಗಿ, ನಟರಾಗಿ, , ಸಮಾಜ ಸೇವಕರಾಗಿ, ಯು.ಎ.ಇ. ಯಲ್ಲಿ ನಡೆಯುವ ಎಲ್ಲಾ ಕರ್ನಾಟಕ ಪರ ಸಂಘಟನೆಗಳ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸದಾ ಬೆಂಬಲ ಪೊತ್ಸಾಹ, ಪ್ರಾಯೋಜಕತ್ವ ನೀಡಿ ಗಲ್ಫ್ ನಾಡಿನಲ್ಲಿ ಕರ್ನಾಟಕದ ಕಲೆ, ಭಾಷೆ, ಸಂಸ್ಕೃತಿ ಸದಾ ವಿಜೃಂಭಿಸುವಲ್ಲಿ ನೀಡಿರುವ ಕೊಡುಗೆ ಅಪಾರವಾಗಿದೆ.
ಶ್ರೀ ಜೋಸೆಫ್ ಮಥಿಯಸ್ರವರ ಹೆಜ್ಜೆ ಗುರುತು…..
ಸುಂದರ ಕರ್ನಾಟಕದ ಕಡಲ ತೀರದ ಮಂಗಳೂರಿನ ಬಳಿಯಿರುವ ಕುಪ್ಪೆಪದವು ಶ್ರೀ ಲಾರೆನ್ಸ್ ಮಥಿಯಸ್ ಮತ್ತು ಶ್ರೀಮತಿ ಮೇರಿ ಮಥಿಯಸ್ ದಂಪತಿಗಳ ಮಗನಾಗಿ ಜೋಸೆಫ್ ಮಥಿಯಸ್ ಜನಿಸಿದರು. ನಯನ ಮನೋಹರ ಪ್ರಕೃತಿಯ ನಡುವಿನಲ್ಲಿ ಬೆಳೆಯವ ಸಂದರ್ಭದಲ್ಲಿ ಹಕ್ಕಿಗಳ ಚಿಲಿಪಿಲಿ ಗಾನ, ಮನೆಯ ಸುತ್ತಮುತ್ತಲಿನ ಸಾಕುಪ್ರಾಣಿಗಳ ಕೂಗು ಮನಕ್ಕೆ ಮುದನೀಡುವ ಅಂದಿನ ಆ ಸಮಯದಲ್ಲಿ ಪ್ರಾಥಮಿಕ ಹಂತದ ವಿದ್ಯಾರ್ಥಿಯಾಗಿರುವಾಗಲೇ ತಮ್ಮ ತಾಯಿಯವರಿಂದ ಪ್ರಥಮ ಬಾರಿಗೆ ಪದ್ಯ, ಹಾಡುಗಳನ್ನು ಸುಸ್ರಾವ್ಯವಾಗಿ ಹಾಡುವುದನ್ನು ಕಲಿಯುತ್ತಾ ಬೆಳೆದು ಬಂದರು. ಪ್ರೌಢಶಾಲಾ ಹಂತ ಕಾಲೇಜು ಹಂತದವರೆಗೆ ತಮ್ಮ ಕಲಿಯುವಿಕೆಯೊಂದಿಗೆ ತಮ್ಮಲ್ಲಿದ ಗಾಯನ ಪ್ರತಿಭೆಯನ್ನು ಇನ್ನಷ್ಟು ಹೆಚ್ಚಿಸಿಕೊಂಡರು.
ಶಾಲಾ ಹಂತದಲ್ಲಿ ಗಾಯನ ಸ್ಪರ್ಧೆಯಲ್ಲಿ ಬಹುಮಾನಗಳನ್ನು ತಮ್ಮದಾಗಿಸಿಕೋಳ್ಳುತಿದ್ದರು. ಮಂಗಳೂರಿನ ಸೈಂಟ್ ಅಲೋಸಿಯಸ್ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಇವರ ಅಪ್ರತಿಮ ಗಾಯನ ಕಲೆಯನ್ನು ಗುರುತಿಸಿದ ಬೆಂದೂರ್ ಚರ್ಚ್ನ ಗಾಯನ ಮಂಡಳಿ (ಕ್ವಯಾರ್) ಯಲ್ಲಿ ಸದಸ್ಯತ್ವ ನೀಡಿ ಪ್ರೊಫೆಸರ್ ಅಲ್ಬಾನ್ ಕ್ಯಾಸ್ಟಲಿನೋ ಗಾಯನದಲ್ಲಿ ಸಮರ್ಪಕವಾದ ತರಭೇತಿ ನೀಡಿ ಗಾಯನ ಪ್ರತಿಭೆಗೆ ತಕ್ಕ ಪುರಸ್ಕಾರ ದೊರೆಯುವಂತೆ ಅವಕಾಶ ಕಲ್ಪಿಸಿದರು. ನಂತರದ ದಿನಗಳು ಜೋಸೆಫ್ ಮಥಿಯಸ್ ರವರಿಗೆ ಬಹಳ ಅಮೂಲ್ಯ ದಿನಗಳಾದವು. ಇಂಟರ್ ಪ್ಯಾರಿಶ್ ಗಾಯನ ಸ್ಪರ್ಧೆಯಲ್ಲಿ ಜಯಗಳಿಸುತ್ತಾ ಜನಮನದಲ್ಲಿ ತಮ್ಮ ಕಂಠಸಿರಿಯ ಬಗ್ಗೆ ಮೆಚ್ಚುಗೆಯನ್ನು ಪಡೆಯುತ್ತಾ ಪ್ರಸಿದ್ದಿಯನ್ನು ಪಡೆದರು.
ಮೂಡಬಿದರಿ ವಾರಾಡೊದಲ್ಲಿ ನಡೆದ ಗಾಯನ ಸ್ಪರ್ಧೆಯಲ್ಲಿ ಜೋಡಿ ವಿಭಾಗದಲ್ಲಿ ಪ್ರಥಮಸ್ಥಾನ ಪಡೆದರು. ಮಂಗಳೂರು ಕೊಂಕಣ್ ನಾಟಕ ಸಭಾ ಮತ್ತು ಕಲಾ ಸಂಪತ್ ಗಾಯನ ಸ್ಪರ್ಧೆ, ಬೆಂದೂರ್ ಪ್ಯಾರಿಶ್ ಗಾಯನ ಸ್ಪರ್ಧೆಗಳಲ್ಲಿ ತಮ್ಮ ಗಾಯನ ಪ್ರತಿಭೆಗೆ ಸೂಕ್ತ ಪುರಸ್ಕಾರ ದೊರೆಯಿತು.
ಬದುಕಿನ ಬಂಡಿ ಸಾಗಲು ದುಡಿಮೆಗೆ ಒಂದು ವೃತ್ತಿ ಬೇಕಾಗಿತ್ತು. ಕೆಲಸಕ್ಕಾಗಿ ಮುಂಬೈಯತ್ತ ಪಯಣ 1988ರಲ್ಲಿ ಚರ್ಚ್ ಗೇಟ್ ಸರಹದ್ಧಿನಲ್ಲಿ ಶಿಪ್ಪಿಂಗ್ ಕಂಪೆನಿಯಲ್ಲಿ ಕಸ್ಟಮ್ಸ್ ಕ್ಲರ್ಕ್ ಉದ್ಯೋಗ ಐದು ವರ್ಷಗಳ ಕಾಲ ದುಡಿದು ಅಪಾರ ಅನುಭವ ಪಡೆದ ಸಂದರ್ಭದಲ್ಲಿ ಒಂದು ದಿನ ಟೈಮ್ಸ್ ಆಫ್ ಇಂಡಿಯಾದಲ್ಲಿ ಗಲ್ಫ್ ರಾಷ್ಟ್ರದಲ್ಲಿ ಉದ್ಯೋಗಕ್ಕೆ ಸೂಕ್ತ ಅಭ್ಯರ್ಥಿಗಳ ಆಯ್ಕೆಗಾಗಿ ಜಾಹಿರಾತು ನೋಡಿದ ಜೋಸೆಫ್ರವರು ಸಂದರ್ಶನದಲ್ಲಿ ಭಾಗವಹಿಸಿದರು. ತಮ್ಮ ಅನುಭವದ ಆಧಾರದ ಮೇಲೆ ಆಯ್ಕೆಯಾಗಿ ಗಲ್ಫ್ ರಾಷ್ಟ್ರಕ್ಕೆ ಹೋಗುವ ಅವಕಾಶ ದೊರೆಯಿತು.
ಗಲ್ಫಿನತ್ತ ಪಯಣ….
ಹುಟ್ಟೂರಿನಿಂದ… ಮುಂಬೈ…1997 ರಲ್ಲಿ ಮುಂಬಯಿನಿಂದ ಗಲ್ಫ್ನತ್ತ ಪಯಣ ದುಬಾಯಿಯಲ್ಲಿ ಕಸ್ಟಂಸ್ ಕ್ಲರ್ಕ್ ಉದ್ಯೋಗ ದೊರೆಯಿತು ಅತೀ ಶಿಘ್ರದಲ್ಲೆ ಕಂಪೆನಿ ಮುಚ್ಚಿ ಹೋಯಿತು. ನಂತರ ತೆಗೆದುಕೊಂಡ ನಿರ್ಧಾರ ಸ್ವಂತ ಉಧ್ಯಮ ಸ್ಥಾಪಿಸುವುದು. ಸ್ನೇಹಿತರ ಸಹಕಾರ ಪಡೆದು 1997 ರಲ್ಲಿ ಸ್ಥಾಪಿಸಿದ ಸಂಸ್ಥೆ ಮೆರಿಟ್ ಫ್ರೈಟ್ ಸಿಸ್ಟಂಸ್ ಕ್ರಮೇಣ ಅಭಿವೃದ್ಧಿಯತ್ತ ನಡೆದು 2002 ರಲ್ಲಿ ಸ್ವತಂತ್ರ ಉದ್ಯಮಿಯಾದರು.
ಮರಳುನಾಡಿನ ಗಾಯನಲೋಕದಲ್ಲಿ ಹೊರಹೊಮ್ಮಿದ ನಾದಮಾಧುರ್ಯ
20 ದೀರ್ಘ ವರ್ಷಗಳ ನಂತರ ಸ್ವದೇಶದ ಗಾಯನ ಸೇವೆ 2006 ರಿಂದ ವಿದೇಶದ ಮಣ್ಣಿನಲ್ಲಿ ಪ್ರತಿಧ್ವನಿಸ ತೊಡಗಿತು 2008 ರಲ್ಲಿ ದುಬಾಯಿಯಲ್ಲಿ ಕೊಂಕಣಿ ಸಂಘಟನೆ ಆಯೋಜಿಸಿದ ಸಂಗೀತ ಸಂಜೆಯಲ್ಲಿ ಜೊಸೆಫ್ ಮಥಿಯಸ್ ರವರ ಅಪೂರ್ವ ಕಂಠಸಿರಿಗೆ ಕೊಲ್ಲಿನಾಡಿನ ಅಭಿಮಾನಿಗಳು ಮೆಚ್ಚಿಕೊಂಡರು. ಹಲವಾರು ರಸಮಂಜರಿ ಕಾರ್ಯಕ್ರಮಗಳಲ್ಲಿ ಜೋಸೆಫರ ಗಾಯನದ ಚಿತ್ರ ಮೆಚ್ಚುಗೆಯ ಲೇಖನದೊಂದಿಗೆ ಹಲವಾರು ಮಾಧ್ಯಮಗಳಲ್ಲಿ ಪ್ರಕಟವಾಗಿ ಅಭಿನಂದನೆಗಳ ಮಹಾಪೂರವೇ ಹರಿದುಬಂದಿತು.
ಪ್ರಸಿದ್ದ ಇನ್ನೊರ್ವ ಕೊಂಕಣಿ ಗಾಯಕ ಹಾಗೂ ಗೀತೆರಚನಕಾರ ಲ್ಯಾನ್ಸಿ ನೊರೋನ್ಹಾ ರವರ 27 ವರ್ಷದ ಕನಸು ಮೇ 2011 ರಲ್ಲಿ ದುಬಾಯಿಯಲ್ಲಿ ನನಸಾಯಿತು. ಲ್ಯಾನಿ ನೈಟ್ ದುಬಾಯಿಯಲ್ಲಿ ಏಳು ಎಂಟುಬಾರಿ ದುಬಾಯಿ ಮತ್ತು ಮಂಗಳೂರಿನಲ್ಲಿ ಜಯಭೇರಿ ಬಾರಿಸಿದೆ. ಲ್ಯಾನ್ಸಿ ನೊರೋನ್ಹಾ ರವರಿಗೆ ಕಾರ್ಯಕ್ರಮ ಆಯೋಜಿಸುವ ಅವಕಾಶ ಕಲ್ಪಿಸಿ, ಬೆಂಬಲ, ಪ್ರೋತ್ಸಾಹ ನೀಡಿದ ತೃಪಿ ಜೋಸೆಫ್ ರವರ ಒಂದು ಕಿರುನಗುವಿನಲ್ಲಿ P್ಫಣಬಹುದಾಗಿದೆ.
ಜೋಸೆಫ್ ಮಥಿಯಸ್ ರವರು ಭಾಗವಹಿಸಿರುವ ಸಂಗೀತ ಸಂಜೆಗಳಲ್ಲಿ ಪ್ರಮುಖವಾದುದು ಲ್ಯಾನ್ಸಿ ನೈಟ್ ದುಬಾಯಿ – 2006. ಡಾನ್ ಬಾಸ್ಕೊ ಹಾಲ್ ಮಂಗಳೂರು -2011, ಕಿರೆಮ್ ಚರ್ಚ್ ಮೈದಾನ – 2011, ಸೈಂಟ್ ಆಂಥೊನಿ ಅಶ್ರಮ ಮಂಗಳೂರು – 2011, ಜೆ.ಎಸ್.ಎಸ್. ಸ್ಕೂಲ್ ಅಲ್ ಸಫಾ ದುಬಾಯಿ 2013,ಎಮಿರೇಟ್ಸ್ ಇಂಗ್ಲೀಷ್ ಸ್ಪೀಕಿಂಗ್ ಸ್ಕೂಲ್ ದುಬಾಯಿ – 2014 ಹಾಗೂ ವಿಲ್ಸನ್ ಒಲಿವೆರಾ ನೈಟ್ ದುಬಾಯಿ, ಮಂಗಳೂರು, ಕುಂದಾಪುರ, ಸ್ಟಾನ್ ನೈಟ್ – ಡಾನ್ ಬಾಸ್ಕೋ ಹಾಲ್ ಮಂಗಳೂರು 2010, ಸೈಂಟ್ ಅಗ್ನೇಸ್ ಸ್ಪೆಶಲ್ ಸ್ಕೂಲ್ ಮೈದಾನ ಮಂಗಳೂರು- 2012, ಅಲ್ ನಾಸರ್ ಲೀಸರ್ ಲ್ಯಾಂಡ್ 2012, ಲಂಡನ್ ಎ ಹಿಸ್ಟಾರಿಕಲ್ ಮೈಡನ್ ನೈಟ್ – 2013, ಕೊಂಕಣಿ ಸುಪ್ರಸಿದ್ದ ಗಾಯಕ ಹೆನ್ರಿ ಡಿಸೋಜಾ ರೊಂದಿಗೆ ದಾಯಿಜಿ ದುಬಾಯಿ 10ನೇ ವಾರ್ಷಿಕೋತ್ಸವದಲ್ಲಿ – ಮಂಗ್ಳುರ್ ಕೊಂಕಣ್ಸ್ ನಾಟಕ – ದುಬಾಯಿ 2014 ಸುದೀರ್ಘ ವೈವಿದ್ಯಮಯ ರಸಮಂಜರಿಯಲ್ಲಿ ಅಪಾರ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ.
ಜೋಸೆಫ್ ಮಥಿಯಸ್ ರವರು ತಮಗೆ ಅಕಕಾಶ ನೀಡಿರುವ ಸಂಘ ಸಂಸ್ಥೆಗಳಿಗೆ ಸದಾ ಚಿರಋಣಿಯಾಗಿದ್ದಾರೆ. ಅವುಗಳಲ್ಲಿ ಪ್ರಮುಖವಾದುದು ಮಿಲಾಗ್ರಿಯನ್ಸ್, ಫೆರಾರಿಯೆಟ್ಸ್- ಉಡುಪಿ, ಉದೆಂಟಿಚಿ ನೆಕೆಟ್ರ, ಉದ್ಯಾವರೈಟ್ಸ್, ಲಿಟ್ಟ್ಲ್ ಫ್ಲವರ್-ಮುಕಾಮರ್, ಎಮಿರೇಟ್ಸ್ ಪಾಂಗಲೇಟ್ಸ್, ಉಸ್ವಾಸ್ ಶಿರ್ವಾ, ಬೆಳ್ಮನ್ಚಿ ಬೆಕ್ತಾತಿ, ವಾಮಂಜೂರಿಯನ್ಸ್, ಪೆರ್ನಾಲಿಟ್ಸ್, ಬೈಂದೂರಿಯನ್ಸ್ ಮತ್ತು ಸೈಂಟ್ ಮೇರಿಸ್ ಚರ್ಚ್, ಜೆಬೆಲ್ ಆಲಿ ಚರ್ಚ್ ಕ್ಯಾಯಿರ್.
ಬಿಡುಗಡೆಯಾಗಿರುವ ಸಂಗೀತ ಅಲ್ಬಂ ನಲ್ಲಿ ಗಾಯನ
ಹಲವಾರು ಜನಪ್ರಿಯ ಧ್ವನಿ ಸುರುಳಿಯಲ್ಲಿ ತಮ್ಮ ಕಂಠಸಿರಿಯನ್ನು ಮೂಡಿಸಿರುವ “ಮೊಗ ಸಗೊರ್”, ಮೊಗಾಚಿ ಲಾಹ್ರ, ಪನಿ ಪನಿ ಬರ್ಸ, ಕಲಿಜಂತಿ ಬೋಗ್ನಾ, ಆಶಾವಾದಿ, ಹಲೋ ದೇವಾ, ಮೊಗಾ ನಾದ ಮೆಚ್ಚುಗೆ ಪಡೆದಿದೆ.
ಜನಪ್ರಿಯ ಗಾಯಕ, ಗಾಯಕಿಯರ ಜೊತೆಯಲ್ಲಿ ತಮ್ಮ ಕಂಠಸಿರಿಯನ್ನು ಹಂಚಿಕೊಂಡಿದ್ದಾರೆ. ಅವರಲ್ಲಿ ಪ್ರಮುಖರಾದವರು ಲ್ಯಾನ್ಸಿ ನೊರೋನ್ಹಾ, ಅನಿತಾ ಡಿಸೋಜಾ, ಪ್ರೇಮ್ ಕುಮಾರ್, ಡಾ. ಪ್ರಶಾಂತ್ ರಾಜ್, ರೋನಿ ಕ್ರಾಸ್ತಾ, ಪ್ರೀಮಾ ರಾಡ್ರಿಗಸ್, ವಿಲ್ಸನ್ ಒಲಿವೆರಾ, ಸ್ಟಾನಿ ಮೆಂಡೊನ್ಸಾ, ಕ್ಲಾಡ್ ಡಿ’ಸೋಜಾ, ವಿನ್ಸೆಂಟ್ ಫೆರ್ನಾಂಡಿಸ್ ಇವರೆಲ್ಲರೂ ಜೋಸೆಪ್ ಮಥಿಯಸ್ ರವರ ಮೆಚ್ಚಿನ ಗಾಯಕ ಗಾಯಕಿಯರು.
ತಮ್ಮ ಸಂಸ್ಥೆ ಮೆರಿಟ್ ಫ್ರೈಟ್ ಸಿಸ್ಟಂಸ್ ಹಲವಾರು ಉದ್ಯೋಗಿಗಳು ಹಾಗೂ ಹಲವಾರು ಕುಟುಂಬಗಳಿಗೆ ಅನ್ನದಾತರಾಗಿದ್ದಾರೆ. ಜನ್ಮಭೂಮಿಯಲ್ಲಿ ಹಲವಾರು ಕಷ್ಟದಲ್ಲಿ, ನೋವಿನಲ್ಲಿರುವರಿಗೆ ಸದಾ ನೆರವಿನ ಹಸ್ತನೀಡುತ್ತಾ ಎಲ್ಲಿಯೂ ಹೇಳಿಕೊಳ್ಳದ ಮಹಾದಾನಿಯಾಗಿದ್ದಾರೆ. ಗಲ್ಫ್ ನಾಡಿನಲ್ಲಿಯೂ ಸಹ ಸಂಕಷ್ಟದಲ್ಲಿರುವರ ನೆರವಿಗೆ ಸದಾ ಸ್ಪಂದಿಸುತಿರುವ ಜೋಸೆಪ್ ಮಥಿಯಸ್ರವರು ಯು.ಎ.ಇ. ಯಲ್ಲಿ ನಡೆಯುವ ಎಲ್ಲ ಕರ್ನಾಟಕ ಪರ ಸಾಂಸ್ಕೃತಿಕ , ಕ್ರೀಡೆ ಅಥವಾ ಇನ್ನಿತರ ಯಾವುದೇ ಸಮ್ಮೇಳನ ಸಮಾರಂಭಕ್ಕೆ ಸದಾ ಬೆಂಬಲ, ಪ್ರೋತ್ಸಾಹ, ಪ್ರಾಯೋಜಕತ್ವ ನೀಡುತ್ತಾ ಬಂದಿರುವ ಸಾಂಸ್ಕೃತಿಕ ರಾಯಭಾರಿಯಾಗಿದ್ದಾರೆ.
ಸುಮಧುರ ಕಂಠಸಿರಿಯ ಗಾಯಕರಾಗಿ, ಚಲನ ಚಿತ್ರ ನಟರಾಗಿ, ಸಮಾಜ ಸೇವಕರಾಗಿ, ಉಧ್ಯಮಿಯಾಗಿರುವ ಜೋಸೆಪ್ ಮಥಿಯಸ್ ಯಶಸ್ಸಿನ ಹಿಂದಿರುವ ಶಕ್ತಿ ಅವರ ಬಾಳಾಸಂಗಾತಿ ಫ್ಲೆವಿಯಾ ಹಾಗೂ ಮುದ್ದಾದ ಮಕ್ಕಳು ಟಿಶಾ, ಟಿಯನ್ನ ಸದಾ ಚೈತನ್ಯದ ಚಿಲುಮೆಗಳು.
ಅಧ್ವಿತೀಯಾ ಸಾಧನೆ ಮಾಡಿರುವ ಜೋಸೆಪ್ ಮಥಿಯಸ್ ರವರಿಗೆ ಶಾರ್ಜಾ ಕರ್ನಾಟಕ ಸಂಘ ಪ್ರದಾನಿಸಲಿರುವ ಪ್ರತಿಷ್ಠಿತ “ಮಯೂರ ಪ್ರಶಸ್ತಿ” ಸಮಾರಂಭಕ್ಕೆ ಹಾಗೂ ಸನ್ಮಾನಿತರಿಗೆ ಸಮಸ್ಥ ಕರ್ನಾಟಕ, ಭಾರತೀಯರ ಪರವಾಗಿ ಹಾರ್ದಿಕ ಅಭಿನಂದನೆಗಳು.
ಬಿ. ಕೆ. ಗಣೇಶ್ ರೈ – ಯು.ಎ.ಇ.
Comments are closed.