ರಾಷ್ಟ್ರೀಯ

ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ 24 ವರ್ಷ

Pinterest LinkedIn Tumblr

Babari maseediಲಖನೌ: ಇಂದು ಅಯೋಧ್ಯೆಯ ಬಾಬ್ರಿ ಮಸೀದಿ ಧ್ವಂಸದ ದುರಂತ ೨೪ನೇ ವರ್ಷಕ್ಕೆ ಕಾಲಿಟ್ಟಿದೆ. ಅಲ್ಲಿ ರಾಮ ದೇವಾಲಯ ಕಟ್ಟಬೇಕು ಎನ್ನುತ್ತಿರುವ ವರ್ಗ, ಬಾಬ್ರಿ ಮಸೀದಿ ಧ್ವಂಸವನ್ನು ವಿರೋಧಿಸಿದ ವರ್ಗ, ಎರಡು ಪಕ್ಷಗಳು ತಮ್ಮ ಪರವಾದ ಸುಪ್ರೀಂ ಕೋರ್ಟ್ ತೀರ್ಪಿಗೆ ಕಾದು ಕುಳಿತಿವೆ
ಮಸೀದಿಯ ಧ್ವಂಸದ ನಂತರ ಸರ್ಕಾರ ರಚಿಸಿದ ಸಮಾಜವಾದಿ ಪಕ್ಷ ಈ ಘಟನೆಯನ್ನು “ನೋವಿನ ನೆನಪುಗಳು” ಎಂದು ಹೇಳಿದ್ದು, ಪ್ರಜಾಪ್ರಭುತ್ವ ಸಂವಿಧಾನದ ನಿಯಮಗಳನ್ನು ಎತ್ತಿಹಿಡಿಯುವ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡುವ ಭರವಸೆಯಲ್ಲಿದ್ದೇವೆ ಎಂದಿದೆ.
“ಉತ್ತರ ಪ್ರದೇಶದ ಅತಿ ನೋವಿನ ನೆನಪುಗಳು ಅವು. ಉತ್ತರ ಪ್ರದೇಶದ ಸಾಮಾಜಿಕ ಸೌಹಾರ್ದತೆ ಕೆಟ್ಟುಹೋದ ಸಮಯ ಅದು. ನಾವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಸದ್ಯಕ್ಕೆ ಈ ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿದೆ, ಮತ್ತು ಶೀಘ್ರವೇ ತೀರ್ಪು ಬರಲಿದೆ ಎಂದು ನಂಬಿದ್ದೇವೆ. ನಾವು ಕಾನೂನು ಸುವ್ಯವಸ್ಥೆ ಕಾಪಾಡಲಿದ್ದೇವೆ. ನಾವು ಮತ್ತು ಉತ್ತರ ಪ್ರದೇಶದ ಜನತೆ ಇದು ಕಪ್ಪು ಚುಕ್ಕೆ ಎಂದು ನಂಬಿದ್ದೇವೆ” ಎಂದು ಸಮಾಜವಾದಿ ಪಕ್ಷದ ಮುಖಂಡ ಜೂಹಿ ಸಿಂಗ್ ಹೇಳಿದ್ದಾರೆ.
ವಿಶ್ವ ಹಿಂದೂ ಪರಿಷದ್ ಸಂಸ್ಥೆಯ ಜೊತೆಗೆ ಬಾಬ್ರಿ ಮಸೀದಿ ಧ್ವಂಸ ಅಭಿಯಾನದಲ್ಲಿ ಮುಂಚೂಣಿಯಲ್ಲಿದ್ದ ಬಿಜೆಪಿ ಪಕ್ಷ, ಭಾರತೀಯ ಪುರಾತತ್ವ ಇಲಾಖೆಯ (ಎ ಎಸ್ ಐ) ಸಂಶೋಧನೆಯನ್ನು ಸುಪ್ರೀಂ ಕೋರ್ಟ್ ಪರಿಗಣಿಸುತ್ತದೆ ಎಂದು ನಂಬಿದ್ದೇವೆ ಎಂದಿದ್ದಾರೆ.
“ಈ ದಿನವನ್ನು ಕರಾಳ ದಿನವಾಗಿ ಗಮನಿಸುತ್ತಿರುವವಾರ ಬಗ್ಗೆ ನಮ್ಮ ಆಕ್ಷೇಪವೇನಿಲ್ಲ, ಏಕೆಂದರೆ ನಾವು ಪ್ರಜಾಪ್ರಭುತ್ವದಲ್ಲಿ ಬದುಕುತ್ತಿದ್ದೇವೆ ಮತ್ತು ಎಲ್ಲರಿಗು ಅಭಿವ್ಯಕ್ತಿಸುವ ಸ್ವಾತಂತ್ರ್ಯ ಇದೆ. ಆದರೆ ಎ ಎಸ್ ಐ ನಂತಹ ನಿಖರವಾದ ಸರ್ವೇ ಸಂಸ್ಥೆಗಳು ನಮ್ಮ ವಾದವನ್ನು ಬೆಂಬಲಿಸಿವೆ. ಈಗ ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿರುವುದರಿಂದ ಇದರ ಬಗ್ಗೆ ನಾವು ಮುಂದೆ ಪ್ರತಿಕ್ರಿಯಿಸುವುದಿಲ್ಲ” ಎಂದು ಬಿಜೆಪಿ ಮುಖಂಡ ಹರದೇವ್ ನಾರಾಯಣ್ ಹೇಳಿದ್ದಾರೆ.
ಈ ದಿನ ಉತ್ತರಪ್ರದೇಶ ಸರ್ಕಾರ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಿದೆ. ನಾಳೆ ವಿ ಎಚ್ ಪಿ, ಕರಸೇವಕರ ಕಾರ್ಯಕ್ರಮ ಹಮ್ಮಿಕೊಂಡಿದೆ.
೬ ನವೆಂಬರ್ ೧೯೯೨ ರಂದು ಬಿಜೆಪಿ ಮತ್ತು ವಿ ಎಚ್ ಪಿ ಜಂಟಿಯಾಗಿ ಆಯೋಜಿಸಿದ್ದ ರ್ಯಾಲಿಯಲ್ಲಿ ೧,೫೦,೦೦೦ ಕ್ಕೂ ಹೆಚ್ಚು ಕರಸೇವಕರು ನೆರೆದು, ಮಸೀದಿಯನ್ನು ಕೆಡವಿ ಹಿಂಸೆಯ ವಾತಾವರಣ ನಿರ್ಮಿಸಿದ್ದರು. ನಂತರ ನಡೆದ ತನಿಖೆಯಲ್ಲಿ ಬಿಜೆಪಿ ಮತ್ತು ವಿ ಎಚ್ ಪಿ ಸಂಸ್ಥೆಯ ೬೮ ಜನರು ಈ ಧ್ವಂಸಕ್ಕೆ ಕಾರಣ ಎಂದು ಸಾಬೀತಾಗಿತ್ತು.
ಸೆಪ್ಟೆಂಬರ್ ೩೦,೨೦೧೦ ರಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪಿನಲ್ಲಿ ಈ ವಿವಾದಾತ್ಮಕ ಪ್ರದೇಶದ ಮೂರನೇ ಎರಡು ಭಾಗವನ್ನು ಹಿಂದೂ ಜನಾಂಗದ ಆಚರಣೆಗೆ ನೀಡಲಾಗಿತ್ತು. ಈಗ ಈ ಪ್ರಕರಣ ಅಪೆಕ್ಸ್ ನ್ಯಾಯಾಲಯದಲ್ಲಿ ಮುಂದುವರೆದಿದೆ.

Comments are closed.