ನವದೆಹಲಿ: ಹರಿಯಾಣದಲ್ಲಿ ಲಘು ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.4 ರಷ್ಟು ತೀವ್ರತೆ ದಾಖಲಾಗಿದೆ. ರಾಜಧಾನಿ ನವದೆಹಲಿ ಹಾಗೂ ಗುರಗಾಂವ್ ನಲ್ಲೂ ಭೂಕಂಪನದ ಅನುಭವವಾಗಿದ್ದು, ದೆಹಲಿಯ ಎನ್.ಸಿ.ಆರ್ ನಲ್ಲಿ ಕೆಲವು ಸೆಕೆಂಡ್ ಗಳ ಕಾಲ ಭೂಮಿ ಕಂಪಿಸಿದ ಅನುಭವವಾಗಿದೆ. ಭೂಕಂಪನದಿಂದಾಗಿ ಭಯಭೀತರಾಗಿರುವ ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.
ಹರಿಯಾಣ-ರಾಜಸ್ಥಾನ ರಾಜ್ಯದ ಗಡಿಭಾಗದ ಬಾವಲ್ ನಲ್ಲಿ ಭೂಕಂಪನದ ಕೇಂದ್ರ ಬಿಂದು ಕಂಡುಬಂದಿದೆ. ದೆಹಲಿ, ಘಾಜಿಯಾಬಾದ್, ಗುರಗಾಂವ್ ಸೇರಿದಂದೆ ಇನ್ನಿತರೆ ಪ್ರದೇಶಗಳಲ್ಲಿ ಇಂದು ಬೆಳಗಿನ ಜಾವ 4.30ರ ಸುಮಾರಿಗೆ ಭೂಮಿಕಂಪಿಸಿದ ಅನುಭವವಾಗಿದೆ ಎಂದು ವರದಿಗಳು ತಿಳಿಸಿವೆ.
ಭೂಕಂಪನದಿಂದಾಗಿ ನಷ್ಟ, ಸಾವು-ನೋವುಗಳು ಸಂಭವಿಸಿರುವುದಾಗಿ ಈ ವರೆಯೂ ಯಾವುದೇ ವರದಿಗಳಾಗಿಲ್ಲ.
Comments are closed.