ನವದೆಹಲಿ: 500, 1000 ರೂ ಮುಖಬೆಲೆಯ ನೋಟು ನಿಷೇಧದ ಪರಿಣಾಮವನ್ನು ಜನರು ಇನ್ನೂ ಎದುರಿಸುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಎಂಬುವಂತೆ ಎಟಿಎಂ ಮುಂಭಾಗದಲ್ಲಿದ್ದ ’ನೋ ಕ್ಯಾಷ್’ ಫಲಕವನ್ನು ನೋಡಿ ಬೇಸತ್ತ ಜನರು ಎಟಿಎಂಗೆ ಪೂಜೆ ಮಾಡಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ.
ನಗದು ಇಲ್ಲ ಎಂಬ ಫಲಕವನ್ನು ಗಮನಿಸಿರುವ ಸಾರ್ವಜನಿಕರು ನಗದು ನೀಡುವಂತೆ ಪ್ರಾರ್ಥಿಸಿ ಎಟಿಎಂ ಗೆ ಪೂಜೆ ಸಲ್ಲಿಸಿದ್ದಾರೆ. ” ನೋಟು ನಿಷೇಧದ ನಿರ್ಧಾರ ಘೋಷಣೆಯಾದಾಗಿನಿಂದಲೂ ದೆಹಲಿಯ ಜಗತ್ ಪುರಿ ಪ್ರದೇಶದಲ್ಲಿರುವ ಎಸ್ ಬಿಐ ನ ಎಟಿಎಂ ನಲ್ಲಿ ಹಣ ದೊರೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ಎಟಿಎಂ ಗೆ ತೆರಳಿ ಪೂಜೆ ಮಾಡುವ ಮೂಲಕ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನರ ಸಂಕಷ್ಟಗಳನ್ನು ಎತ್ತಿ ತೋರಿಸಲು ಎಟಿಎಂ ಗೆ ಪೂಜೆ ಸಲ್ಲಿಸಲಾಗಿದೆ ಶೀಘ್ರವೇ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
Comments are closed.