ಬೆಂಗಳೂರು: ತರುಣ್ ಸುದೀರ್ ನಿರ್ದೇಶನದ ಚೌಕ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸುತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದ ವಿಷಯ
ಚೌಕ ಚಿತ್ರದ ಲೇಟೇಸ್ಟ್ ವಿಷಯ ಏನು ಎಂದರೇ, ದರ್ಶನ್ ಈ ಸಿನಿಮಾದಲ್ಲಿ ಬಾಹುಬಲಿ ಖ್ಯಾತಿಯ ವಿಲ್ಹನ್ ಕಾಲಕೇಯ ಪಾತ್ರದಲ್ಲಿ ಮಿಂಚಿದ್ದ ಪ್ರಭಾಕರ್ ಜೊತೆ ದರ್ಶನ್ ಫೈಟಿಂಗ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಚೌಕ ಚಿತ್ರದಲ್ಲಿ ಬಹು ದೊಡ್ಡ ಫೈಟಿಂಗ್ ದೃಶ್ಯವಿದೆ. ಹೀಗಾಗಿ ನಾಯಕನಾಗಿ ಸರಿಸಮವಾಗಿರುವ ವಿಲ್ಹನ್ ಬೇಕಿತ್ತು. ಅದಕ್ಕಾಗಿ ಪ್ರಭಾಕರ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಈಗಾಗಲೇ ಪ್ರಭಾಕರ್ ಮತ್ತು ದರ್ಶನ್ ಫೈಟಿಂಗ್ ನ ಎರಡು ದೃಶ್ಯಗಳನ್ನ ಚಿತ್ರೀಕರಿಸಲಾಗಿದೆ.
6.4 ಅಡಿ ಎತ್ತರವಿರುವ ಪ್ರಭಾಕರ್ ಮೊಟ್ಟ ಮೊದಲ ಬಾರಿಗೆ ಸ್ಯಾಂಡಲ್ ವುಡ್ ನಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಬಾಹುಬಲಿ ಸಿನಿಮಾ ಬಿಡುಗಡೆ ನಂತರ ಎಲ್ಲರ ಮನೆಯಲ್ಲೂ ಪ್ರತಿಯೊಬ್ಬ ಮಕ್ಕಳು ಜಿಬರೀಶ್ ಭಾಷೆಯ ಬಗ್ಗೆ ಮಾತನಾಡುತ್ತಿದ್ದರು. ಹೀಗಾಗಿ ನಾನು ನಮ್ಮ ಚಿತ್ರದಲ್ಲಿ ಪ್ರಭಾಕರ್ ಹಾಕಿಕೊಂಡು ಸಿನಿಮಾ ಮಾಡಲು ನಿರ್ಧರಿಸಿದೆವು ಎಂದು ನಿರ್ದೇಶಕ ತರುಣ್ ಸುದೀರ್ ತಿಳಿಸಿದ್ದಾರೆ.
Comments are closed.