ಮಂಗಳೂರು : ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನದಲ್ಲಿ ತೊಡಗಿದ್ದ ಇಬ್ಬರು ಅಂತಾರಾಜ್ಯ ಸರಗಳ್ಳಿಯರನ್ನು ಬಂಧಿಸಿರುವ ಮೂಲ್ಕಿ ಪೊಲೀಸರು ಬಂಧಿತರಿಂದ ಸುಮಾರು ರೂ.2,50,000 ಮೌಲ್ಯದ ಚಿನ್ನದ ಸರಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಸರಗಳ್ಳಿಯರನ್ನು ತಮಿಳುನಾಡು ಮೂಲದ ಮಾರಿಮುತ್ತು (38) ಕುಮಾರಿ ನಂದಿನಿ (20) ಎಂದು ಗುರುತಿಸಲಾಗಿದೆ.
ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಾದ ಪಾವಂಜೆ ಜ್ಞಾನ ಶಕ್ತಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಎಂಬಲ್ಲಿ ದಿನಾಂಕ 05-12-2016 ರಂದು ನಡೆದ ವರ್ಷಾವದಿ ಚಂಪಾ ಷಷ್ಟಿ ಮಹೋತ್ಸವದಲ್ಲಿ ಭಾಗವಹಿಸಿದ ಭಕ್ತಾಧಿಗಳ ಚಿನ್ನದ ಸರಗಳನ್ನು ಸುಲಿಗೆ ಮಾಡುತ್ತಿದ್ದ ಸಂದರ್ಭದಲ್ಲಿ ಈ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರಿಂದ ಪಾವಂಜೆ ದೇವಸ್ಥಾನದಲ್ಲಿ ಸುಲಿಗೆ ಮಾಡಿದ ನಾಲ್ಕು ಪ್ರಕರಣಗಳನ್ನು ಪತ್ತೆ ಹಚ್ಚಿ ಸುಲಿಗೆ ಮಾಡಿದ ಸುಮಾರು ರೂ.2,50,000/- ಮೌಲ್ಯದ (98 ಗ್ರಾಂ) ನಾಲ್ಕು ಚಿನ್ನದ ಸರಗಳನ್ನು ವಶಪಡಿಸಿಕೊಳ್ಳಲಾಗಿದೆ..
ಬಂಧಿತ ಇಬ್ಬರನ್ನು ಸಹ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಮುಲ್ಕಿ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಅನಂತಪಧ್ಮನಾಭ, ಪಿ.ಎಸ್.ಐ ಚಂದ್ರಶೇಖರಯ್ಯ, ಸಾಂತಪ್ಪ. ಆರ್, ಪ್ರೋಬೆಷನರಿ ಪಿ.ಎಸ್.ಐ ಮಾರುತಿ ಮತ್ತು ಸಿಬ್ಬಂದಿಗಳಾದ ಉಮೇಶ, ಬಸವರಾಜ, ರಾಜೇಶ್, ಅಣ್ಣಪ್ಪ, ಶ್ರೀಮತಿ ಜೋಯ್ಸ್ ಡಿ’ಸೋಜ, ಶ್ರೀಮತಿ ಗೀತಾ.ಸಾಲ್ಯಾನ್, ಶ್ರೀಮತಿ ಅಕ್ಷಯ, ಕು| ವಿಜಯ ಲಮಾಣಿ ಮತ್ತು ಹೋಮ್ಗಾಡರ್್ ಕು| ಸುಪ್ರಿತಾರವರು ಪತ್ತೆ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.
Comments are closed.