ಬೆಂಗಳೂರು(ಡಿ.4): ಆರಕ್ಷಕರೆ ದರೋಡೆ ಮಾಡಿದ ಘಟನೆ ಗಿರಿನಗರದಲ್ಲಿ ನಡೆದಿದೆ. ಗಿರಿನಗರ ಪೊಲೀಸ್ ಪೇದೆಗಳಾದ ರಘು ಮತ್ತು ಮಯೂರ್ 2 ದಿನಗಳ ಹಿಂದೆ ಗಿರಿನಗರದ ಸೀತಾ ಸರ್ಕಲ್ ಬಳಿ ವಾಹನ ತಪಾಸಣೆ ಮಾಡುವ ನೆಪದಲ್ಲಿ ವಕೀಲೆ ಸುಕನ್ಯಾ ಎಂಬ ಮಹಿಳೆಯಿಂದ 8 ಲಕ್ಷರೂ. ದರೋಡೆ ಮಾಡಿದ್ದರು.
ಸುಕನ್ಯ ಸ್ನೇಹಿತನಿಗೆ ಹಣ ನೀಡಲು ಹೊರಟಿದ್ದರು. ಈ ಬಗ್ಗೆ ಸುಕನ್ಯ ಅವರು ಡಿಸಿಪಿ ಅವರಿಗೆ ದೂರು ನೀಡಿದ್ದರು. ಘಟನೆಯ ನಂತರ ದಕ್ಷಿಣ ವಿಭಾಗದ ಡಿಸಿಪಿ ಶರಣಪ್ಪ ಈ ಇಬ್ಬರು ಪೇದೆಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ದರೋಡೆ ಮಾಡಿದ ನೋಟುಗಳೆಲ್ಲವೂ ಹಳೆಯ ನೋಟುಗಳಾಗಿದ್ದವು.
Comments are closed.