ಮುಂಬೈ: ಹಿರಿಯ ಚಿತ್ರ ನಟ ದಿಲೀಪ್ ಕುಮಾರ್ ಅವರು ಅನಾರೋಗ್ಯ ಎದುರಿಸುತ್ತಿದ್ದು ಡಿ.7 ರಂದು ಮುಂಬೈ ನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಲಗಾಲು ಊತ ಕಂಡು ಬಂದಿದ್ದು ಡಿ.7 ರಂದು ಬೆಳಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ದಿಲೀಪ್ ಕುಮಾರ್ ಪತ್ನಿ ಸಾಯಿರಾ ಬಾನು ಅವರ ಮ್ಯಾನೇಜರ್ ಮಾಹಿತಿ ನೀಡಿದ್ದಾರೆ. 94 ವರ್ಷ ವಯಸ್ಸಿನ ದಿಲೀಪ್ ಕುಮಾರ್ ಅವರ ಆರೋಗ್ಯದ ಬಗ್ಗೆ ನಿಗಾ ವಹಿಸಲಾಗಿದ್ದು, 1998 ರಲ್ಲಿ ಕಿಲಾ ಚಿತ್ರದಲ್ಲಿ ಕೊನೆಯ ಬಾರಿ ನಟಿಸಿದ್ದರು.
ಅತ್ಯುತ್ತಮ ನಟನೆಗಾಗಿ ದಿಲೀಪ್ ಕುಮಾರ್ ಗೆ 1994 ರಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ 2015 ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
Comments are closed.