ಶನಿವಾರ ಬಂತೆಂದರೆ ಬಿಗ್‌ಬಾಸ್ ನೋಡುಗರಲ್ಲಿ ಏನೋ ಕಾತುರ…ಆತಂಕ. ಕಿಚ್ಚ ಸುದೀಪ್ ಬಂದು ಬಿಗ್‌ಬಾಸ್ ಮನೆಯಲ್ಲಿರುವವರ ಪೈಕಿ ನಾಮಿನೇಟ್ ಆದವರಲ್ಲಿ ಯಾರೋ ಒಬ್ಬರನ್ನು ಮನೆಯಿಂದ ಆಚೆ ಕಳುಹಿಸುತ್ತಾರೆ ಎನ್ನುವ ಕುತೂಹಲ.
ಮತ್ತೆ ಶನಿವಾರ ಬಂದಿದೆ. ಪ್ರಥಮ್, ಓಂ ಪ್ರಕಾಶ್, ಕಾವ್ಯ ಹಾಗೂ ನಿರಂಜನ್ ನಾಮಿನೇಟ್ ಆದವರ ಲೀಸ್ಟ್ ನಲ್ಲಿದ್ದಾರೆ. ಈವತ್ತು ನಾಮಿನೇಟ್ ಆದವರಲ್ಲಿ ಒಬ್ಬರನ್ನು ಔಟ್ ಮಾಡಲಿದ್ದಾರೆ. ಇವರಲ್ಲಿ ಯಾರು ಹೊರಗೆ ಹೋಗಬಹುದು….?
ಕಾವ್ಯ ಇಲ್ಲವೇ ಓಂಪ್ರಕಾಶ್ ಇಬ್ಬರಿಬ್ಬರಲ್ಲಿ ಒಬ್ಬರು ಔಟ್ ಆಗುದು ಖಚಿತ. ಪ್ರಥಮ್ ಹಾಗು ನಿರಂಜನ್ ಬಿಗ್‌ಬಾಸ್ ಮನೆಯ ಕೇಂದ್ರಬಿಂದು ಆಗಿದ್ದು, ಅವರು ಔಟ್ ಆಗುವ ಸಾಧ್ಯತೆ ಇಲ್ಲ.
ಶಾಲಿನಿ-ಶೀತಲ್ ಮನೆಯಿಂದ ಹೊರಗೆ ಇದ್ದು, ಸೀಕ್ರೆಟ್ ರೂಮಿನಲ್ಲಿ ಮನೆಯಲ್ಲಿನ ಎಲ್ಲ ಆಟಗಳನ್ನು ನೋಡುತ್ತಿದ್ದಾರೆ. ಅವರು ಬಿಗ್‌ಬಾಸ್ ಮನೆ ಸೇರುವ ತವಕದಲ್ಲಿದ್ದಾರೆ. ಇಂದು ಅಥವಾ ನಾಳೆ ಬಿಗ್‌ಬಾಸ್ ಮನೆ ಸೇರಬಹುದು.
Comments are closed.