ನವದೆಹಲಿ: ವಿಶ್ವದ ಅತ್ಯಂತ ಸುರಸುಂದರ ಪುರುಷರ ಪಟ್ಟಿಯಲ್ಲಿ ‘ಗ್ರೀಕ್ ಗಾಢ್ ಆಫ್ ಬಾಲಿವುಡ್’ ಖ್ಯಾತಿಯ ನಟ ಹೃತಿಕ್ ರೋಷನ್ ಅವರಿಗೆ ಮೂರನೇ ಸ್ಥಾನ ಸಿಕ್ಕಿದೆ.
ವರ್ಲ್ಡ್ಸ್ ಟಾಪ್ ಮೋಸ್ಟ್ .ಕಾಂ ವೆಬ್ ಸೈಟ್ ನಡೆಸಿದ್ದ ಆನ್ ಲೈನ್ ವೋಟಿಂಗ್ ನಲ್ಲಿ ಹೃತಿಕ್ ಈ ಹಿರಿಮೆಗೆ ಪಾತ್ರವಾಗಿದ್ದಾರೆ. ಪಟ್ಟಿಯಲ್ಲಿ ಮೊದಲೆರಡು ಸ್ಥಾನವನ್ನು ಕ್ರಮವಾಗಿ ಟಾಮ್ ಕ್ರೂಸ್, ರಾಬರ್ಟ್ ಪ್ಯಾಟಿನ್ಷನ್ ಪಾಲಾಗಿದೆ. ನಟ ಸಲ್ಮಾನ್ ಖಾನ್ ಕೂಡ 7ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಜಾನಿ ಡೆಪ್, ಬ್ರಾಡ್ ಪಿಟ್ ರಂಥ ಸ್ಫುರದ್ರೂಪಿ ಹಾಲಿವುಡ್ ತಾರೆಯರನ್ನೂ ಹಿಂದಿಕ್ಕಿರುವ ಹೃತಿಕ್ ಈ ಅಗ್ರ ಪಟ್ಟಿಯಲ್ಲಿರುವ ಏಕೈಕ ಬಾಲಿವುಡ್ಡಿಗನಾಗಿದ್ದಾರೆ. ಕಳೆದ ವರ್ಷ ಬ್ರಾಡ್ ಪಿಟ್ ಹೆಚ್ಚು ಮತಗಳನ್ನು ಹೊಂದಿ, ಮುಂಚೂಣಿಯಲ್ಲಿದ್ದರು. ಆದರೆ, ಈ ಬಾರಿ ಖಾಸಗಿ ಬದುಕಿನ ರಂಪಾಟಗಳಲ್ಲಿ ಸಿಲುಕಿರುವ ಪಿಟ್ ಅಪಾರ ಅಭಿಮಾನಿಗಳನ್ನು ಕಳೆದುಕೊಂಡಿದ್ದಾರೆ ಎಂದು ವೆಬ್ ಸೈಟ್ ತನ್ನ ವರದಿಯಲ್ಲಿ ತಿಳಿಸಿದೆ.
Comments are closed.