ಬೆಂಗಳೂರು: 20 ವರ್ಷದ ನವ ವಿವಾಹಿತೆ ತನ್ನ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಮಾಕ್ಷಿಪಾಳ್ಯದಲ್ಲಿ ನಡೆದಿದೆ. ಕುಟುಂಬ ಕಲಹವೇ ಆತ್ಮಹತ್ಯೆಗೆ ಕಾರಣ ಎಂದು ಹೇಳಲಾಗುತ್ತಿದೆ.
ಮೃತಪಟ್ಟ ಮಹಿಳೆಯನ್ನು ಕಾವ್ಯಾ ಎಂದು ಗುರುತಿಸಲಾಗಿದ್ದು, ಕೋಲಾರದ ಸಮತ್ ಕುಮಾರ್ ಎಂಬುವವರನ್ನು ಮದುವೆಯಾಗಿದ್ದಳು.
ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ನವೆಂಬರ್ 30ರಂದು ಕಾವ್ಯಾ ತನ್ನ ತಾಯಿ ಮನೆಗೆ ಬಂದಿದ್ದಳು. ತನ್ನ ಪೋಷಕರ ಬಳಿ ಗಂಡನ ಜತೆ ನಡೆಯುತ್ತಿರುವ ಜಗಳದ ಬಗ್ಗೆ ವಿವರಿಸಿದ್ದಳು. ಕೋಲಾರಕ್ಕೆ ಮತ್ತೆ ಹೋಗುವುದಿಲ್ಲ ಎಂದು ಹೇಳಿದ್ದಳು. ಈ ಘಟನೆಯಿಂದ ಬೇಸತ್ತು ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ನೇಣು ಬಿಗಿದ ಸ್ಥಿತಿಯಲ್ಲಿದ್ದುದನ್ನು ಕಂಡ ಪೋಷಕರು ಪೊಲೀಸರಿಗೆ ತಿಳಿಸಿದರು. ಪೋಷಕರ ದೂರಿಗೆ ಮೇರೆಗೆ ಪೊಲೀಸರು ಕಾವ್ಯಾಳ ಪತಿ ಮತ್ತು ಮನೆಯವರನ್ನು ತನಿಖೆ ನಡೆಸಿದ್ದಾರೆ.
ಕರ್ನಾಟಕ
Comments are closed.