ಮುಂಬೈ (ಡಿ.06): ಎರಡೂ ಬದಿಯ ಬದಲಾವಣೆಯೊಂದಿಗೆ 100 ರೂ ಮುಖಬೆಲೆಯ ಹೊಸ ನೋಟನ್ನು ಶೀಘ್ರದಲ್ಲಿಯೇ ಆರ್ ಬಿಐ ಬಿಡುಗಡೆ ಮಾಡಲಿದೆ.
ಮಹಾತ್ಮ ಗಾಂಧೀಜಿ ಸರಣಿ-2005 ರ ಅಡಿಯಲ್ಲಿ ನೋಟುಗಳನ್ನು ಮುದ್ರಿಸಿದ್ದು ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಸಹಿ ಇರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹಳೆಯ ನೋಟುಗಳು ಎಂದಿನಂತೆ ಚಲಾವಣೆಯಲ್ಲಿರುತ್ತದೆ.
ಈ ನೋಟುಗಳಲ್ಲಿ ಸಂಖ್ಯೆಗಳ ಗಾತ್ರ ಏರಿಕೆ ಕ್ರಮದಲ್ಲಿದ್ದು, ಗುರುತಿನ ಚಿಹ್ನೆಯನ್ನು ವಿಸ್ತರಿಸಲಾಗಿರುತ್ತದೆ. ಬ್ಲೀಡ್ ಲೈನ್ ಗಳು ಹಾಗೂ ಗುರುತಿನ ಚಿಹ್ನೆಗಳನ್ನು ವಿಸ್ತರಣೆ ಮಾಡದಿರುವ ಕೆಲವು ನೋಟುಗಳನ್ನು ಸಹ ಆರ್ ಬಿಐ ಬಿಡುಗಡೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.
Comments are closed.