ಕರ್ನಾಟಕ

ಅಧಿಕ ಫ್ಲೋರೈಡ್‌ಯುಕ್ತ ಟೂತ್‌ಪೇಸ್ಟ್‌ನ ಬಳಕೆಯಿಂದ ಅಗುವ ಪ್ರಯೋಜನಗಳು

Pinterest LinkedIn Tumblr

flourid_tooth_pest

ಮಂಗಳೂರು: ಹೆಚ್ಚಿನ ತಂಪು ಪಾನೀಯಗಳು ಆಮ್ಲಿಯವಾಗಿದ್ದು (pH ಮಟ್ಟ 3-4), ಇವುಗಳನ್ನು ಅಧಿಕ ಪ್ರಮಾಣದಲ್ಲಿ ಉಪಯೋಗಿಸಿದಲ್ಲಿ, ಹಲ್ಲುಗಳು ಸವೆಯುವ ಹಾಗೂ ಖನಿಜ ರಹಿತವಾಗುವ ಸಾಧ್ಯತೆಗಳಿವೆ. ಒಂದು ಅಧ್ಯಯನದ ಪ್ರಕಾರ, 11 ರಿಂದ 14 ವಯಸ್ಸಿನ ನಡುವಿನ 57% ಮಕ್ಕಳಿಗೆ ಹಲ್ಲು ಸವೆಯುವ ಸಮಸ್ಯೆ ಇದೆ.

ಅಧಿಕ ಫ್ಲೋರೈಡ್‌ಯುಕ್ತ ಟೂತ್‌ಪೇಸ್ಟ್‌ ಉಪಯೋಗಿಸುವುದರಿಂದ ಪ್ರಯೋಜನ :
ಅಧಿಕ ಫ್ಲೋರೈಡ್‌ಯುಕ್ತ ಟೂತ್‌ಪೇಸ್ಟ್‌ (5000 ppm) ಉಪಯೋಗಿಸುವುದರಿಂದ, ಸುಮಾರು 76%ರಷ್ಟು ಹಲ್ಲಿನ ಸವೆತ ಇರುವ ಹಾಗೂ ರೋಗ ಲಕ್ಷಣ ಇರುವ ಹಲ್ಲುಗಳ ಬೇರುಗಳನ್ನು ಮತ್ತೆ ಗಟ್ಟಿಗೊಳಿಸಬಹುದು. ಇದಕ್ಕೆ ವ್ಯತಿರಿಕ್ತವಾಗಿ, ಕಡಿಮೆ ಪ್ಲೋರೈಡ್‌ ಯುಕ್ತ ಟೂತ್‌ಪೇಸ್ಟ್‌ (1100 ppm) ಉಪಯೋಗಿಸಿದರೆ, ಕೇವಲ 35% ನಷ್ಟು ರೋಗ ಲಕ್ಷಣಗಳು ಮಾತ್ರವೇ ಮರೆಯಾಗಿ, ಹಲ್ಲುಗಳು ದೃಢವಾಗಬಹುದು.ಕ್ಯಾಲ್ಸಿಯಂ ಹೈಡ್ರಾಕ್ಸೆ„ಡ್‌ ಹಾಗೂ ಹಲ್ಲಿನ ಆಳ ಕುಳಿಯನ್ನು ತುಂಬುವುದು

ಹಲ್ಲಿನ ಕೆಲವು ಕುಳಿಗಳು ಬಹಳ ಆಳವಿದ್ದು, ಹಲ್ಲಿನ ಬುಡದ ನರವನ್ನು ತಲುಪಿರುತ್ತವೆ. ಈ ಸಂದರ್ಭಗಳಲ್ಲಿ ರೂಟ್‌ ಕೆನಾಲ್‌ ಚಿಕಿತ್ಸೆ ಆವಶ್ಯಕ. ಆಗ ದಂತವೈದ್ಯರು ಹಲ್ಲಿನ ಸ್ವಲ್ಪ ಭಾಗವನ್ನು ಉಳಿಸಿಕೊಂಡು, ಅದರ ತುದಿಗೆ ಸಣ್ಣದಾದ ಕ್ಯಾಲ್ಸಿಯಂ ಹೈಡ್ರಾಕ್ಸೆ„ಡ್‌ ಟೋಪಿಯನ್ನು ಅಳವಡಿಸಿ, ಮುಚ್ಚುವಂತಹ ಸುರಕ್ಷಾ ವಿಧಾನದ ಮೂಲಕ ಹಲ್ಲನ್ನು ರಕ್ಷಿಸಲು ಪ್ರಯತ್ನಿಸುತ್ತಾರೆ. ಸಾಧಾರಣವಾಗಿ ಇದು ಹಲ್ಲನ್ನು ಉಳಿಸಿಕೊಳ್ಳುವ ಯಶಸ್ವಿ ವಿಧಾನವೆನಿಸಿದೆ. ಸುಮಾರು 14 ಆಧ್ಯಯನಗಳ ಸಮೀಕ್ಷೆಗಳು 90 %ನಷ್ಟು ಪ್ರಮಾಣದಲ್ಲಿ ಈ ಚಿಕಿತ್ಸೆಯು ಯಶಸ್ವಿಯಾಗಿರುವ ಪ್ರಮಾಣವನ್ನು ಒದಗಿಸುತ್ತವೆ.ನಿಮ್ಮ ಹಲ್ಲು ನಿಮ್ಮ ವ್ಯಕ್ತಿತ್ವವನ್ನು ಬಿಂಬಿಸುತ್ತದೆ

ನಗುವು ಮನಸ್ಸಿನ ಕನ್ನಡಿ ಇದ್ದಂತೆ , ಸ್ವಚ ಹಾಗೂ ಸುಂದರ ನಗುವು ಮನಸ್ಸನ್ನು ಅರಳಿಸಿದಂತೆ, ಹಲ್ಲಿನ ವಕ್ರತೆಯು ನಗುವಿನ ಸೌಂದರ್ಯವನ್ನು ಕುಂದಿಸಬಹುದು.

ನೀವು ಹಲ್ಲು ಕಡಿಯುತ್ತಿರುವಿರಾ? ಹಗಲು ಅಥವಾ ರಾತ್ರಿಯ ಹೊತ್ತಿನಲ್ಲಿ ನಿಮಗೆ ಹಲ್ಲು ಕಡಿಯುವ ಆಭ್ಯಾಸವಿದ್ದರೆ, ನಿಮಗೆ ಚಿಕಿತ್ಸೆ ನೀಡಲು ಹಲವಾರು ತಜ್ಞರು ಲಭ್ಯರಿದ್ದಾರೆ. ಹಲವಾರು ರೀತಿಯ ಮಾನಸಿಕ ಕಾಯಿಲೆಗಳು, ಜೀವನ ಶೈಲಿ ಹಾಗೂ ವ್ಯಕ್ತಿತ್ವದ ತೊಂದರೆಗಳು ಹಲ್ಲು ಕಡಿಯುವ ರೂಪದಲ್ಲಿ ಕಾಣಿಸಿಕೊಳ್ಳಬಹುದು.

ಹಲ್ಲು ಗಳು ಸ್ವಚವಾಗಿರಬೇಕಾದುದು ಅತ್ಯಗತ್ಯ .ನಮ್ಮ ಆಂಗಿಕ ಭಾಷೆಯೇ ಬಹಳಷ್ಟು ಸಂದರ್ಭಗಳಲ್ಲಿ ಸಮರ್ಥ ಸಂವಹನದ ಕಾರ್ಯವನ್ನು ನಿಭಾಯಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ . ಹಾಗಾಗಿ, ನಗುವು ಹರಡಿಕೊಳ್ಳಲು ಹಲ್ಲುಗಳು ಆರೋಗ್ಯವಾಗಿರುವುದು ಆವಶ್ಯಕ.

fluoride_toothpaste

ನಿಮ್ಮ ಅಮೂಲ್ಯ ನಗುವಿನ ಸುರಕ್ಷತೆಗಾಗಿ
1.ದಿನಕ್ಕೆ 2 ಸಲ 2 ನಿಮಿಷಗಳವರೆಗೆ ಬ್ರಷ್‌ ಮಾಡಿ…. ನಿಮ್ಮ ಬಾಯಿಯ ಒಳಭಾಗದ ಬಹಳಷ್ಟು ಭಾಗಗಳನ್ನು ಸ್ವತ್ಛಗೊಳಿಸಲು ಕನಿಷ್ಠ ಇಷ್ಟು ಅವಧಿ ಬೇಕೇ ಬೇಕು.

2. ಫ್ಲಾಸ್‌… ಮಾಡದೇ ಇದ್ದರೆ 40% ದಷ್ಟು ಹಲ್ಲಿನ ಭಾಗವು ಸ್ವತ್ಛ ವಾಗಲಿಲ್ಲ ಎಂದರ್ಥ, ನೀವು ಫ್ಲಾಸ್‌ ಮಾಡಲಿಲ್ಲ ಎಂದರೆ, ಹಲ್ಲಿನ ಈ ಸಂದುಗಳಲ್ಲಿ ದಂತಕುಳಿಗಳು ಕಾಣಿಸಿಕೊಳ್ಳುತ್ತವೆ.

3. ನಿಮ್ಮ ನಾಲಗೆಯನ್ನು ಸ್ವತ್ಛ ಗೊಳಿಸಿಕೊಳ್ಳಿ: ಒಂದೆರಡು ಸಲ ನಾಲಗೆಯನ್ನು ತಿಕ್ಕಿ ಸ್ವತ್ಛಗೊಳಿಸಿಕೊಂಡರೆ ಸಾಕು.

4. ಸಿಹಿತಿಂಡಿ /ಚಾಕೋಲೇಟುಗಳನ್ನು ಕಡಿಮೆ ಸೇವಿಸಿ : ಇದರಿಂದ ದಂತಕುಳಿ ಕಡಿಮೆಯಾಗುತ್ತದೆ, ದೇಹದ ತೂಕ ಹಾಗೂ ರಕ್ತದ ಸಕ್ಕರೆ ಪ್ರಮಾಣ ಸುಧಾರಿಸುತ್ತದೆ.

5. ಯಥೇತ್ಛವಾಗಿ ನೀರು ಕುಡಿಯಿರಿ: ವಿಶೇಷವಾಗಿ ಕಾಫಿ, ಟೀ, ವೈನ್‌ ಇತ್ಯಾದಿಗಳನ್ನು ಸೇವಿಸಿದ ಅನಂತರ, ಸಾಕಷ್ಟು ನೀರು ಸೇವಿಸಿ.

6.ಹಲ್ಲುಗಳನ್ನು ಕ್ರಮವಾಗಿ ಕಾಳಜಿ ವಹಿಸಿ,: ಕ್ರಮವಾಗಿ ವೈದ್ಯರನ್ನು ಕಂಡು ದಂತ ಕಿಟ್ಟವನ್ನು ಆಗಾಗ ತೆಗೆದು ಸ್ವಚ್ಚಗೊಳಿಸಿಕೊಳ್ಳುವುದು ನಿಜವಾದ ದಂತ ಆರೈಕೆ . ಮುಂಜಾಗ್ರತೆಯು ಯಾವಾಗಲೂ ಉತ್ತಮ ಆಯ್ಕೆ.
====

Comments are closed.