ನವದೆಹಲಿ: ಪ್ರಮುಖ ಬೆಳವಣಿಗೆಯೊಂದರಲ್ಲಿ ಕೇಂದ್ರ ವಿತ್ತ ಇಲಾಖೆ ಹಣ ವಿನಿಮಯ ನೀತಿಯನ್ನು ಬದಲಾವಣೆ ಮಾಡಿದ್ದು, ಇಷ್ಟು ದಿನ ಇದ್ದ 4, 500 ಸಾವಿರ ಹಣ ಬದಲಾವಣೆ ಮಿತಿಯನ್ನು 2000 ರು.ಗೆ ಕಡಿತಗೊಳಿಸಿದೆ.
ನೂತನ ಮಿನಿಮಯ ನೀತಿಯ ಅನ್ವಯ ವ್ಯಕ್ತಿಯೋರ್ವ ದಿನವೊಂದಕ್ಕೆ ಗರಿಷ್ಠ 2500 ರು. ಮಾತ್ರ ಹಣ ಬದಲಾವಣೆ ಮಾಡಿಕೊಳ್ಳಬಹುದಾಗಿದೆ. ಅದರಂತೆ ಈ ಹಿಂದೆ 4 ಸಾವಿರ ರು. ಹಳೆಯ ನೋಟು ನೀಡಿ ಹೊಸ ನೋಟು ಬದಲಾವಣೆ ಮಾಡಿಕೊಳ್ಳಲಾಗುತ್ತಿತ್ತು. ಇನ್ನು ಆ ಮಿತಿಯನ್ನು 2 ಸಾವಿರ ರು.ಗೆ ಇಳಿಕೆ ಮಾಡಲಾಗಿದೆ. ಇನ್ನು ವಿತ್ ಡ್ರಾ ಮಿತಿಯಲ್ಲೂ ಸಾಕಷ್ಚು ಬದಲಾವಣೆ ಮಾಡಲಾಗಿದ್ದು, ಮದುವೆ ಮತ್ತು ಇತರೆ ಸಮಾರಂಭಗಳ ನಿಮಿತ್ತ ಹಣ ವಿತ್ ಡ್ರಾ ಮಾಡುವ ಕುಟುಂಬ ಗರಿಷ್ಠ 2.5 ಲಕ್ಷ ಹಣವನ್ನು ವಿತ್ ಡ್ರಾ ಮಾಡಬಹುದಾಗಿದೆ. ಆದರೆ ಈ ರೀತಿ ವಿತ್ ಡ್ರಾ ಮಾಡುವ ಖಾತೆ ಕೈವೈಸಿ (ನಿಮ್ಮ ಗ್ರಾಹಕರ ತಿಳಿಯಿರಿ) ಹೊಂದುವುದು ಅನಿವಾರ್ಯ ಎಂದು ವಿತ್ತ ಇಲಾಖೆ ತಿಳಿಸಿದೆ.
ಈ ಬಗ್ಗೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ಅವರು, ದಿನ ನಿತ್ಯದ ಹಣ ಬದಲಾಣೆ ಮಿತಿಯನ್ನು ಕಡಿತಗೊಳಿಸಲಾಗಿದ್ದು, 4500ರು ದಿಂದ 2500ಕ್ಕೆ ಕಡಿತಗೊಳಿಸಲಾಗಿದೆ. ಅಂತೆಯೇ ಕೃಷಿಕನೋರ್ವ ತನ್ನ ಬೆಳೆಗಾಗಿ ಇತರೆ ಕೃಷಿಕ ಚಟುವಟಿಕೆಗಳಿಗಾಗಿ ಒಂದು ವಾರಕ್ಕೆ ಗರಿಷ್ಢ 25000 ರು. ಹಣವನ್ನು ವಿತ್ ಡ್ರಾ ಮಾಡಬಹುದಾಗಿದ್ದು, ಇದು ಬೆಳೆ ಸಾಲಕ್ಕೂ ಅನ್ವಯವಾಗುತ್ತದೆ ಎಂದು ತಿಳಿಸಿದರು. ಈ ರೀತಿ 25000 ರು. ಹಣ ವಿತ್ ಡ್ರಾ ಮಾಡುವ ಖಾತೆ ಕಡ್ಡಾಯವಾಗಿ ರೈತನ ಹೆಸರಿನಲ್ಲಿರಬೇಕು ಎಂದು ಶಕ್ತಿಕಾಂತ್ ದಾಸ್ ಹೇಳಿದ್ದಾರೆ.
ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ ಅವರು 500 ಮತ್ತು 1000 ನೋಟುಗಳನ್ನು ನಿಷೇಧ ಮಾಡಿದ ಬಳಿಕ ಉಂಟಾಗಿರುವ ಆರ್ಥಿಕ ಬಿಕ್ಕಟ್ಟು ಮುಂದುವರೆದಿದ್ದು, ಸತತ 9 ದಿನಗಳೇ ಕಳೆದರೂ ಜನರ ಭವಣೆ ಮಾತ್ರ ನೀಗಿಲ್ಲ. ಇಂದೂ ಕೂಡ ಜನರು ಬ್ಯಾಂಕುಗಳ ಮುಂದೆ ಗಂಟೆಗಟ್ಟಲೆ ಸರತಿ ಸಾಲಲ್ಲಿ ನಿಂತು ಹಣ ಬದಲಾವಣೆ ಮತ್ತು ಹಳೆಯ ನೋಟುಗಳನ್ನು ಠೇವಣಿ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಜನರ ಸಮಸ್ಯೆ ಬಗೆಹರಿಸಲು ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಶಕ್ತಿಕಾಂತ್ ದಾಸ್ ಹೇಳಿದ್ದಾರೆ.
Comments are closed.