ಉಡುಪಿ: ಮಣಿಪಾಲ ವಿಶ್ವವಿದ್ಯಾನಿಲಯವು ಆಸ್ಟ್ರೇಲಿಯಾದ ಸಂಶೋಧನೆಯ ಮುಂಚೂಣಿ ಶಿಕ್ಷಣ ಸಂಸ್ಥೆಯಾಗಿರುವ ವೊಲ್ಲೊಂಗಾಂಗ್ ವಿವಿಯೊಂದಿಗೆ ವ್ಯೂಹಾತ್ಮಕ ಪಾಲುದಾರಿಕೆಯ ಒಡಂಬಡಿಕೆ ಮಾಡಿಕೊಂಡಿದೆ. ಈ ಸಂದರ್ಬದಲ್ಲಿ ಆಗಮಿಸಿದ್ದ ಆಸ್ಟ್ರೇಲಿಯಾ ತಂಡದ ಮಾಜಿ ಕಪ್ತಾನ ಗಿಲ್ ಕ್ರಿಸ್ಟ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಮಣಿಪಾಲ ವಿ.ವಿಯ ಮರೇನಾದಲ್ಲಿ ವೊಲ್ಲೊಂಗಾಂಗ್ ವಿ.ವಿಯ ಶೈಕ್ಷಣಿಕ ರಾಯಭಾರಿಯಾಗಿರುವ ಆಸ್ಟ್ರೇಲಿಯಾ ಕ್ರಿಕೆಟ್ ನ ಮಾಜಿ ಓಪನರ್ ಹಾಗೂ ಮಾಜಿ ಕಪ್ತಾನ ಆಡಂ ಗಿಲ್ ಕ್ರಿಸ್ಟ್ ಉಪಸ್ಥಿತಿಯಲ್ಲಿ ಮಣಿಪಾಲ ವಿವಿಯ ವೈಸ್ ಚಾನ್ಸುಲರ್ ವಿನೋದ್ ಭಟ್, ಆಸ್ಟ್ರೇಲಿಯಾ ವಿವಿಯ ವೈಸ್ ಚಾನ್ಸುಲರ್ ಪ್ರೋ. ಪೌಲ್ ವೆಲ್ಲಿಂಗ್ಸ್ ವ್ಯುಹಾತ್ಮಕ ಪಾಲುದಾರಿಕೆಯ ಬಗ್ಗೆ ಒಡಂಬಡಿಕೆಗೆ ಸಹಿ ಹಾಕಿದರು.
ಈ ಒಡಂಬಡಿಕೆಯಿಂದ 2 ವಿ.ವಿಗಳ ವಿದ್ಯಾರ್ಥಿಗಳಿಗೆ ಶ್ರೈಕ್ಷಣಿಕವಾಗಿ ಸಹಕಾರಿಯಾಗಲಿದೆ. ಸಂಯುಕ್ತವಾಗಿ ಸಂಶೋಧನೆ ನಡೆಸಲು, ಅನುದಾನ ಹಂಚಿಕೆ, ಸಮ್ಮೇಳನ, ಕಾರ್ಯಾಗಾರ, ಶೈಕ್ಷನಿಕ ಸಭೆ ಯನ್ನು ನಡೆಸಬಹುದಾಗಿದೆ. ಸಿಬ್ಬಂದಿಗಳಿಗೆ , ತಂತ್ರಜ್ಞರು ಅಥವಾ ಆಡಳಿತಗಾರರಿಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದಾಗಿದೆ ಎಂದು ಈಒಡಂಬಡಿಕೆಯ ಬಗ್ಗೆ ಎರಡೂ ವಿವಿಯ ವೈಸ್ ಚಾನ್ಸುಲರ್ ಗಳು ವಿವರಣೆ ನೀಡಿದರು. ಬಳಿಕ ಗಿಲ್ ಕ್ರಿಸ್ಟ್ ವಿದ್ಯಾರ್ಥಿ ಸಮೂಹದೊಂದಿಗೆ ಸಂವಾದ ನಡೆಸಿದರು.
ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿದ ಅವರು ನನಗೆ ಭಾರತದ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರ ಎಸೆತವನ್ನು ಎದುರಿಸಲು ಕಷ್ಟವಾಗುತ್ತಿತ್ತು. ಇದೀಗ ಆಸ್ಟ್ರೇಲಿಯಾ ತಂಡ ಕಳೆದುಕೊಂಡಿರುವ ಫಾರ್ಮ್ ಮತ್ತೆ ಗಳಿಸಿಕೊಳ್ಳಲಿದೆ ಎಂದರು.
Comments are closed.