ರಾಷ್ಟ್ರೀಯ

ನೋಟುಗಳನ್ನು ಹಿಂಪಡೆಯುವ ನಿರ್ಧಾರವನ್ನು ಮೂರೂ ದಿನಗಳೊಳಗೆ ವಾಪಸ್ ಪಡೆಯಿರಿ ಅಥವಾ ಸಾಮಾನ್ಯರ ಪ್ರತಿಭಟನೆಯನ್ನು ಎದುರಿಸಿ: ಕೇಜ್ರಿವಾಲ್ ಎಚ್ಚರಿಕೆ

Pinterest LinkedIn Tumblr

modi-kejri

ನವದೆಹಲಿ: ೫೦೦ ಮತ್ತು ೧೦೦೦ ರೂ ನೋಟುಗಳನ್ನು ಹಿಂಪಡೆಯುವ ನಿರ್ಧಾರವನ್ನು ಮೂರೂ ದಿನಗಳೊಳಗೆ ವಾಪಸ್ ಪಡೆಯಿರಿ ಅಥವಾ ಸಾಮಾನ್ಯರ ಪ್ರತಿಭಟನೆಯನ್ನು ಎದುರಿಸಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುರುವಾರ ಕೇಂದ್ರ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗೆ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ನೋಟು ಹಿಂಪಡೆತ ನಿರ್ಧಾರ ದೇಶದಾದ್ಯಂತ ನಗದು ಅರಾಜಕತೆ ಉಂಟುಮಾಡಿದೆ ಎಂದು ಅವರು ಹೇಳಿದ್ದಾರೆ.

“ನೀವು ಜನರನ್ನು ಮೂರ್ಖರೆಂದು ತಿಳಿದಿದ್ದೀರಾ?” ಎಂದು ಕೇಳಿರುವ ಅವರು “ನಮ್ಮನ್ನು ಮೂರ್ಖರನ್ನಾಗಿಸಬೇಡಿ. ಸರತಿ ಸಾಲುಗಳಲ್ಲಿ (ಎಟಿಎಂಗಳ ಎದುರು) ನಿಲ್ಲುವುದು ರಾಷ್ಟ್ರಪ್ರೇಮ ಎಂದು ಹೇಳಬೇಡಿ.

“ನಿಮ್ಮ ನಿರ್ಧಾರವನ್ನು ಮೂರು ದಿನಗಳಲ್ಲಿ ಹಿಂಪಡೆದುಕೊಳ್ಳಿ… ಜನರ ತಾಳ್ಮೆಯನ್ನು ಪರೀಕ್ಷಿಸಬೇಡಿ. ಇಲ್ಲದೆ ಹೋದರೆ ಜನ ತಿರುಗಿ ಬೀಳಲಿದ್ದಾರೆ” ಎಂದು ಅವರು ಹೇಳಿದ್ದಾರೆ.

ಈ ನಿರ್ಧಾರದಿಂದ ಅನಾನುಕೂಲತೆಗೆ ಒಳಗಾಗಿ ಇಲ್ಲಿಯವರೆಗೂ ೪೦ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿರುವುದಕ್ಕೆ ಕೂಡ ಅವರು ಕೇಂದ್ರ ಸರ್ಕಾರವನ್ನು ದೂಷಿಸಿದ್ದಾರೆ.

“ಈ ೪೦ ಸಾವುಗಳಿಗೆ ಯಾರು ಜವಾಬ್ದಾರಿ?” ಎಂದು ಅವರು ಕೇಳಿದ್ದಾರೆ.
ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಭ್ರಷ್ಟಾಚಾರ ಆರೋಪವನ್ನು ಕೂಡ ಕೇಜ್ರಿವಾಲ್ ಮಾಡಿದ್ದಾರೆ. ಮೋದಿ ಪ್ರಾಮಾಣಿಕ ಎಂದು ನಾನು ಕೂಡ ನಂಬುತ್ತಿದ್ದ ಕಾಲವೊಂದಿತ್ತು. ಈಗ ತೆರಿಗೆ ಅಧಿಕಾರಿಗಳು ಎರಡು ಕಾರ್ಪೊರೇಟ್ ಸಂಸ್ಥೆಗಳ ಮೇಲೆ ದಾಳಿ ಮಾಡಿ ವಶಪಡಿಸಿಕೊಂಡಿರುವ ದಾಖಲೆಗಳಲ್ಲಿ ಮೋದಿ ಅವರು ಗುಜರಾತ್ ನ ಮುಖ್ಯಮಂತ್ರಿಯಾಗಿದ್ದಾಗ ಲಂಚ ತೆಗೆದುಕೊಂಡಿರುವ ಸ್ಪಷ್ಟ ಮಾಹಿತಿಯಿದೆ ಎಂದಿದ್ದಾರೆ.

ಕಾರ್ಪೊರೇಟ್ ಸಂಸ್ಥೆಗಳಿಗೆ ಸಾರ್ವಜನಿಕ ಕ್ಷೇತ್ರದ ಬ್ಯಾಂಕ್ ಗಳು ನೀಡಿದ ಸಾಲಾ ಮನ್ನಾ ಮಾಡಿ ಜನರಿಂದ ೧೦ ಲಕ್ಷ ಕೋಟಿ ಸಂಗ್ರಹಿಸುವ ಕೇಂದ್ರ ಸರ್ಕಾರದ ಕ್ರಮವನ್ನು ಕೇಜ್ರಿವಾಲ್ ಖಂಡಿಸಿದ್ದಾರೆ.

Comments are closed.