ಬೆಂಗಳೂರು: ಬೆಂಗಳೂರಿನಲ್ಲಿ ತಂದೆಯಿಂದಲೇ ಇಬ್ಬರು ಮಕ್ಕಳ ಹತ್ಯೆ ನಡೆದಿದ್ದು, ಹೆತ್ತ ತಂದೆಯೇ ಮಕ್ಕಳು ಕತ್ತು ಹಿಸುಕು ಕೊಲೆ ಮಾಡಿದ್ದಾನೆ.
ಸುಬ್ರಹ್ಮಣ್ಯಪುರದ ಬೀರೇಶ್ವರ ನಗರದಲ್ಲಿ ಈ ಘಟನೆ ನಡೆದಿದ್ದು, ಶಿವಶಂಕರ್ 5, ಆದಿತ್ಯ 4 ಹತ್ಯೆಗೊಳಾಗಾದ ಮಕ್ಕಳಾಗಿದ್ದು, ಸತೀಶ್ ಹತ್ಯೆ ಮಾಡಿದ ಕ್ರೂರ ತಂದೆಯಾಗಿದ್ದಾನೆ.
ಕತ್ತು ಹಿಸುಕಿ ಮಕ್ಕಳನ್ನು ಕೊಲೆ ಮಾಡಿರುವ ಸತೀಶ್, ಮಕ್ಕಳ ಸಾವಿನ ನಂತರ ಸತೀಶ್ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಕೆಲಸ ಮುಗಿಸಿ ತಾಯಿ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.
ಕಲಬುರಗಿ ಮೂಲದ ಸತೀಶ್ ನಗರದಲ್ಲಿ ಪ್ಲಂಬರ್ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಸುಬ್ರಮಣ್ಯಪುರ ಪೊಲೀಸರು ಬೇಟಿ ಪರಿಶೀಲನೆ ನಡೆಸಿದ್ದಾರೆ.
Comments are closed.